ಕಿಚ್ಚ ಸುದೀಪ್ ತೆರೆಗೆ ಅರ್ಪಿಸಲಿದ್ದಾರೆ ಕನ್ನಡದ `83` ಚಿತ್ರವನ್ನು
Posted date: 30 Tue, Nov 2021 09:32:20 AM
ಇಡೀ ಭಾರತೀಯ ಚಿತ್ರ ರಂಗವೇ ಎದುರು ನೋಡುತ್ತಿರುವ ಬಹು ಭಾಷಾ ಫ್ಯಾನ್ ಇಂಡಿಯ ಸಿನಿಮಾ `83` ಭಾರತ ಏಕ ದಿನದ ವಿಶ್ವ ಕಪ್ ಕ್ರಿಕೆಟ್ ತನ್ನ ಮಡಿಲಿಗೆ ಪಡೆದ ವರ್ಷ ಕುರಿತಾದ ಸಿನಿಮಾ ಡಿಸೆಂಬರ್ ತಿಂಗಳ ಕ್ರಿಸ್ಮಸ್ ಬಿಡುಗಡೆ ಆಗಲು ಸಜ್ಜಾಗಿದೆ.

‘83’ ಕನ್ನಡದಲ್ಲಿ ಡಬ್ ಮಾಡಲಾದ ಚಿತ್ರವನ್ನು ಕ್ರಿಕೆಟ್ ಪ್ರೇಮಿ, ನಟ, ನಿರ್ದೇಶಕ, ನಿರ್ಮಾಪಕ ಕಿಚ್ಚ ಸುದೀಪ್ ಅವರು ತೆರೆಗೆ ಅರ್ಪಿಸುತ್ತಿದ್ದಾರೆ ಎಂಬುದು ಈ ಕ್ಷಣದ ಗೌರವಾನ್ವಿತ ವಿಷಯ. ಇಂದರೊಂದಿಗೆ ಕಿಚ್ಚ ಸುದೀಪ್ ರಿಲಯನ್ಸ್ ಎಂಟರ್ಟೈನ್ಮೇಂಟ್ ಜೊತೆ ಸೇರಿ ಬಹು ನಿರೀಕ್ಷಿತ ಸಿನಿಮಾ ’83’ ತೆರೆಗೆ ಅರ್ಪಣೆ ಮಾಡುತ್ತಿದ್ದಾರೆ.

ಕಳೆದ ಎರಡೂವರೆ ದಶಕಗಳಲ್ಲಿ ಕಿಚ್ಚ ಸುದೀಪ್ ಅಗಾದವಾದ ಪ್ರತಿಭೆಯನ್ನು ದೇಶದ ಉದ್ದಗಲಕ್ಕೂ ಪಸರಿಸಿದ್ದಾರೆ. ಅವರು ಭಾರತೀಯ ಚಿತ್ರರಂಗದ ಅತ್ಯುತ್ತಮ ನಟ, ಬರಹಗಾರ, ನಿರ್ಮಾಪಕ, ನಿರ್ದೇಶಕ, ಸಿ ಸಿ ಎಲ್ ಮೂಲಕ ತಮ್ಮ ನೆಚ್ಚಿನ ಕ್ರೀಡೆ ಕ್ರಿಕೆಟ್ ಬಗ್ಗೆಯೂ ಹೆಗ್ಗಳಿಕೆಯನ್ನು ಹರಡಿದ್ದಾರೆ. ರಾಜ್ಯ ಪ್ರಶಸ್ತಿ, ನಂದಿ ಪ್ರಶಸ್ತಿ, ಸೈಮ ಪ್ರಶಸ್ತಿ, ಟೊರಂಟೊ ಹಾಗೂ ಮ್ಯಾಡ್ರಿಡ್ ಫಿಲ್ಮ್ ಫೆಸ್ಟಿವಲ್ ಅಲ್ಲಿಯೂ ಇವರ ಚಿತ್ರಗಳು ಪ್ರದರ್ಶನವಾಗಿದೆ. ಈಗ, ರಕ್ತ ಚರಿತ್ರ, ದಬ್ಬಾಂಗ್ 3 ಚಿತ್ರಗಳು ಇವರ ಖ್ಯಾತಿಯನ್ನು ಹಬ್ಬಿಸಿದೆ ಸಹ.

ಕನ್ನಡದಲ್ಲಿ ತೆರೆ ಕಾಣುತ್ತಿರುವ ‘83’ ಸಿನಿಮಾವನ್ನು ನಾನು ಅರ್ಪಿಸಲು ಸಂತೋಷ ಆಗುತ್ತದೆ ಎನ್ನುವ ಕಿಚ್ಚ ಸುದೀಪ್ ಇದೊಂದು ನಂಬಲಾಗದ ಬಹುದೊಡ್ಡ ಕ್ರಿಕೆಟ್ ಚರಿತ್ರೆ ಪುಟಗಳಲ್ಲಿ ಸೇರಿರುವ 1983 ಭಾರತ ವೆಸ್ಟ್ ಇಂಡೀಸ್ ವಿರುದ್ದ ಗೆದ್ದ ಏಕದಿನದ ವಿಶ್ವ ಕಪ್ ವಿಷಯ ಕುರಿತಾದ ಚಿತ್ರ. ಕ್ರಿಕೆಟ್ ಎಂಬುದು ಭಾರತಿಯರಿಗೆ ಒಂದು ಧರ್ಮವೇ ಆಗಿ ಹೋಗಿರುವಾಗ ಈ ನೈಜ ಕಥೆಯನ್ನು ತೆರೆಯ ಮೇಲೆ ತಂದಿರುವುದಕ್ಕೆ ಅಭಿನಂದನೆಗಳು. ಇದು ನಿಜಕ್ಕೂ ಬಹು ನಿರೀಕ್ಷೆಯ ಚಿತ್ರ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ.

ಕಬೀರ್ ಖಾನ್ ನಿರ್ದೇಶನ ಹಾಗೂ ನಿರ್ಮಾಪಕ ‘83’ ಕನ್ನಡ  ಚಿತ್ರವನ್ನು ಕಿಚ್ಚ ಸುದೀಪ್ ತೆರೆಗೆ ಅರ್ಪಣೆ ಮಾಡುತ್ತಾ ಇರುವುದು ಬಹಳ ಸಂತೋಷದ ವಿಚಾರ ಎನ್ನುತ್ತಾರೆ. ದಕ್ಷಿಣ ಭಾರತದಲ್ಲಿ ಈ ಸಿನಿಮಾಕ್ಕೆ ಕಿಚ್ಚ ಸುದೀಪ್ ಇಂದ ಅರ್ಪಣೆ ಆಗುತ್ತಾ ಇರುವುದು ಹೆಮ್ಮೆಯ ವಿಚಾರ. ಕಿಚ್ಚ ಸುದೀಪ್ ಅವರು ನಮ್ಮ ತಂಡದೊಂದಿಗೆ ಸೇರಿಕೊಂಡಿರುವುದರಿಂದ ‘83’ ಸಿನಿಮಾಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುವುದು ಎಂದು ಕಬೀರ್ ಖಾನ್ ಭಾವಿಸಿದ್ದಾರೆ.

ರಣವೀರ್ ಸಿಂಗ್ ‘83’ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ನಿರ್ವಹಿಸಿದ್ದಾರೆ. ತಾಹೀರ್ ರಾಜ್ ಭಾಸಿನ್, ಜೀವ, ಸಾಕಿಬ್ ಸಲೀಂ, ಜತಿನ್ ಸಾರ್ಣ, ಚಿರಾಗ್ ಪಾಟಿಲ್, ದಿನಕರ್ ಶರ್ಮ, ನಿಶಾಂತ್ ದಾಹಿಯ, ಹಾರ್ಡಿ ಸಂಧು, ಸಾಹಿಲ್ ಖಟ್ಟರ್, ಅಮ್ಮಿ ವಿರ್ಕ್, ಅದಿನಾಥ್ ಕೊತಾರೆ, ಧೈರ್ಯ ಕರ್ವ, ಆರ್ ಬದ್ರಿ ಹಾಗೂ ಪಂಕಜ್ ತೃಪತಿ ತಾರಾಗಣದಲ್ಲಿ ಇದ್ದಾರೆ.

ಒಂದು ವಿಶೇಷ ಪಾತ್ರದಲ್ಲಿ ಜನಪ್ರಿಯ ಭಾರತೀಯ ನಟಿ ದೀಪಿಕ ಪಡುಕೋಣೆ ಕಪಿಲ್ ದೇವ್ ಪಾತ್ರದಾರಿ ರಣವೀರ್ ಸಿಂಗ್ ಪತ್ನಿ ಕ್ರಿಕೆಟಿಗ ಕಪಿಲ್ ದೇವ್ ಪತ್ನಿ ರೋಮಿ ಪಾತ್ರದಲ್ಲಿ  ಅಭಿನಯಿಸಿದ್ದಾರೆ.

ಕಿಚ್ಚ ಸುದೀಪ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೇಂಟ್ ಸಂಸ್ಥೆ ಅರ್ಪಿಸುತ್ತಿರುವ ಕಬೀರ್ ಖಾನ್ ಫಿಲ್ಮ್ಸ್ ‘83’ ಚಿತ್ರ ನಿರ್ಮಾಪಕರು ದೀಪಿಕ ಪಡುಕೋಣೆ, ಕಬೀರ್ ಖಾನ್, ವಿಷ್ಣು ವರ್ಧನ್ ಇಂದುರಿ, ಸಾಜಿದ್ ನಾಡಿಯದ್ವಾಲ, ಫಾಂಟಮ್ ಫಿಲ್ಮ್ಸ್ ಹಾಗೂ 83 ಫಿಲ್ಮ್ ಲಿಮಿಟೆಡ್.

ಕನ್ನಡದ 83 ಸಿನಿಮಾವನ್ನು ಶಾಲಿನಿ ಆರ್ಟ್ಸ್ ಹಾಗೂ ರಿಲಯನ್ಸ್ ಎಂಟರ್ಟೈನ್ಮೇಂಟ್ ಸಂಸ್ಥೆ ವಿತರಣೆಯ ಜವಾಬ್ದಾರಿಯನ್ನು ಡಿಸೆಂಬರ್ 24, 2021 ರಿಂದ ಹೊತ್ತುಕೊಂಡಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed