ಮುನಿ ಚಿತ್ರಕ್ಕೆ ಮುಹೂರ್ತ
Posted date: 8/February/2009

ತಮ್ಮ ಮನೋಜ್ಞ ಅಭಿನಯದಿಂದ ಜನಪ್ರಿಯರಾಗಿರುವ ನಟ ಮುನಿ ಪ್ರಧಾನ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಹೆಸರಿಡದ ಚಿತ್ರವೊಂದು ಕಳೆದವಾರ ಶ್ರೀಕಂಠೀರವ ಸ್ಟೂಡಿಯೋದಲ್ಲಿ ಆರಂಭವಾಯಿತು. ಮುನಿ ಅವರ ಮೇಲೆ ಸೆರೆಹಿಡಿಯಲಾದ ಪ್ರಥಮ ಸನ್ನಿವೇಶಕ್ಕೆ ಉದ್ಯಮಿ ಮಹೇಶ್ ಅವರು ಆರಂಭಫಲಕ ತೋರಿದರೆ ಛಾಯಾಗ್ರಾಹಕ ಗಿರಿ ಕ್ಯಾಮೆರಾಚಾಲನೆ ಮಾಡಿದರು. ಸ್ಥಿರ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ರತ್ನವೇಲು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ತಿಂಗಳ ೧೬ರವರೆಗೂ ಚಿತ್ರಕ್ಕೆ ಮೊದಲ ಹಂತದ ಚಿತ್ರೀಕರಣ ನಡೆಯಲಿದ್ದು ಕನ್ನಡ ಚಿತರ್ರಂಗದ ಅಮೃತ ಮಹೋತ್ಸವದ ನಿಮಿತ್ತ ೧೫ದಿನಗಳ ರಜೆ ಅವಧಿ ಪೂರ್ಣವಾದ ಮೇಲೆ ಎರಡನೇ ಹಂತದ ಚಿತ್ರೀಕರಣವನ್ನು ಆರಂಭಿಸುವುದಾಗಿ ನಿರ್ದೇಶಕರು ತಿಳಿಸಿದ್ದಾರೆ. ಹಿಂದೆ ರಾಮಸೇತು, ಬಾಲು ಎಂಬ ಚಿತ್ರಗಳಲ್ಲಿ ಅಭಿನಯಿಸಿರುವ ಬಾಲಾಜಿ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾನೆ. ಉಳಿದಂತೆ ಎಂ.ಡಿ.ಪಲ್ಲವಿ, ಬಿಂದುಶ್ರೀ, ಗಿರಿಜಾಲೋಕೇಶ್, ಮೈಕೋನಾಗರಾಜ್, ಕೋಟೆಪ್ರಭಾಕರ್, ತುಮಕೂರುಮೋಹನ್, ಆನಂದ್ ಮುಂತಾದವರ ತಾರಾಬಳಗ ಈ ಚಿತ್ರಕ್ಕಿದೆ.

    ಕ್ರಿಯೇಟಿವ್ ಗ್ರೂಪ್ ಫಿಲಂಸ್ ಲಾಂಛನದಲ್ಲಿ ಮಹೇಶ್ ಅವರು ಅರ್ಪಿಸಿ ಎ.ಕುಮಾರ್, ಲಕ್ಷ್ಮೀನಾರಾಯಣ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಎಂ.ರತ್ನವೇಲು ಅವರ ಚಿತ್ರಕತೆ, ನಿರ್ದೇಶನವಿದೆ. ಗೋವರ್ಧನ್ ಸಂಗೀತ, ಸಿ.ಸುರೇಶ್ ಕ್ಯಾಮೆರಾ, ಬಸವರಾಜ್‌ಅರಸ್ ಸಂಕಲನ, ರವಿವರ್ಮ, ಡೀಫರೆಂಟ್‌ಡ್ಯಾನಿ ಸಾಹಸ, ವಿ.ನಾಗೇಂದ್ರಪ್ರಸಾದ್, ಹೃದಯಶಿವ ಗೀತರಚನೆ, ಸುಭಾಶ್‌ಕಡಕೋಳ್ ಕಲೆ, ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ, ಲೀಲಾಮನೋಹರ್ ನಿರ್ಮಾಣನಿರ್ವಹಣೆ ಈ ನೂತನ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed