ರಾಣಾ ಹುಟ್ಟುಹಬ್ಬಕ್ಕೆ ರಿಲೀಸ್ ಆಯ್ತು ಹೊಸ ಸಿನಿಮಾ ಥೀಮ್ ಪೋಸ್ಟರ್ - ಹೆಚ್ಚಾಯ್ತು ಕುತೂಹಲ
Posted date: 17 Mon, Oct 2022 09:54:58 AM
`ಏಕ್ ಲವ್ ಯಾ` ಸಿನಿಮಾ ಖ್ಯಾತಿಯ ನಟ ರಾಣಾ ಎರಡನೇ ಸಿನಿಮಾ ಯಾರ ಜೊತೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಅದಕ್ಕೆ ಉತ್ತರವೂ ಸಿಕ್ಕಾಗಿದೆ. ಪ್ರೇಮ್ ಶಿಷ್ಯ ವಿಜಯ್ ಈಶ್ವರ್ ಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಡುತ್ತಿದ್ದು, ಮೊದಲ ಸಿನಿಮಾವನ್ನು ರಾಣಾಗೆ ನಿರ್ದೇಶನ ಮಾಡುತ್ತಿದ್ದಾರೆ. ಇಂದು ರಾಣಾ ಹುಟ್ಟುಹಬ್ಬ ಆದ್ರಿಂದ ಚಿತ್ರತಂಡ ಮೊದಲ ಬಾರಿಗೆ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ರಾಣಾಗೆ ಶುಭ ಕೋರಿದೆ. 
 
`ಏಕ್ ಲವ್ ಯಾ` ಸಿನಿಮಾ ಮೂಲಕ ಭರವಸೆ ಮೂಡಿಸಿರುವ ರಾಣಾ ತಮ್ಮ ಎರಡನೇ ಸಿನಿಮಾ ಮೂಲಕ ಮಗದೊಮ್ಮೆ ಸಿನಿರಸಿಕರ ಮನಗೆಲ್ಲಲ್ಲು ಸಕಲ ರೀತಿಯಲ್ಲೂ ಸಜ್ಜಾಗುತ್ತಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಹೀರೋ ಆಗಿ ಮಿಂಚಲಿರುವ ರಾಣಾ ಸಿನಿಮಾಗಾಗಿ ಭರ್ಜರಿ ಸಿದ್ದತೆಯನ್ನು ನಡೆಸುತ್ತಿದ್ದಾರೆ. ಪೋಸ್ಟರ್ ಕೂಡ ಇಂಟ್ರಸ್ಟಿಂಗ್ ಆಗಿದ್ದು, ಶಾನ್ವಿ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. 
 
ಪ್ರೇಮ್ ಜೊತೆ ಸಹಾಯಕ ನಿರ್ದೇಶಕನಾಗಿ, ಬರಹಗಾರನಾಗಿ ದುಡಿದ  ಅನುಭವ ಇರುವ ವಿಜಯ್ ಈಶ್ವರ್ ಗೆ ಚಿತ್ರರಂಗದಲ್ಲಿ ಎಂಟು ವರ್ಷಗಳ ಅನುಭವವಿದೆ. ಮೊದಲ ಬಾರಿಗೆ ಕಥೆ ಬರೆದು ಸಿನಿಮಾ ನಿರ್ದೇಶನ ಸಾಹಸಕ್ಕೆ ಕೈ ಹಾಕಿರುವ ವಿಜಯ್ ಈಶ್ವರ್ ದೊಡ್ಡ ಮಟ್ಟದಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಕಲ್ಟ್, ಮಾಸ್ ಸಬ್ಜೆಕ್ಟ್ ಒಳಗೊಂಡ ಚಿತ್ರದ ಟೈಟಲ್  ಸದ್ಯದಲ್ಲೇ ರಿವೀಲ್ ಆಗಲಿದೆ.  
 
ಚಿತ್ರದಲ್ಲಿ ರಾಣಾ ಲುಕ್ ಕಂಪ್ಲೀಟ್ ಡಿಫ್ರೆಂಟ್ ಆಗಿರಲಿದ್ದು,  ಬಿಡುಗಡೆಯಾಗಿರುವ ಥೀಮ್ ಪೋಸ್ಟರ್ ಕೂಡ ಅದನ್ನೇ  ಹೇಳುತ್ತಿದೆ. ಬಿಗ್ ಬಜೆಟ್ ನಲ್ಲಿ ಮೂಡಿ ಬರ್ತಿರುವ ಈ ಚಿತ್ರದಲ್ಲಿ ತಮಿಳಿನ ಖ್ಯಾತ ನಟರೊಬ್ಬರು ವಿಲನ್ ಪಾತ್ರಕ್ಕೆ ಬಣ್ಣ ಹಚ್ಚಲಿದ್ದು, ಸ್ಯಾಂಡಲ್ ವುಡ್ ಸ್ಟಾರ್ ನಟರೊಬ್ಬರ ಗೆಸ್ಟ್ ಅಪಿಯರೆನ್ಸ್ ಕೂಡ ಸಿನಿಮಾದಲ್ಲಿರಲಿದೆ ಎನ್ನುತ್ತಾರೆ ನಿರ್ದೇಶಕರು. ಸಿನಿಮಾ ಟೈಟಲ್  ತಾಂತ್ರಿಕ ವರ್ಗ,  ಎಲ್ಲದರ ಬಗ್ಗೆ ಸದ್ಯದಲ್ಲೇ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed