ರಾಗಿಣಿ ನಟನೆಯ ``ಸಾರಿ`` ಚಿತ್ರಕ್ಕೆ ಚಾಲನೆ
Posted date: 10 Wed, Nov 2021 11:15:15 AM
ಆ್ಯಕ್ಷನ್, ಕ್ರೈಂ, ಥ್ರಿಲ್ಲರ್ ಕಥಾಹಂದರ ಒಳಗೊಂಡಿರುವ ಸಾರಿ (ಕರ್ಮ ರಿಟರ್ನ್ಸ್) ಎಂಬ ನಾಯಕಿ ಪ್ರಧಾನ  ಚಿತ್ರದ ಮೂಲಕ ನಟಿ ರಾಗಿಣಿ ದ್ವಿವೇದಿ ಅವರು ಬಹಳ ದಿನಗಳ ನಂತರ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಈ ಹಿಂದೆ ಮಾಡಿರದ ವಿಶೇಷ ಪಾತ್ರದಲ್ಲಿ ರಾಗಿಣಿ  ಕಾಣಿಸಿಕೊಳ್ಳಲಿದ್ದಾರೆ.

ಕಿಸ್ ಇಂಟರ್ನ್ಯಾಷನಲ್ ಪ್ರೊಡಕ್ಷನ್ (ಕೆನಡ)ಅಡಿಯಲ್ಲಿ   ಆದ‌ ನವೀನ್ ಕುಮಾರ್ (ಕೆನಡಾ ) ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಬ್ರಹ್ಮ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ  ಈ ಚಿತ್ರದ ಮುಹೂರ್ತ ಸಮಾರಂಭ ಮಾಗಡಿ ರಸ್ತೆಯ,ಮಾಚೋಹಳ್ಳಿ ಇರುವ ಲಕ್ಕೇನಹಳ್ಳಿ ಗ್ರಾಮದೇವತೆ ದೇವಸ್ಥಾನದಲ್ಲಿ  ಮಂಗಳವಾರ ನೆರವೇರಿತು. ಕಳೆದ ವಾರವೇ ನಡೆಯಬೇಕಿದ್ದ ಈ ಕಾರ್ಯಕ್ರಮವನ್ನು ಪುನೀತ್ ರಾಜ್‍ಕುಮಾರ್ ಅವರ ಅಗಲಿಕೆಯ ದುಃಖದಲ್ಲಿ  ಮುಂದೂಡಲಾಗಿತ್ತು.

ಈ ಹಿಂದೆ ಇದೇ ನಿರ್ಮಾಪಕ, ನಿರ್ದೇಶಕರ ನಿರ್ಮಾಣದ ಸಿದ್ದಿಸೀರೆ ಎಂಬ ಚಿತ್ರವು  ನ್ಯೂಯಾರ್ಕ್, ಟೋಕಿಯೋ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ  ಪ್ರಶಸ್ತಿ ಗಳಿಸಿತ್ತು. ಸಕಲೇಶಪುರ, ಬೆಂಗಳೂರು ಹಾಗೂ ಕಗ್ಗಲೀಪುರದ ಸುತ್ತಮುತ್ತ ಸಾರಿ ಚಿತ್ರದ ಶೂಟಿಂಗ್ ನಡೆಯಲಿದ್ದು, ಅಫ್ಜಲ್(ಸೂಪರ್‌ಸ್ಟಾರ್) ಈ ಚಿತ್ರಕ್ಕೆ ಕಾರ್ಯಕಾರಿ ನಿರ್ಮಾಪಕರಾಗಿದ್ದು, ಜಾನ್ ಜಾರ್ಜ್ ಹಾಗೂ ಜೈಕೃಪಲಾನಿ ಅವರ ಸಹನಿರ್ಮಾಪಕರು.

ಅದ್ದೂರಿ ವೆಚ್ಚದ ಈ ಚಿತ್ರಕ್ಕೆ ರಾಜು ಎಮ್ಮಿಗನೂರು ಅವರ ಸಂಗೀತ, ರಾಜೀವ್ ಗಣೇಸನ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಅಲ್ಟಿಮೇಟ್ ಶಿವು ಸಾಹಸನಿರ್ದೇಶನ, ಭೂಪತಿರಾಜ್ ಸಂಕಲನ,  ಇಮ್ರಾನ್, ಮನು ಅವರ  ನೃತ್ಯ ನಿರ್ದೇಶನವಿರುವ ಈ ಚಿತ್ರದಲ್ಲಿ  ಇತರೆ ಪಾತ್ರಗಳಲ್ಲಿ ರಾಗಿಣಿ ಅವರ ಜೊತೆಗೆ ಅಫ್ಜಲ್(ಸೂಪರ್‌ಸ್ಟಾರ್ಸ್) ವಿ.ಜೆ.ಮನೋಜ್, ರಣವೀರ್, ಯುಕ್ತ ಪೆರ್ವಿ, ಪೂಜಾ ಪಾಟೀಲ್   ನಟಿಸುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed