ಮಾತಿನ ಮನೆಯಲ್ಲಿ `ಶಿಶಿರ`
Posted date: 26/March/2009

ಚಿತ್ರಮಂದಿರದತ್ತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಆ ಚಿತ್ರದ ಶೀರ್ಷಿಕೆ ಪ್ರಧಾನ ಪಾತ್ರ ವಹಿಸುತ್ತದೆ. ಮಂಡ್ಯದ ಹುಡುಗ ಮಂಜು ಸ್ವರಾಜ್ ಈ ಹಂತದಲ್ಲಿ ಗೆದ್ದಿದ್ದಾರೆ. 'ಶಿಶಿರ' ಎಂಬ ಆಕರ್ಷಕ ಹೆಸರನ್ನಿಟ್ಟುಕೊಂಡು ಒಂದು ವಿಶಿಷ್ಟ ಕಥೆಯನ್ನು ಮಾಡಿರುವ ಮಂಜು ಸೋಮವಾರಪೇಟೆ ಸುತ್ತಮುತ್ತ ಅಪರೂಪದ ಸ್ಥಳಗಳಲ್ಲಿ ಶೂಟಿಂಗ್ ಮುಗಿಸಿದ್ದು, ಈಗ ಪ್ರಸಾದ್ ಡಬ್ಬಿಂಗ್ ಸೆಂಟರ್‌ನಲ್ಲಿ 'ಶಿಶಿರ'ನಿಗೆ ಮಾತನಾಡಿಸುವುದರಲ್ಲಿ  ಮಗ್ನರಾಗಿದ್ದಾರೆ.  ನಟಿ  ಪ್ರೇಮ ಅವರು ವಿಶೇಷ ಪಾತ್ರವೊಂದರಲ್ಲಿ ನಟಿಸಿರುವ ಈ  ಚಿತ್ರಕ್ಕೆ  ಕಳೆದ  ಬುಧವಾರದಿಂದ ಮಾತುಗಳ ಮರುಲೇಪನ ಕಾರ್ಯ ನಡೆಯುತ್ತಿದ್ದು, ಸದ್ಯದಲ್ಲೇ ರೀ-ರೆಕಾರ್ಡಿಂಗ್ ಪ್ರಾರಂಭವಾಗಲಿದೆ.  ಚಿತ್ರದ ೫ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುರೇಶ್ ಬಾಬುರವರ ಛಾಯಾಗ್ರಹಣ, ಕೆ.ಎಂ. ಪ್ರಕಾಶ್‌ರ ಸಂಕಲನ ಇದೆ. ಯಶಸ್-ಮೇಘನಾ, ಯುವ ಜೋಡಿಯಾಗಿ ಅಭಿನಯಿಸಿದ್ದು, ಜೊತೆಗೆ ೨ ಪುಟಾಣಿಗಳು ಹಾಗೂ ೭.೫ ಅಡಿ ಎತ್ತರದ ಸಂತೋಷ್ ಎಂಬ ಯುವಕ ವಿಶೇಷವಾಗಿ ಅಭಿನಯಿಸಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed