ಕವೀಶ್ ಶೆಟ್ಟಿ ಮತ್ತು ಜೊತೆ ಜೊತೆಯ ಬೆಡಗಿ ಮೇಘಾ ಶೆಟ್ಟಿ ಪ್ಯಾನ್ ಇಂಡಿಯಾ ಚಿತ್ರ
Posted date: 14 Sun, Nov 2021 07:50:05 PM
ಇತ್ತೀಚೆಗಷ್ಟೇ ಸುದ್ಧಿಯಾಗಿದ್ದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ನಿರ್ಮಾಣದ ಸಡಗರ ರಾಘವೇಂದ್ರ ನಿರ್ದೇಶನದ ಕವೀಶ್ ಶೆಟ್ಟಿ ಮತ್ತು ಜೊತೆ ಜೊತೆಯ ಬೆಡಗಿ ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯಲ್ಲಿ ಪ್ರಾರಂಭವಾಗುವ ಹೊಸ ಪ್ಯಾನ್ ಇಂಡಿಯಾ ಚಿತ್ರಕ್ಕೆ ಮರಾಠಿಯ ಡೇರ್ ಅಂಡ್ ಡ್ಯಾಶಿಂಗ್ ಗರ್ಲ್ ಶಿವಾನಿ ಸುರ್ವೆ ಮತ್ತು ರಫ್ ಅಂಡ್ ಟಫ್ ಬಾಯ್ ವಿರಾಟ್ ಮಟ್ಕೆ ಸೇರ್ಪಡೆಗೊಂಡಿದ್ದಾರೆ. ಮರಾಠಿಯ ಹೆಸರಾಂತ ಧಾರಾವಾಹಿ ಮತ್ತು ಸಿನಿಮಾಗಳಲ್ಲಿ ನಾಯಕಿಯಾಗಿ ಮರಾಠಿ ಬಿಗ್ ಬಾಸ್ ಸೀಸನ್ ಎರಡರ ಫೈರಿಂಗ್ ಅಂಡ್ ಫೇರ್ ಬ್ರಾಂಡ್ ಶಿವಾನಿ ಹಾಗೂ ಮರಾಠಿಯ ಕೇಸರಿ ಚಿತ್ರದ ಮೂಲಕ ಮರಾಠಿ ಚಿತ್ರರಂಗದಲ್ಲಿ ಹವಾ ಸೃಷ್ಟಿಸಿದ ನಾಯಕ ವಿರಾಟ್ ಇಬ್ಬರೂ ಈ ಚಿತ್ರದಲ್ಲಿ ವಿಶೇಷವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಕನ್ನಡ ಮತ್ತು ಹಿಂದಿಯ ಹೆಸರಾಂತ ಕಲಾವಿದರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಮೂಲಕ ನಿರ್ದೇಶಕ ಸಡಗರ ರಾಘವೇಂದ್ರ ಇದೇ ತಿಂಗಳ ಅಂತ್ಯದಲ್ಲಿ ಚಿತ್ರೀಕರಣ ಪ್ರಾರಂಭವಾಗುವ ಸುಳಿವನ್ನು ನೀಡಿದ್ದಾರೆ. ಚಿತ್ರದ ಟೈಟಲ್ ಸದ್ಯದಲ್ಲೇ ಅನಾವರಣಗೊಳಿಸುವುದಾಗಿ ಹೇಳಿದ್ದಾರೆ.
 
ಪವರ್ ಸ್ಟಾರ್ ಪುನೀತ್ ರಾಜ್ಕುಮಾರವರ ಅಗಲಿಕೆಯ ಹಿನ್ನೆಲೆಯಲ್ಲಿ ಅಬ್ಬರವಿಲ್ಲದ ಸಿಂಪಲ್ ಮುಹೂರ್ತಕ್ಕೆ ಮೊರೆ ಹೋಗಿರುವ ಚಿತ್ರತಂಡ ಇತ್ತೀಚೆಗಶತ್ ಬಾಂಬೆಯಲ್ಲಿ ಔಪಚಾರಿಕವಾಗಿ ಸ್ಕ್ರಿಪ್ಟ್ ಪೂಜೆಯನ್ನು ನೆರವೇರಿಸಿತು. ಹಾಗೆಯೇ ಚಿತ್ರೀಕರಣಕ್ಕೂ ಮುನ್ನ ಕರ್ನಾಟಕದಲ್ಲಿ ಸಿಂಪಲ್ಲಾಗಿ ಮುಹೂರ್ತ ಪೂಜೆಯನ್ನು ನೆರವೇರಿಸಿ ಚಿತ್ರೀಕರಣ ಆರಂಭಿಸುವ ಯೋಜನೆಯನ್ನು ಹಾಕಿಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed