ಕನ್ನಡ ಸಂಗೀತ ಕ್ಷೇತ್ರಕ್ಕೆ ಕೊಡುಗೆ ಮಾನಸ ಹೊಳ್ಳ
Posted date: 29 Tue, Aug 2023 08:43:08 AM
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಸಂಗೀತ ನಿರ್ದೇಶಕಿಯರ ಸಂಖ್ಯೆ ಕಡಿಮೆಯೇ. ವಾಣಿ ಹರಿಕೃಷ್ಣ, ಚೈತ್ರಾ, ಡಾ.ಶಮಿತಾ ಮಲ್ನಾಡ್. ಸಿ.ಆರ್ ಬಾಬಿ, ಇಂದೂ ವಿಶ್ವನಾಥ್  ಇವರೆಲ್ಲ ಮಹಿಳಾ ಸಂಗೀತ ನಿರ್ದೇಶಕಿಯರಾಗಿ  ಗುರುತಿಸಿಕೊಂಡಿದ್ದಾರೆ. ಇವರಲ್ಲಿ  ಹಿರಿಯ ಕಲಾವಿದ ಶಂಖನಾದ ಅರವಿಂದ್ ಅವರ ಪುತ್ರಿ ಮಾನಸ ಹೊಳ್ಳ ಗಾಯನ,  ಸಂಗೀತ ಎರಡೂ ವಿಭಾಗದಲ್ಲೂ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ. ಕಳೆದ ವಾರವಷ್ಟೇ ತೆರೆಕಂಡ ಬಯಲು ಸೀಮೆ ಚಿತ್ರಕ್ಕೆ ಅವರು ಏಳು ಸುಂದರ ಹಾಡುಗಳ ಜೊತೆಗೆ ಹಿನ್ನೆಲೆ ಸಂಗೀತವನ್ನೂ  ನಿರ್ವಹಿಸಿದ್ದಾರೆ. ಅಪ್ಪಟ ಉತ್ತರ ಕರ್ನಾಟಕದ   ಘಮಲನ್ನು ಹೊಂದಿದ ಈ ಚಿತ್ರ ಸಂಗೀತದಿಂದಲೇ ಹೆಚ್ಚು ಗಮನ ಸೆಳೆಯುತ್ತಿದೆ. 
     
ಮಾನಸ ಹೊಳ್ಳ ಅವರು ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿ ಈವರೆಗೆ ಸುಮಾರು 400ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾಗಿದ್ದಾರೆ. ಅಧ್ಯಕ್ಷ ಚಿತ್ರದ ಕಣ್ಣಿಗೂ ಕಣ್ಣಿಗೂ, 99, ಧಮಾಕಾ ಸೇರಿದಂತೆ ಸಾಕಷ್ಟು ಹಿಟ್ ಹಾಡುಗಳನ್ನವರು ಹಾಡಿದ್ದಾರೆ. 
 
ಮನೆಯಲ್ಲಿ ತಾಯಿಯೂ ಹಾಡುಗಾರ್ತಿಯಾಗಿದ್ದು,  ಮಾನಸ ಅವರಿಗೆ ಚಿಕ್ಕ ವಯಸಿನಿಂದಲೇ ಸಂಗೀತದ ಮೇಲೆ ಹೆಚ್ಚಿನ ಆಸಕ್ತಿ ಮೂಡಲು ಕಾರಣವಾಗಿದೆ. ಬಿ.ಎ ಇನ್ ಮ್ಯೂಸಿಕ್. ನಂತರ ಹಿಂದೂಸ್ತಾನಿ, ವೆಸ್ಟರ್ನ್ ಮ್ಯೂಸಿಕ್ ನಲ್ಲೂ ತರಬೇತಿ ಪಡೆದು ಇದೀಗ ಸಂಗೀತ ನಿರ್ದೇಶಕಿಯಾಗಿದ್ದಾರೆ. 

6 ಟು 6, ಕನಸು ಮಾರಾಟಕ್ಕಿದೆ, ಮನಸಾಗಿದೆ, ಮಸಣದ ಹೂ ಸೇರಿ 6 ಸಿನಿಮಾಗಳಿಗೆ ಮ್ಯೂಸಿಕ್ ಮಾಡಿದ್ದಾರೆ.  ಕನಸು ಮಾರಾಟಕ್ಕಿದೆ ಚಿತ್ರದ ಸಂಗೀತ ನಿರ್ದೇಶನಕ್ಕೆ ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಬೆಸ್ಟ್  ಮ್ಯೂಸಿಕ್ ಡೈರೆಕ್ಟರ್ ಅವಾರ್ಡ್ ಕೂಡ ಗಳಿಸಿದ್ದಾರೆ. 

ಒಂದಷ್ಟು ಆಲ್ಬಂಗಳು  ಅಲ್ಲದೆ ಹಲವಾರು ಟಿವಿ ಸೀರಿಯಲ್ ಗಳಿಗೂ ಸಹ ಮಾನಸ ಹೊಳ್ಳ ಅವರು ಸಂಗೀತ ಸಂಯೋಜನೆ ಮಾಡಿ ಗುರುತಿಸಿಕೊಂಡಿದ್ದಾರೆ. ಯುಕೆ, ದುಬೈ ಸೇರಿದಂತೆ ವಿದೇಶಗಳಲ್ಲಿ ಮ್ಯೂಸಿಕ್ ಪ್ರೋಗ್ರಾಮ್ ನೀಡಿ ಸೈ ಎನಿಸಿಕೊಂಡಿದ್ದಾರೆ.  ಅಪ್ಪಟ ಕನ್ನಡದ ಪ್ರತಿಭೆಯಾದ ಮಾನಸ ಹೊಳ್ಳ ಅವರಿಗೆ ಇನ್ನೂ ಹೆಚ್ಚು ಹೆಚ್ಚು ಸಿನಿಮಾಗಳಲ್ಲಿ ಸಂಗೀತದ ಅವಕಾಶಗಳು ಸಿಗಬೇಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed