ವಿಮಾನ ನಿಲ್ದಾಣದಲ್ಲಿ ಪೆರೋಲ್
Posted date: 8/July/2009

ಗೌತಮ್ ಮಿಷನ್ ಲಾಂಛನದಲ್ಲಿ ಶ್ರೀಮತಿ ಮಾಲಾ ಎಸ್. ಅರಸ್ ನಿರ್ಮಿಸುತ್ತಿರುವ ಶೇಖರ್ ಕಥೆ, ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಪೆರೋಲ್ ಚಿತ್ರಕ್ಕೆ ಕಳೆದ ವಾರ ವಿಮಾನ ನಿಲ್ದಾಣದಲ್ಲಿ ಚಿತ್ರದ ನಾಯಕ ಪ್ರದೀಪ್ ದೂರದ ಲಂಡನ್ ನಗರದಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯುತ್ತಾನೆ. ನಾಯಕನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ತನ್ನ ಸ್ನೇಹಿತರಾದ ವಿಶ್ವಾಸ್, ಲಿಖಿತ್ ಶೆಟ್ಟಿ ಬಂದಿರುತ್ತಾರೆ. ನಾಯಕನ್ನು ಕರೆದುಕೊಂಡು ಈ ಮೂವರು ಸೇರಿ ಕಾರಿನಲ್ಲಿ ಬರುತ್ತಿದ್ದಾಗ ಮಾರ್ಗ ಮಧ್ಯೆ ಆಟೋ ಒಂದಕ್ಕೆ ಡಿಕ್ಕಿ ಹೊಡೆಯುತ್ತಾರೆ. ಆಗ ಆಟೋ ಚಾಲಕನಿಗೂ ಇವರಿಗೂ ಘರ್ಷಣೆ ನಡೆಯುತ್ತದೆ. ಇದೇ ಸಮಯಕ್ಕೆ ಆ ಏರಿಯಾದ ಡಾನ್ ನಾಯಕನ ಸ್ನೇಹಿತನಾದ ಶರತ್ ಬಂದು ಈ ಗಲಾಟೆಯನ್ನು ನಿಲ್ಲಿಸುತ್ತಾನೆ. ಈ ಮೇಲ್ಕಂಡ ದೃಶ್ಯವನ್ನು ಪೆರೋಲ್ ಚಿತ್ರಕ್ಕೆ ಚಿತ್ರೀಕರಿಸಿಕೊಳ್ಳಲಾಯಿತು.

ಚಿತ್ರಕ್ಕೆ ಗುಂಡ್ಲುಪೇಟೆ ಸುರೇಶ್ ಛಾಯಾಗ್ರಹಣ, ಬಾಲಾಜಿ ಕೆ. ಮಿತ್ರನ್-ಸಂಗೀತ, ಸುರೇಶ್ ಅರಸ್-ಸಂಕಲನ, ಬಿ.ಎ.ಮಧು-ಸಂಭಾಷಣೆ, ಎಸ್.ಎಲ್.ಬಾಲಾಜಿ-ನೃತ್ಯನಿರ್ದೇಶನ, ವಿ.ನಾಗೇಂದ್ರ ಪ್ರಸಾದ್-ಬರಗೂರು ರಾಮಚಂದ್ರಪ್ಪ-ಸಾಹಿತ್ಯ, ಎಸ್.ಬಾಹುಬಲಿ ಸುಧಾಕರ್-ಸಹನಿರ್ದೇಶನ, ಎನ್.ಎಸ್.ಚಂದ್ರಶೇಖರ್-ಬಿ.ವಿ.ಜಯಕುಮಾರ್-ನಿರ್ಮಾಣ ನಿರ್ವಹಣೆ ಇರುವ ಈ ಚಿತ್ರದ ತಾರಾಬಳಗದಲ್ಲಿ ಪ್ರದೀಪ್, ವಿಶ್ವಾಸ್, ಲಿಖಿತ್ ಶೆಟ್ಟಿ, ಶರತ್‌ಕುಮಾರ್, ಸೂರಜ್, ರಾಣಿ, ಸುಪ್ರಿತಾ, ಕೃತಿಕಾ, ಕಿಶೋರ್, ಬಿ.ಸುರೇಶ್ ಇನ್ನೂ ಮೊದಲಾದವರು ಅಭಿನಯಿಸುತ್ತಿದ್ದಾರೆ.Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed