ನಿಮ್ಮ ನೆಚ್ಚಿನ ನಟ ರಮೇಶ್ ಅರವಿಂದ್ ಬರ್ತಡೇ ದಿನ ಅವರನ್ನು ನೇರವಾಗಿ ಭೇಟಿ ಮಾಡಿ ಶುಭಾಶಯ ಹೇಳಿ
Posted date: 09 Fri, Sep 2022 � 02:15:10 PM
ನಿಮ್ಮ ನೆಚ್ಚಿನ ನಟರ ಬರ್ತಡೇ ದಿನ ಅವರನ್ನು ನೇರವಾಗಿ ಭೇಟಿ ಮಾಡಿ ಶುಭಾಶಯ ಹೇಳಿರ್ತೀರಿ. 
ಸೋಶಿಯಲ್ ಮೀಡಿಯಾ ಮೂಲಕ ಶುಭಾಶಯ ಹೇಳಿರ್ತೀರಿ..
ಆದ್ರೆ  ಯಾವ ನಟರಿಗಾದ್ರೂ ಫೋನ್ ಮಾಡಿ ಶುಭಾಶಯ ಹೇಳಿದ್ದೀರಾ? 

ಇಲ್ಲ ಎನ್ನುವುದು ನಿಮ್ಮ ಉತ್ತರವಾಗಿದ್ದರೆ..

ನೀವು ಕನ್ನಡದ ಹೆಮ್ಮೆಯ ನಟ ರಮೇಶ್ ಅರವಿಂದ್ ಅವರಿಗೆ ಸೆಪ್ಟೆಂಬರ್ 10 ರಂದು ವಾಟ್ಸಪ್ ಮೂಲಕ   ಶುಭಾಶಯ ಹೇಳಬಹುದು ಮತ್ತು ನೀವು ಅವರಿಂದ ಪ್ರತಿಕ್ರಿಯೆಯನ್ನು ಪಡೆಯಬಹುದು. 

ಹೇಗೆ ಅಂತೀರಾ..? 

ತುಂಬಾ ಸರಳ.. 
89515 99009
89516 99009 
ನಂಬರ್ ಗಳಿಗೆ ವಾಟ್ಸಪ್ ಮಾಡುವ ಮೂಲಕ ನೀವು ರಮೇಶ್ ಅರವಿಂದ್ ಅವರನ್ನು ನೇರವಾಗಿ ತಲುಪಬಹುದು.  

ಆ ವಾಟ್ಸಪ್ ನಂಬರ್ ಗಳಿಗೆ ನೀವು ನಿಮ್ಮ ಶುಭಾಶಯ ತಿಳಿಸಬಹುದು, ಪ್ರಶ್ನೆಗಳನ್ನು ಕೇಳಬಹುದು, ಚಿತ್ರಗಳನ್ನು ಕಳಿಸಬಹುದು. 

ಹ್ಮಾ.. ನೆನಪಿರಲಿ!
ಹೀಗೆ ಮೆಸೇಜ್ ಮಾಡುವಾಗ ನಿಮ್ಮ ಹೆಸರು, ಊರು ಮತ್ತು ಜಿಲ್ಲೆಯನ್ನು ತಪ್ಪದೆ ನಮೂದಿಸಿರಬೇಕು. 

ನೀವು ಹಾಗೆ ಮೆಸೇಜ್ ಕಳಿಸಿದ ನಂತರ ಪ್ರತಿಯೊಬ್ಬರಿಗೂ ರಮೇಶ್ ಅರವಿಂದ್ ಅವರೇ ಉತ್ತರಿಸಲಿದ್ದಾರೆ. 
ಎಲ್ಲರಿಗಿಂತ ವಿಭಿನ್ನವಾಗಿ ಶುಭಾಶಯ ತಿಳಿಸಿದವರಿಗೆ ಖುದ್ದಾಗಿ ರಮೇಶ್ ಅರವಿಂದ್ ಅವರೇ ಕರೆ ಮಾಡಿ ಮಾತನಾಡಲಿದ್ದಾರೆ.  


ಇನ್ನ್ಯಾಕೆ ತಡ.. ಕೂಡಲೇ ಮೆಚ್ಚಿನ ನಟ ರಮೇಶ್ ಅರವಿಂದ್ ಅವರಿಗೆ ವಾಟ್ಸಪ್ ಮೆಸೇಜ್ ಕಳಿಸಿ.    
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed