ಉದಯ ಟಿವಿಯಲ್ಲಿ ಸೋಮವಾರದಿಂದ ಶನಿವಾರ ಸಂಜೆ 7 ಗಂಟೆಗೆ ಪ್ರಸಾರವಾಗುತ್ತಿರುವ ಅಣ್ಣ ತಂಗಿ ಸೀರಿಯಲ್ ಈಗಾಗಲೇ ವೀಕ್ಷಕರ ಮನ ಗೆದ್ದಿದೆ. ನೋಡುಗರನ್ನು ರಂಜಿಸಲು ಅಣ್ಣ ತಂಗಿ ಸೀರಿಯಲ್ ತಂಡ ಹೊಸ ಪ್ರಯತ್ನ ಮಾಡಿದೆ. ಊಹಿಸದ ತಿರುವಿನ ಕಥೆಯೊಂದಿಗೆ ತೆರೆಯ ಮೇಲೆ ಬರುತ್ತಿದೆ. ಖ್ಯಾತ ನಟಿ ಮಾನ್ವಿತಾ ಕಾಮತ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ಬರುವ ಜೂನ್ 12 ರಿಂದ ಮಾನ್ವಿತಾ ಅವರು ತೆರೆಯ ಮೇಲೆ ಬರಲಿದ್ದಾರೆ.
`ಅಣ್ಣ ತಂಗಿ`ಯ ಶಿವಣ್ಣನಿಗೆ ತಹಶೀಲ್ದಾರ್ ಸಂಧ್ಯಾ ಮೇಲೆ ಪ್ರೀತಿ. ಆದರೆ ಸೋದರ ಮಾವನ ಮಾತಿಗೆ ಕಟ್ಟುಬಿದ್ದು ಅವನ ಮಗಳು ಜ್ಯೋತಿಗೆ ತಾಳಿಕಟ್ಟಲು ಮುಂದಾಗಿದ್ದಾನೆ. ಅಣ್ಣನ ಪ್ರೀತಿಯ ವಿಷಯ ತಿಳಿದ ತಂಗಿ ತುಳಸಿ ಹೇಗಾದರೂ ಮಾಡಿ ಸಂಧ್ಯಾ ಜೊತೆಗೇ ಮದುವೆ ಮಾಡಿಸಲು ಶಪಥ ತೊಟ್ಟಿದ್ದಾಳೆ.
ಸೆಲಿಬ್ರಿಟಿಯಾಗಿ ಮದುವೆಗೆ ಬರುವ ಮಾನ್ವಿತಾ ಇಲ್ಲಿ ಎಲ್ಲ ಸರಿ ಇಲ್ಲ ಎನ್ನುವದನ್ನು ಅರ್ಥ ಮಾಡಿಕೊಳ್ಳುತ್ತಾರೆ. ಶಿವಣ್ಣ ಅವನಿಷ್ಟದ ಹುಡುಗಿ ಜೊತೆ ಮದುವೆಯಾಗಲು ಮಾನ್ವಿತಾ ಹೇಗೆ ಸಹಾಯ ಮಾಡುತ್ತಾರೆ? ಎನ್ನುವುದು ಕಥಾಹಂದರ.
ಕಥೆಯಷ್ಟೇ ಅಲ್ಲದೆ ವೈಭವದ ಸೆಟ್, ಮಾನ್ವಿತಾ ಡಾನ್ಸ್-ಗೇಮ್ಗಳು ವೀಕ್ಷಕರ ಮನೆ ಸೂರೆಗೊಳ್ಳಲಿದೆ.
ರೋಚಕ ತಿರುವು, ಭಾವನೆಗಳ ಮಹಾಪೂರ ಅಣ್ಣ ತಂಗಿ ಸೀರಿಯಲ್ ವೀಕ್ಷಕರ ಪಾಲಿಗೆ ಹಬ್ಬವಾಗಲಿದೆ.
ಅಣ್ಣಾ-ತಂಗಿ ಧಾರಾವಾಹಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಕ್ಕೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.