ಶುಗರ್ ಲೆಸ್‌ ಚಿತ್ರದಲ್ಲಿ ಶರಣ್ ಧ್ವನಿ ಆ.16 ಕ್ಕೆ ಟೈಟಲ್ ಸಾಂಗ್
Posted date: 09 Mon, Aug 2021 10:22:56 AM
ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ನಿರ್ಮಾಪಕ ಶಶಿಧರ ಕೆ.ಎಂ.  ಮೊದಲಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ಶುಗರ್ ಲೆಸ್. ಬಿಡುಗಡೆಗೆ ಸಿದ್ದವಾಗಿರಯವ ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನದ ಜೊತೆಗೆ  ನಿರ್ಮಾಣದ ಜವಬ್ದಾರಿಯನ್ನೂ ಸಹ ಶಶಿಧರ್ ಕೆ.ಎಂ. ಅವರೇ ಹೊತ್ತಿದ್ದಾರೆ. ಚಿತ್ರದ  ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ. ತನ್ನ ಶೀರ್ಷಿಕೆ ಮೂಲಕವೇ ಕುತೂಹಲ ಮೂಡಿಸಿರುವ ಈ ಚಿತ್ರದಲ್ಲಿ  ಹಾಸ್ಯನಟ ಶರಣ್ ಅವರು ಹಿನ್ನೆಲೆ ಧ್ವನಿ ನೀಡುವ ಮೂಲಕ  ಸಿನಿಮಾದ ಕಂಟೆಂಟ್ ಹಾಗೂ ಪ್ರಮುಖ‌  ಪಾತ್ರಗಳನ್ನು ಪರಿಚಯಿಸಿದ್ದಾರೆ.
 
ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್  ಮೂಲಕ   ನಿರ್ಮಾಣವಾಗಿರುವ ಶುಗರ್‍ಲೆಸ್ ಚಿತ್ರಕ್ಕೆ ‌ ಛಾಯಾಗ್ರಾಹಕರಾಗಿ ಲವಿತ್, ಸಂಗೀತ ನಿರ್ದೇಶಕರಾಗಿ ಅನೂಪ್ ಸೀಳಿನ್ ಕೆಲಸ ಮಾಡಿದ್ದು, ಡಾ|| ವಿ. ನಾಗೇಂದ್ರಪ್ರಸಾದ್ ಅವರ ಸಾಹಿತ್ಯ, ಗುರು ಕಶ್ಯಪ್ ಅವರ  ಸಂಭಾಷಣೆ  ಇದೆ. ಚಿತ್ರದ ಸಂಕಲನ ರವಿಚಂದ್ರನ್, ನೃತ್ಯ ಸಂಯೋಜನೆ ಮುರಳಿ ಮಾಸ್ಟರ್, ಕಲೆ ವಿನ್ಯಾಸ ರೂಪೇಂದ್ರ ಆಚಾರ್ ಅವರದಾಗಿದೆ. ಈ ಚಿತ್ರಕ್ಕೆ ಕರ್ನಾಟಕದಾದ್ಯಂತ ನಲವತೈದು ದಿನಗಳ ಕಾಲ ಚಿತ್ರೀಕರಣ  ನಡೆಸಲಾಗಿದೆ,  ನವಿರಾದ ಹಾಸ್ಯದ  ನಿರೂಪಣೆ ಇರುವಂಥ  ಈ  ಚಿತ್ರದ  ನಾಯಕ ನಟ  ಪೃಥ್ವಿ ಅಂಬರ್  ಅವರ ಹುಟ್ಟುಹಬ್ಬದ ಪ್ರಯುಕ್ತ  ನವೀನ್ ಸಜ್ಜು ಹಾಡಿರುವ  ಚಿತ್ರದ ಟೈಟಲ್ ಹಾಡು ದಿ.16 ರಂದು ಸಂಜೆ 5.00ಕ್ಕೆ  ಆನಂದ್ ಆಡಿಯೋ  ಯೂಟ್ಯೂಬ್ ಚಾನೆಲ್   ಮೂಲಕ ಬಿಡುಗಡೆಯಾಗಲಿದೆ ಎಂದು   ನಿರ್ಮಾಪಕ ಹಾಗೂ ನಿರ್ದೇಶಕ  ಶಶಿಧರ ಕೆ.ಎಂ. ಅವರು ತಿಳಿಸಿದ್ದಾರೆ. ಚಿತ್ರದ ನಾಯಕಿಯಾಗಿ ಬಿಗ್ಬಾಸ್ ಖ್ಯಾತಿಯ ಪ್ರಿಯಾಂಕ ತಿಮ್ಮೇಶ್ ನಟಿಸಿದ್ದು, ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ದತ್ತಣ್ಣ, ಪದ್ಮಜಾರಾವ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ.ಪಡೀಲ್, ಗಿರೀಶ್ ಜತ್ತಿ, ಹೊನ್ನವಳ್ಳಿ ಕೃಷ್ಣ,  ಮಾಲತಿ ಅಭಿನಯಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed