ವಿಷ್ಣು ಮಂಚು ಅಭಿನಯದ `ಜಿನ್ನಾ`ಚಿತ್ರ ಅಕ್ಟೋಬರ್ 21 ರಂದು ವಿಶ್ವದಾದ್ಯಂತ ಬಿಡುಗಡೆ
Posted date: 16 Sun, Oct 2022 08:06:25 AM
ತೆಲಗು ನಟ ವಿಷ್ಣು ಮಂಚು ನಾಯಕರಾಗಿ ಅಭಿನಯಿಸಿರುವ ಆ್ಯಕ್ಷನ್, ಕಾಮಿಡಿ ಜಾನರ್ ನ  `ಜಿನ್ನಾ` ಸಿನಿಮಾ ತೆಲುಗು,  ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಗೆ ಸಿದ್ದವಾಗಿದ್ದು, ಇದೇ ಅಕ್ಟೋಬರ್ 21 ರಂದು ವಿಶ್ವಾದಾದ್ಯಂತ ತೆರೆಗೆ ಬರುತ್ತಿದೆ. 

ಆ ಸಲುವಾಗಿ ಇತ್ತೀಚೆಗೆ ನಟ ವಿಷ್ಣು ಮಂಚು ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು.  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿಷ್ಣು ಮಂಚು, ಈ ಮೊದಲು ನಾನು ೨೦೧೨ರಲ್ಲಿ ಸಿನಿಮಾ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೆ. ಆಗ ನನಗೆ  ಅಂಬರೀಶ್ ಅವರು ತುಂಬಾ ಸಪೋರ್ಟ್ ಮಾಡಿದ್ದರು. ಅವರು ನನ್ನ ತಂದೆ ಇದ್ದ ಹಾಗೆ. ಈಗ ನಮ್ಮ  ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಬಂದಿದ್ದೀನಿ.  ನಮ್ಮ  `ಜಿನ್ನಾ` ಸಿನಿಮಾ ತೆಲುಗು,  ಮಲೆಯಾಳಂ, ಹಿಂದಿ ಭಾಷೆಗಳಲ್ಲಿ ಅಕ್ಟೋಬರ್ 21ರಂದು ಬಿಡುಗಡೆಯಾಗಲಿದೆ.‌ ಈ ಸಿನಿಮಾವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವಂತೆ ನಾನು ರಾಕ್ ಲೈನ್ ವೆಂಕಟೇಶ್ ಅವರನ್ನು ಕೇಳಿದಾಗ, ಅವರು ಮುಕುಂದ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ ಅವರನ್ನು ಪರಿಚಯಿಸಿದರು. ವೆಂಕಟೇಶ್ ಅವರು ನಮ್ಮ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಿದ್ದಾರೆ.
 
ಈ ಕಥೆಯನ್ನು ನನ್ನ ತಂದೆ ಮೋಹನ್ ಬಾಬು ಅವರು ಕೇಳಿ ಒಕೆ ಮಾಡಿ, ನಿರ್ಮಾಣ ಮಾಡಲು ಮುಂದಾದರು. ನನಗೆ ಕಥೆ ಹೇಳುವ ಮೊದಲೇ ನಿರ್ದೇಶಕ ಸೂರ್ಯ ಸನ್ನಿಲಿಯೋನ್ ಡೇಟ್ ತೆಗೆದುಕೊಂಡಿದ್ದರು. ಇದು ನನ್ನ ಫೇವರಿಟ್ ಆ್ಯಕ್ಷನ್, ಕಾಮಿಡಿ ಜಾನರ್ ಚಿತ್ರವಾಗಿದ್ದು, ಸಸ್ಪೆನ್ಸ್, ಥ್ರಿಲ್ಲರ್ ಕೂಡ ಒಳಗೊಂಡಿದೆ. ಈ ಸಿನಿಮಾವನ್ನು ಕನ್ನಡಕ್ಕೆ ಡಬ್ ಮಾಡಿಲ್ಲ ತೆಲುಗು. ಭಾಷೆಯಲ್ಲೇ ಬಿಡುಗಡೆ ಮಾಡುತ್ತಿದ್ದೇವೆ.  ಈಗ ದಕ್ಷಿಣ ಭಾರತದ ಸಿನಿಮಾಗಳಿಗೆ ಒಳ್ಳೆಯ ಸಮಯ ಎನ್ನಬಹುದು. ಸಿನಿಮಾ ಚೆನ್ನಾಗಿದ್ದರೆ ಇಡೀ ಭಾರತ ಯಾವ ಭಾಷೆಯಲ್ಲಿ ಆದರೂ ನೋಡುತ್ತದೆ. ಅದಕ್ಕೆ `ಕಾಂತಾರ` ಸಿನಿಮಾ ಒಳ್ಳೆ ಉದಾಹರಣೆ. ಮುಂಬೈನಲ್ಲಿ `ಕಾಂತರ` ಕನ್ನಡದಲ್ಲೇ ಒಂದು ಶೋ ಇತ್ತು. ಅದನ್ನು ನೋಡಿ ಜನ ಒಪ್ಪಿದರು. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಸಿನಿಮಾ ಮಾಡುವ ಆಸೆ ಇದೆ ಎಂದರು ನಾಯಕ ವಿಷ್ಣು ಮಂಚು.

ಈಗಾಗಲೇ ಚಿತ್ರದ ಎಲ್ಲಾ  ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್‌ ಬರುತ್ತಿದೆ‌. ನಿಮ್ಮೆಲ್ಲರ ಸಹಕಾರವಿರಲಿ ಎಂದರು ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್.

ಚಿತ್ರದಲ್ಲಿ ನಟಿಸಿರುವ ಸದ್ದಾಂ ಹುಸೇನ್‌ ತಮ್ಮ ಪಾತ್ರದ ಕುರಿತು ಮಾತನಾಡಿದರು.

ಕರ್ನಾಟಕದಲ್ಲಿ ತೆಲುಗು ಭಾಷೆಯಲ್ಲಿಯೇ 50 ರಿಂದ 60 ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ವಿತರಕ ವೆಂಕಟೇಶ್ ಹೇಳಿದರು. ನಿರ್ಮಾಪಕ ಎನ್. ಎಸ್ ರಾಜಕುಮಾರ್, ಪರಿಜಾತ ಮಧುಸೂದನ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಷ್ಣು ಮಂಚು ಅವರಿಗೆ ನಾಯಕಿಯರಾಗಿ ಸನ್ನಿಲಿಯೋನ್ ಹಾಗೂ ಪಾಯಲ್ ರಜಪೂತ್ ಅಭಿನಯಿಸಿದ್ದಾರೆ. "ಜಿನ್ನಾ" ಚಿತ್ರವನ್ನು ಸೂರ್ಯ ನಿರ್ದೇಶನ ಮಾಡಿದ್ದು, ಮೋಹನ್ ಬಾಬು ಅವರು ನಿರ್ಮಾಣ ಮಾಡಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed