ಬಾಬಾನ ಹಾಡುಗಳಿಗೆ ಏಳು ಸಂಗೀತ ನಿರ್ದೇಶಕರ ಕಂಠದಾನ
Posted date: 18 Sat, Jun 2022 08:18:23 AM
ಸಾಹಿತಿ, ನಿರ್ದೇಶಕ ಕೆ.ರಾಮ್‌ನಾರಾಯಣ್ ಅಪ್ಪಟ್ಟ ಶ್ರೀ ಶಿರಡಿ ಸಾಯಿಬಾಬ ಭಕ್ತ. ಇವರ ನಿರ್ದೇಶನದ ’ರಾಜಾಮಾರ್ತಾಂಡ’ ’ಅಬ್ಬರ’ ಚಿತ್ರಗಳಲ್ಲಿ ಬ್ಯುಸಿ ಇದ್ದರೂ  ಬಿಡುವು ಮಾಡಿಕೊಂಡು ’ಸಾಯಿ ನನ್ನಯ್ಯ’ ಶೀರ್ಷಿಕೆಯಲ್ಲಿ ಏಳು ಹಾಡುಗಳನ್ನು ರಚಿಸಿದ್ದಾರೆ. ಸದರಿ ಗೀತೆಗಳನ್ನು ಮೆಚ್ಚಿಕೊಂಡ ಖ್ಯಾತ ಸಂಗೀತ ನಿರ್ದೇಶಕರುಗಳು ತಾವೇ ಹಾಡಿಗೆ ಕಂಠದಾನ ಮಾಡುವುದಾಗಿ ತಿಳಿಸಿದ್ದಾರೆ. ಅದರಂತೆ ವಿ.ಮನೋಹರ್, ರವಿಬಸ್ರೂರು, ವೀರಸಮರ್ಥ್, ಧರ್ಮವಿಶ್, ಅನೂಪ್‌ಸೀಳನ್, ಶ್ರೀಧರ್‌ಸಂಭ್ರಮ್ ಹಾಗೂ ಆರ್.ಎಸ್.ಗಣೇಶ್‌ನಾರಾಯಣ್ ಭಕ್ತಿ ಪರವಶದಿಂದ ಹಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸಂಗೀತ ಎಸ್.ನಾಗು, ವಾದ್ಯಗಳ ಸಂಯೋಜಕರು ಕುಶಲ.ಎಸ್ ಅವರದಾಗಿದೆ. ಗುರುವಾರದಂದು ವಿ.ಮನೋಹರ್ ಹಾಡಿರುವ ’ಸಾಯಿ ನನ್ನಯ್ಯ’ ಶೀರ್ಷಿಕೆ ಮೊದಲ ಗೀತೆಯನ್ನು ಬಾಬಾ ಸನ್ನಿದಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದೇ ರೀತಿ ಪ್ರತಿ ಗುರುವಾರದಂದು ಸೆಲಬ್ರಿಟಿಗಳಿಂದ ಲೋಕಾರ್ಪಣೆ ಮಾಡಲು ತಂಡವು ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ’ಆರೆಂಜ್ ಆಡಿಯೋ’ ಮೂಲಕ ಬಿಡುಗಡೆಗೊಂಡ ಹಾಡು ವೈರಲ್ ಆಗಿದ್ದು, ಎರಡನೇ ಗೀತೆಗೆ ಭಕ್ತಾದಿಗಳು ಕಾಯುತ್ತಿದ್ದಾರೆ. ಸದರಿ ಹಾಡುಗಳನ್ನು ಪವರ್ ಸ್ಟಾರ್ ಪುನೀತ್‌ರಾಜ್‌ಕುಮಾರ್ ಅವರಿಗೆ ಅರ್ಪಣೆ ಮಾಡಲಾಗಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed