ಸೌತ್ ಇಂಡಿಯನ್ ಹೀರೋ ಲಾಜಿಕ್ ನಾಯಕನ ಮ್ಯಾಜಿಕ್ ಲೈಫ್ 4/5 ****
Posted date: 25 Sat, Feb 2023 01:38:36 PM
ಚಿತ್ರರಂಗದಲ್ಲಿ ಹೆಸರು, ಫೇಮ್ ಬರೋದು ಆತನ ಟ್ಯಾಲೆಂಟ್ ಹಾಗೂ ಅದೃಷ್ಟದ ಮೇಲೆ ನಿಂತಿರುತ್ತದೆ. ಹಾಗೇ  ಜೀವನವನ್ನೂ ಲಾಜಿಕ್  ದೃಷ್ಟಿಯಿಂದಲೇ  ನೋಡುತ್ತಿದ್ದ ಶಿಕ್ಷಕ ಲಾಜಿಕ್ ಲಕ್ಷ್ಮಣ್‌ರಾವ್(ಸಾರ್ಥಕ್)  ಚಿತ್ರರಂಗವೆಂಬ ಮಾಯಾಲೋಕಕ್ಕೆ ಬಂದಮೇಲೆ ಏನೆಲ್ಲ ಏರಿಳಿತಗಳನ್ನು  ಕಾಣುತ್ತಾನೆ ಎಂಬುದನ್ನು ಹೇಳುವ ಚಿತ್ರವೇ ಈ ವಾರ ತೆರೆಕಂಡು ಪ್ರೇಕ್ಷಕರಿಂದ ಭರ್ಜರಿ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಸೌತ್ ಇಂಡಿಯನ್ ಹೀರೋ. ಶಾಲೆಯಲ್ಲಿ ಲಾಜಿಕ್ ಲಕ್ಷ್ಮಣರಾವ್ ಅಂತಲೇ ಕರೆಸಿಕೊಳ್ಳುವ ಈತನನ್ನು  ನಿರ್ದೇಶಕನೊಬ್ಬ ಸ್ಟಾರ್ ಹೀರೋ ಮಾಡಿಬಿಡುತ್ತಾನೆ. ಸ್ಟಾರ್‌ ಹೀರೋಗಳ ಉದ್ದಟತನದ  ವರ್ತನೆಗೆ ಬೇಸತ್ತು, ಹೊಸಬನೊಬ್ಬನನ್ನು ಸ್ಟಾರ್ ಮಾಡಲು ಮುಂದಾದ ನಿರ್ದೇಶಕನ ಕೃಪೆಯಿಂದ  ಈ ಲಕ್ಷ್ಮಣರಾವ್  ಸ್ಟಾರ್ ಹೀರೋ ಆಗುತ್ತಾನೆ. ಆದರೆ ಥಳಕು ಬಳುಕಿನ  ಚಲನಚಿತ್ರರಂಗದ  ನಾಟಕೀಯತೆ, ಬಿಲ್ಡಪ್ ಇದೆಲ್ಲವನ್ನು ಗಮನಿಸುವ ನಾಯಕ ಅದರಲ್ಲಿಯೂ ಲಾಜಿಕ್ ಹುಡುಕುತ್ತಾನೆ. ಆಗ ಆ ಡೈರೆಕ್ಟರ್ ದೊಡ್ಡ  ನಿರ್ದೇಶಕರ ಕೈಲಿ   ಈ ಲಕ್ಷ್ಮಣ್‌ರಾವ್‌ಗೆ ಲಾಜಿಕ್ ಹಾಗೂ ಮ್ಯಾಜಿಕ್ ಡುವಿನ ವ್ಯತ್ಯಾಸ ತಿಳಿಸಿ  ಅರಿವು ಮೂಡಿಸುತ್ತಾನೆ. ಮುಂದೆ ಲಕ್ಕಿಸ್ಟಾರ್ ಆಗುವ ನಾಯಕನ ಬದುಕಿನಲ್ಲಿ ಎದುರಾಗುವ ಏರು ಪೇರುಗಳು, ಅವನ ಜೊತೆ ಇರುವ ಗೆಳೆಯರು, ಬಿಲ್ಡಪ್ ಕೊಡುವವರು, ಸಿನಿಮಾ ಡೇಟ್ಸ್  ನೋಡಿಕೊಳ್ಳುವವರು, ಸ್ಟಾರ್ ಆದಮೇಲೆ ಹುಟ್ಟಿಕೊಳ್ಳುವ ರಿಯಲ್ ಅಭಿಮಾನಿಗಳು,  ಡೇಟ್ಸ್ ಗಾಗಿ ಕಾಯುವ ನಿರ್ಮಾಪಕರು, ನಿರ್ದೇಶಕರು, ಎಲ್ಲದಕ್ಕೂ ಬ್ರೇಕಿಂಗ್ ನ್ಯೂಸ್ ಮಾಡುವ ಕೆಲ ಮೀಡಿಯಾಗಳು,  ಹೀಗೆ ಚಿತ್ರರಂಗದ ತೆರೆಯ ಹಿಂದಿನ ಮುಂದಿನ  ಚಟುವಟಿಕೆಗಳನ್ನು ದಾಟಿ ಸಾಗುವ ನಾಯಕನ ಮನಸ್ಥಿತಿ ಕೊನೆಗೆ  ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನ  ನಿರ್ದೇಶಕ ನರೇಶ್‌ಕುಮಾರ್ ಅವರು ಸೌತ್ ಇಂಡಿಯನ್ ಹೀರೋ ಚಿತ್ರದ  ಮೂಲಕ ನೈಜತೆಗೆ ಹತ್ತಿರವಾಗುವ ಹಾಗೆ  ಹೇಳಿದ್ದಾರೆ.  ಸಿನಿಮಾ ಜಗತ್ತು ಅಂದರೆ ಹೇಗಿರುತ್ತೆ, ಅದರ ಆಳ ಅಗಲಗಳೇನು,  ನಾಯಕರ ವರ್ಚಸ್ಸು, ಅವನ ವೈಯಕ್ತಿಕ ಜೀವನ ಹಾಗೂ ಸಿನಿಮಾ ಲೈಫ್,  ನಾಯಕನ ಹಿಂದೆ ಇರುವ  ಅಭಿಮಾನಿಗಳು,  ಸ್ಟಾರ್‌ವಾರ್,  ತಂತ್ರ ಕುತಂತ್ರದ ಜೊತೆಗೆ ನಿರ್ಮಲವಾದ ಪ್ರೀತಿಯ ತಳಮಳವನ್ನು ತೆರೆದಿಡುವ ಮೂಲಕ ನಿರ್ದೇಶಕನ ತಾಕತ್ತು ಏನು ಎಂಬುದನ್ನು ಪರಿಣಾಮಕಾರಿಯಾಗಿ ಹೇಳಿದ್ದಾರೆ.  ಒಂದು ಚಿತ್ರಕ್ಕೆ ಬೇಕಾದ ಎಲ್ಲಾ ಅಂಶವನ್ನು ಒದಗಿಸಿ ಮನೋರಂಜನೆಯ ಮಹಾಪೂರವನ್ನೇ ಹರಿಸುವ ಜೊತೆಗೆ  ಅಚ್ಚುಕಟ್ಟಾದ ಚಿತ್ರಕಥೆ,  ಚುರುಕಾದ ಸಂಭಾಷಣೆಗಳ ಮೂಲಕ  ಪ್ರೇಕ್ಷಕರಿಗೆ ಇಷ್ಟವಾಗುವ ಹಾಗೆ ಚಿತ್ರವನ್ನು  ತೆರೆಮೇಲೆ ತಂದಿದ್ದಾರೆ,  ಚಿತ್ರದಲ್ಲಿ  ಪ್ರವೀಣ್ ಮತ್ತು ರಾಜಶೇಖರ್ ಅವರ ಕ್ಯಾಮೆರಾ ವರ್ಕ್ ಗಮನ ಸೆಳೆಯುತ್ತದೆ.
 
ಹರ್ಷವರ್ಧನ್‌ರಾಜ್ ಅವರ ಸಂಗೀತದಲ್ಲಿ ಮೂಡಿಬಂದಿರುವ  ಹಾಡುಗಳು  ಗುನುಗುವಂತಿವೆ. ಅಲ್ಲದೆ ಹಿನ್ನೆಲೆ ಸಂಗೀತ ಹೆಚ್ಚು ಗಮನ ಸೆಳೆಯುತ್ತದೆ. 
 
ನಾಯಕ  ಸಾರ್ಥಕ್ ತನ್ನ ಪ್ರಥಮ ಚಿತ್ರದಲ್ಕೇ ಅನುಭವಿ ನಟನಂತೆ ಪರದೆಯ ಮೇಲೆ ಮಿಂಚಿದ್ದಾರೆ. ನಾಯಕನ ಗತ್ತು, ಗಮ್ಮತ್ತು, ಗಾಂಭೀರ್ಯ, ಜೊತೆಗೆ ಮ್ಯಾಜಿಕ್‌ನಲ್ಲಿ ಲಾಜಿಕ್ ಹುಡುಕುವ ಪರಿ, ಜೊತೆಗೆ  ಒಬ್ಬ ಪ್ರೇಮಿಯಾಗಿಯೂ ಗಮನ ಸೆಳೆಯುತ್ತಾರೆ.
 ಇನ್ನು ನಾಯಕಿ ಕಾಶಿಮಾ ರಫಿ ಕೂಡ ತನಗೆ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ.  ವಿಜಯ್‌ಚೆಂಡೂರ್ ಚಿತ್ರ ನಿರ್ದೇಶಕನಾಗಿ ಉತ್ತಮ ಅಭಿನಯ ನೀಡಿದ್ದಾರೆ.  ಇಡೀ ಕುಟುಂಬ ಕೂತು ನೋಡುವಂಥ ಐಸಾ ವಸೂಲ್ ಚಿತ್ರವಿದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed