ಸೌತ್ ಸ್ಕೋಪ್ ಸ್ಟೈಲಿಶ್ ಅವಾರ್ಡ್ಸ್ - ೨೦೦೯
Posted date: 28/October/2009

ಮುತ್ತಿನ ನಗರಿ ಹೈದರಾಬಾದ್‌ನಲ್ಲಿ ಭಾನುವಾರ ಸಂಜೆ ನಡೆದ ಸುಂದರ ಸಮಾರಂಭದಲ್ಲಿ ಇದೆ ಪ್ರಥಮ ಬಾರಿಗೆ ದಕ್ಷಿಣ ಭಾರತದ ನಾಲ್ಕು ಬಾಷೆಯ ಚಿತ್ರಗಳಿಗೆ ಸೌತ್ ಸ್ಕೋಪ್ ಸಂಸ್ಥೆಯು ಸ್ಟೈಲಿಶ್ ಅವಾರ್ಡ್ಸ್ ಎಂಬ ವಿನೂತನ ಶೈಲಿಯ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕನ್ನಡ ಚಿತ್ರಗಳಿಗೆ ಆರು ವಿಭಾಗಗಳಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ವಂಶಿ ಮತ್ತು ರಾಜ್ ಚಿತ್ರದ ಸ್ಟೈಲಿಶ್ ಅಭಿನಯಕ್ಕಾಗಿ ಪುನಿತ್ ರಾಜ್‌ಕುಮಾರ್‌ರವರಿಗೆ ಲಭಿಸಿತ್ತಿದರು. ಮೈಸೂರಿನಲ್ಲಿ ಪೃಥ್ವಿ ಚಿತ್ರ ಚಿತ್ರಿಕರಣದಲ್ಲಿ ಪಾಲ್ಗೊಂಡಿದ್ದರಿಂದ ಸ್ವಿಕರಿಸಲು ಸಾದ್ಯವಾಗದೆ. ಅವರ ಪರವಾಗಿ ಕೋ ಆಡೀನೆಟರ್ ಶಿವು ಅವರು ಸ್ವಿಕರಿಸಿದರು. ಆದೇ ರೀತಿ ಗಾಳಿಪಟ ಚಿತ್ರಕ್ಕೆ ಸ್ಟೈಲಿಶ್ ಚಿತ್ರ ಎಂದು ಯೋಗರಾಜ್ ಭಟ್ ಅವರಿಗೆ ಮತ್ತು ಸ್ಟೈಲಿಶ್ ಮ್ಯೂಸಿಕ್ ಮನೋಮೂರ್ತಿಯವರಿಗೆ ಕೃಷ್ಣ ಮತ್ತು ಸಜನಿ ಚಿತ್ರದ ಸ್ಟೈಲಿಶ್ ಅಭಿನಯಕ್ಕಾಗಿ ಶರ್ಮಿಳ ಮಾಂಡ್ರೆ, ಗಜ ಚಿತ್ರದ ಸಾಹಸ ಸಂಯೋಜನೆಗಾಗಿ ಪಳನಿರಾಜ್ ಮತ್ತು ಗೆಳೆಯ ಚಿತ್ರದ ಈ ಸಂಜೆ ಯಾಕಾಗಿದೆ, ಹಾಡಿಗೆ ನೃತ್ಯ ನಿರ್ದೇಶನಕ್ಕಾಗಿ, ನಿರ್ದೇಶಕ ಎ. ಹರ್ಷ ಅವರಿಗೆ ಸ್ಟೈಲಿಶ್ ಕೊರಿಯೊಗ್ರಾಫರ್ ಆವಾರ್ಡ್ ನೀಡಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಜೋಗಿ ಖ್ಯಾತಿಯ ಜೆನಿಫರ್ ಕೊತ್ವಾಲ್ ಕನ್ನಡ ಜೋಗಿ ಚಿತ್ರದ ಚಿಕುಬುಕು ರೈಲು ನಿಲ್ಲೊದಿಲ್ಲ ಎಲ್ಲು ಮತ್ತು ವಂಶಿ ಚಿತ್ರದ ಜೊತೆ ಜೊತೆಯಲ್ಲಿ ಹಾಡಿಗೆ ನಿಖಿತ ಹೆಜ್ಜೆ ಹಾಕಿ ಕುಣಿದಿದ್ದು ಕುವಳಿಸಿದ್ದು ವಿಶೇಷವಾಗಿತ್ತು.

 

Manohar. R.(Manu),
chitrataramanu@gmail.com
Photo Journalist
M: 9845549026
  : 9844904440

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed