ಸ್ನೇಹದ ಬೆಲೆ ತಿಳಿಸುವ ಬಡ್ಡೀಸ್ -3.5/5 ***
Posted date: 26 Sun, Jun 2022 06:16:54 PM
ಪ್ರೀತಿ, ಕಾಲೇಜು, ಶ್ರೀಮಂತ ಕುಟುಂಬ, ಅನಾಥ ಸ್ನೇಹಿತರು ಹೀಗೆ ಇಷ್ಟು ಪಾತ್ರಗಳ ಸುತ್ತ ಇಂದಿನ ಹುಡುಗ ಹುಡುಗಿಯರಿಗೆ ಹೇಳಬೇಕಾದ ಕಥೆಯನ್ನು ಬಡ್ಡೀಸ್ ಚಿತ್ರದಲ್ಲಿ ತೋರಿಸಲಾಗಿದೆ. ನಾಯಕ ಖ್ಯಾತ ಉದ್ಯಮಿ ಮಗ. ಚಿಕ್ಕವನಿದ್ದಾಗೇ ಅಮ್ಮನನ್ನು ಕಳೆದುಕೊಂಡು ಏಕಾಂಗಿಯಾದೆ ಎಂಬ ಕೊರಗಿನಲ್ಲಿರುತ್ತಾನೆ. ಅದನ್ನು ನೀಗಿಸಲು ಅಪ್ಪನು ಮೂವರು ಅನಾಥ ಹುಡುಗರನ್ನು ಮಗನ ಹುಟ್ಟುಹಬ್ಬಕ್ಕೆ ಉಡುಗೊರೆ ನೀಡುತ್ತಾನೆ. ಅಲ್ಲಿಂದ ಪುಟ್ಟ ಮನಸ್ಸು ಖುಷಿಯಾಗುತ್ತದೆ. ಮುಂದೆ ಎಲ್ಲರೂ ಕಾಲೇಜು ಸೇರುತ್ತಾರೆ. ಗೆಳಯರ ಎಲ್ಲಾ ಖರ್ಚು ವೆಚ್ಚಗಳನ್ನು ಆತನೆ ನೋಡಿಕೊಳ್ಳುತ್ತಿರುತ್ತಾನೆ. ಹೀಗೆ ಸಾಗುವ ಕಥೆಯಲ್ಲಿ ಬಾಲ್ಯದ ಗೆಳತಿ ಕಥಾನಾಯಕಿ ಎಂಟ್ರಿಯಾಗುತ್ತದೆ. ಇಬ್ಬರ ನಡುವೆ ಪ್ರೀತಿ ಹುಟ್ಟುತ್ತದೆ. ಪ್ರೀತಿಗೆ ಒಪ್ಪಿ ನಿಶ್ಚಿತಾರ್ಥ ನಡೆಯುತ್ತದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ನಿರ್ಣಯಿಸುತ್ತಾರೆ. ಮುಂದಿನ ಖರ್ಚು ವೆಚ್ಚಗಳನ್ನು ನೋಡಿಕೊಳ್ಳುವ ಸ್ನೇಹಿತರಿಗೆ ಚಿಂತೆ ಕಾಡುತ್ತದೆ. ಅದಕ್ಕೊಂದು ಕೆಟ್ಟ ನಿರ್ಧಾರಕ್ಕೆ ಬಂದು ಸ್ನೇಹಿತನನ್ನೆ ಕಿಡ್ನಾಪ್ ಮಾಡಿ ಹಣದ ಬೇಡಿಕೆ ಇಡುತ್ತಾರೆ. ಇದರಿಂದ ಅವರುಗಳ ಕಾರ್ಯ ಸಪಲವಾಯಿತೆ. ಪ್ರೀತಿ ಏನಾಯಿತು ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆ. 

ಪ್ರಾರಂಭದಲ್ಲಿ ಖುಷಿಯಿಂದ ಹೋದರೆ, ವಿರಾಮದ ನಂತರ ಥ್ರಿಲ್ಲರ್ ರೂಪದಲ್ಲಿ ಬಿಚ್ಚಿಕೊಳ್ಳುತ್ತದೆ. ಅಲ್ಲಿಂದ ನಾಯಕ ಪೋಲೀಸ್, ಹಾಗೂ ಅಪರಾಧಿಗಳ ಆಟ ಶುರುವಾಗುತ್ತದೆ. ಎಲ್ಲವನ್ನು ಸಮರ್ಪಕವಾಗಿ ನಿಭಾಯಿಸಿರುವ ನಿರ್ದೇಶಕ ಗುರುತೇಜ್‌ಶೆಟ್ಟಿ ಅಭಿನಂದನೆಗೆ ಪಾತ್ರರು. ಕಿರಣ್‌ರಾಜ್ ನಾಯಕನಾಗಿ ಡ್ಯಾನ್ಸ್ ಫೈಟ್‌ನಲ್ಲಿ ಸೈ ಅನಿಸಿಕೊಂಡಿದ್ದಾರೆ. ನಾಯಕಿ ಸಿರಿಪ್ರಹ್ಲಾದ್ ಚೆಂದ ಕಾಣುತ್ತಾರೆ. ಸಂಗೀತಕ್ಕಿಂತ ಹಿನ್ನಲೆ ಶಬ್ದ ಕೆಲಸವನ್ನು ನಿರ್ವಹಿಸಿರುವ ಜ್ಯೂಡೋಸ್ಯಾಂಡಿ ನೆನಪಿನಲ್ಲಿ ಉಳಿಯುತ್ತಾರೆ. ಗೋಪಾಲಕೃಷ್ಣದೇಶಪಾಂಡೆ ಅವರ ಅಭಿನಯ ಕಾಡುತ್ತದೆ. ಭಾರತಿಶೆಟ್ಟಿ ನಿರ್ಮಾಪಕಿಯಾಗಿ ಉತ್ತಮ ಸಿನಿಮಾ ನೀಡಿದ್ದಾರೆ ಎನ್ನಬಹುದು. ಗೆಳೆಯರ ಕುರಿತು ನೋಡುವ ಆಸಕ್ತಿ ಇರುವವರು ಬಡ್ಡೀಸ್‌ನ್ನು ವೀಕ್ಷಿಸಬಹುದು.  
***
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed