ಹೆಸರು ತಿಳಿಸಿ ಬಹುಮಾನ ಗೆಲ್ಲಿ
Posted date: 07 Wed, Sep 2022 09:55:23 AM
ಚಂದನವನದಲ್ಲಿ ಚಿತ್ರತಂಡವು ತಮ್ಮ ಸಿನಿಮಾದ ಬಗ್ಗೆ ಸದ್ದು ಮಾಡಲು ನಾನಾ ತರಹದ ಯೋಜೆನೆಗಳನ್ನು ಕೈಗೊಳ್ಳುತ್ತಾರೆ. ಅದರಂತೆ ’ಸ್ಟಾಕರ್’ ಚಿತ್ರ ನಿರ್ಮಾಣ ಮಾಡಿದ್ದ ಎಸ್‌ಎಂಎಲ್ ಪ್ರೊಡಕ್ಷನ್ ಸಂಸ್ಥೆಯು ಈಗ ಎರಡನೇ ಚಿತ್ರವನ್ನು ಕೈಗೆತ್ತಿಕೊಂಡಿದೆ. ’ಪ್ರೊಡಕ್ಷನ್ ನಂ.2’ ಅಂತ ಬಿಂಬಿಸಿಕೊಂಡಿದ್ದು, ಹೆಸರನ್ನು ಸೂಚಿಸಲು ಸಿನಿರಸಿಕರಿಗೆ ಬಿಟ್ಟಿದ್ದಾರೆ. ಹಾಗಂತ ಸುಮ್ಮನೆ ಕೇಳದೆ, ಸೂಕ್ತ ಶೀರ್ಷಿಕೆ ನೀಡಿದವರಿಗೆ ಇಪ್ಪತ್ತೊಂದು ಸಾವಿರ ಬಹುಮಾನ ನೀಡುವುದಾಗಿ ಹೇಳಿಕೊಂಡಿದೆ. ಇದಕ್ಕಾಗಿ ಫಸ್ಟ್ ಲುಕ್ ಪೋಸ್ಟರ್‌ನ್ನು ಬಿಡುಗಡೆ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲಿ ರಮೇಶ್ ನಾಯಕನಾಗಿ ಎರಡನೇ ಅನುಭವ. ಹೇಮಂತ್ ನಿರ್ದೇಶನದಲ್ಲಿ ಸುಧೀರ್ ಛಾಯಾಗ್ರಹಣ ಇರಲಿದೆ. 
 
ಹತ್ತು ಅರ್ಥಪೂರ್ಣ ಹೆಸರು ನೀಡಿದವರಿಗೆ ಸಿನಿಮಾದಲ್ಲಿ ಅವಕಾಶ ನೀಡಲಾಗುವುದು.  ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ಸಿದ್ದಗೊಳ್ಳುತ್ತಿರುವುದರಿಂದ ಮೂರು ಭಾಷೆಗೆ ಹೊಂದುವಂತೆ ಟೈಟಲ್ ಇರತಕ್ಕದು ಹಾಗೂ ಸಣ್ಣದೊಂದು ವಿವರಣೆ ನೀಡಬೇಕು. ಒಂದೇ ಶೀರ್ಷಿಕೆಯನ್ನು ಹೆಚ್ಚು ಜನ ನೀಡಿದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಗುವುದು. ಸೆಲೆಬ್ರಿಟಿಗಳು ಲಾಟರಿ ತೆಗೆದು ಹೆಸರನ್ನು ಹೇಳುವರು. ಹೆಚ್ಚಿನ ವಿವರಗಳಿಗೆ www.smlproductions.com,sml productions Facebook page, info@smlproductions.com ಅಥವಾ ಮೊಬೈಲ್ ಸಂಖ್ಯೆ 8867579595 ಗೆ ಕರೆ ಮಾಡಿ ಮಾಹಿತಿ ತಿಳಿಯಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed