ಸಂದೀಪ್ ಕಿಶನ್ ಪ್ಯಾನ್ ಇಂಡಿಯಾ `ಮೈಕಲ್` ಚಿತ್ರಕ್ಕೆ ಗೌತಮ್ ಮೆನನ್ ವಿಲನ್
Posted date: 24 Wed, Nov 2021 08:42:09 AM
ಸಂದೀಪ್ ಕಿಶನ್, ವಿಜಯ್ ಸೇತುಪತಿ ಮುಖ್ಯಭೂಮಿಕೆಯಲ್ಲಿರುವ ಮೈಕಲ್ ಚಿತ್ರಕ್ಕೆ ಇದೀಗ ಹೊಸದಾಗಿ ನಟ, ನಿರ್ದೇಶಕ ಗೌತಮ್ ವಾಸುದೇವ್ ಮೆನನ್ ಸೇರ್ಪಡೆಗೊಂಡಿದ್ದಾರೆ. ವಿಶೇಷ ಏನೆಂದರೆ, ಈವರೆಗೂ ನೆಗೆಟಿವ್ ಪಾತ್ರಗಳ ಮೂಲಕವೇ ಗಮನ ಸೆಳೆದಿರುವ ಗೌತಮ್, ಇಲ್ಲಿಯೂ ಅಂಥದ್ದೇ ಪಾತ್ರವನ್ನು ನಿಭಾಯಿಸಲಿದ್ದಾರೆ. ಸದ್ಯ ಬಿಡುಗಡೆ ಆಗಿರುವ ಫಸ್ಟ್ ಹ್ಯಾಂಡ್ ಲುಕ್ ಅಷ್ಟೇ ರಗಡ್ ಆಗಿದೆ.​
ಶ್ರೀ ವೆಂಕಟೇಶ್ವರ ಸಿನಿಮಾಸ್​ ಎಲ್ಎಲ್​ಪಿ, ಕರಣ್ ಸಿ ಪ್ರೊಡಕ್ಷನ್ಸ್ ಎಲ್​ಎಲ್​ಪಿ ಬ್ಯಾನರ್​ನಲ್ಲಿ ಭರತ್ ಚೌಧರಿ, ಪುಷ್ಕರ್ ರಾಮ್ ಮೋಹನ್ ರಾವ್ ಮೈಕಲ್ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ. ನಿರ್ಮಾಣವಾಗುತ್ತಿದ್ದು, ಈ ಚಿತ್ರವನ್ನು ರಂಜಿತ್ ಜಯೆಕೊಡಿ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷ ಏನೆಂದರೆ, ಕೇವಲ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು, ಮಲಯಾಳಂ, ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗಲಿದೆ.
ಮಾಸ್ ಆ್ಯಕ್ಷನ್ ಮತ್ತು ಕಮರ್ಷಿಯಲ್ ಅಂಶಗಳುಳ್ಳ ಈ ಸಿನಿಮಾ, ಸದ್ಯ ಚಿತ್ರೀಕರಣ ಪೂರ್ವ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಬಾಕಿ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆಯೂ ಪ್ರಗತಿಯಲ್ಲಿದ್ದೂ, ಎಲ್ಲ ಅಂದುಕೊಂಡಂತೆ ಆದರೆ, ಡಿಸೆಂಬರ್​ನಿಂದ ಶೂಟಿಂಗ್ ಶುರುವಾಗಲಿದೆ. 
ಇನ್ನು ಈವರೆಗೂ ಕಂಟೆಂಟ್ ಬೇಸ್ಡ್​ ಮತ್ತು ಕಮರ್ಷಿಯಲ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ನಟ ಸಂದೀಪ್ ಕಿಶನ್, ಈ ಚಿತ್ರದಲ್ಲಿ ಹಿಂದೆಂದೂ ಕಾಣಿಸದ ಲುಕ್​ನಲ್ಲಿ ಎದುರಾಗುತ್ತಿದ್ದಾರೆ. ವಿಜಯ್ ಸೇತುಪತಿ, ಗೌತಮ್ ಮೆನನ್ ಜತೆಗೆ ತೆರೆ ಹಂಚಿಕೊಳ್ಳುವ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed