ರೈಮ್ಸ್ ನಾಳೆಯಿಂದ ತೆರೆಗೆ
Posted date: 09 Thu, Dec 2021 04:38:36 PM
ಸೈಕಲಾಜಿಕಲ್ ಕ್ರೈಂ, ಥ್ರಿಲ್ಲರ್  ಕಥಾಹಂದರ  ಹೊಂದಿರುವ ರೈಮ್ಸ್  ಚಿತ್ರ ಈವಾರ ನಾಳೆಯಿಂದ ರಾಜ್ಯಾದ್ಯಂತ  ಬಿಡುಗಡೆಯಾಗುತ್ತಿದೆ, 
ಪ್ರತಿಬಾರಿ ರೈಮ್ಸ್ ಪ್ಲೇ ಆದಾಗ ಒಂದೊಂದು ಕೊಲೆ ಆಗ್ತಿರುತ್ತೆ.  ನಿಗೂಢ ಕೊಲೆಗಳ ಹಾಗೂ ರೈಮ್ಸ್ ಜಾಡು ಪತ್ತೆ ಹಚ್ಚುವ ಸಸ್ಪೆನ್ಸ್ ಕಥೆ ಈ ಚಿತ್ರದಲ್ಲಿದೆ. ಈಗಾಗಲೇ ನಾಲ್ಕೈದು ಚಿತ್ರದಲ್ಲಿ ಅಭಿನಯಿಸಿರುವ ಅಜಿತ್ ಜಯರಾಜ್ ಅವರು ರೈಮ್ಸ್ ಚಿತ್ರದಲ್ಲಿ ಪೋಲಿಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಂದದ ಮೊಗದ ಸುಷ್ಮಾ ಚಿತ್ರದ ನಾಯಕಿಯಾಗಿದ್ದಾರೆ.
 
ಅಜಿತ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದಿರುವ ರೈಮ್ಸ್ ಚಿತ್ರಕ್ಕೆ ಜ್ಞಾನಶೇಖರ್ ಸಿದ್ದಯ್ಯ ಜೊತೆ ಸ್ನೇಹಿತರಾದ ರವಿಕುಮಾರ್, ಗಿರೀಶ್ ಗೌಡ, ರಮೇಶ್ ಆರ್ಯ ಬಂಡವಾಳ ಹೂಡಿದ್ದಾರೆ.
 
ಚಿತ್ರದ ಉಳಿದ ತಾರಾಗಣದಲ್ಲಿ ಶುಭಾ ಪೂಂಜಾ, ಅಪರ್ಣ, ಮಿಮಿಕ್ರಿ ಗೋಪಿ, ಅಭಿನಯ ಮುಂತಾದವರು ನಟಿಸಿದ್ದಾರೆ. ರೈಮ್ಸ್ ಚಿತ್ರವನ್ನ ಸ್ಕ್ವೇರ್ ಕಾನ್ಸೆಪ್ಟ್ ಸಂಸ್ಥೆಯಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.ಸಂಗೀತ ನಿರ್ದೇಶಕ ಶಕ್ತಿ ಕತೆಗೆ ಒಪ್ಪುವಂತ  ಬಿಜಿಎಂ ನೀಡಿದ್ದಾರೆ. ಛಾಯಾಗ್ರಹಣ ಅರ್ಜುನ್ ಅಕೂಟ್. ಸಂಕಲನ ಸಂತೋಷ್ ಅವರದಾಗಿದೆ. ಕನ್ನಡ, ತಮಿಳು,ತೆಲುಗು, ಮಲಯಾಳಂ ನಾಲ್ಕು ಭಾಷೆಗಳಲ್ಲಿ ಚಿತ್ರ ಮೂಡಿಬಂದಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed