ಗುರುರಾಜ ಕುಲಕರ್ಣಿ(ನಾಡಗೌಡ) ನಿರ್ದೇಶನದಲ್ಲಿ ಮೂಡಿಬರುತ್ತಿರುವ “ದ ಜಡ್ಜ್ ಮೆಂಟ್” ಸಿನೆಮಾ ತಂಡ, ತಮ್ಮ ಸಿನೆಮಾದ ನಾಯಕ ನಟ ಕ್ರೇಜಿ ಸ್ಟಾರ್ ರವಿಚಂದ್ರನ್ ರವರ ಹುಟ್ಟುಹಬ್ಬದ ಸಂಭ್ರಮದ ನಿಮಿತ್ತ, ಫಸ್ಟ್ ಲುಕ್ ಪೋಸ್ಟರ್ ಮತ್ತು ವಿಡಿಯೋ ಬಿಡುಗಡೆ ಮಾಡಿದೆ. ಬೆಂಗಳೂರಿನ ಸುತ್ತಮುತ್ತ ರಭಸದಿಂದ ಚಿತ್ರೀಕರಣ ಮಾಡುತ್ತಿರುವ ಬಹುತಾರಾಗಣದ “ದ ಜಡ್ಜ್ ಮೆಂಟ್” ಸಿನೆಮಾ ತಂಡ, ರವಿಚಂದ್ರನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದೆ. ಇಡೀ ಚಿತ್ರತಂಡವನ್ನು ತಮ್ಮ ವಿಶೇಷ ಶೈಲಿ ಮಾತಲ್ಲಿ ಲವಲವಿಕೆಯಿಂದ ಇಟ್ಟು, ಉತ್ಸಾಹ ತುಂಬುವ ರವಿಚಂದ್ರನ್ ರವರಿಗೆ ನಿರ್ಮಾಪಕರು ವಿಶೇಷ ಧನ್ಯವಾದ ಹೇಳಿದ್ದಾರೆ.
ತಾರಾಗಣ: ಕ್ರೇಜಿ ಸ್ಟಾರ್ ರವಿಚಂದ್ರನ್, ದಿಗಂತ ಮಂಚಾಲೆ, ಮೇಘನಾ ಗಾವಂಕರ, ಧನ್ಯಾ ರಾಮಕುಮಾರ, ಲಕ್ಷ್ಮೀ ಗೋಪಾಲಸ್ವಾಮಿ, ಪ್ರಕಾಶ ಬೆಳವಾಡಿ, ಕೃಷ್ಣಾ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ, ಸುಜಯ ಶಾಸ್ತ್ರೀ, ರೂಪಾ ರಾಯಪ್ಪ,ರವಿಶಂಕರ ಗೌಡ
ತಾಂತ್ರಿಕ ವರ್ಗ: ರಚನೆ ಮತ್ತು ನಿರ್ದೇಶನ ಗುರುರಾಜ ಕುಲಕರ್ಣಿ (ನಾಡಗೌಡ) ಛಾಯಾಗ್ರಾಹಕ: ಪಿ ಕೆ ಎಚ್ ದಾಸ, ಸಂಗೀತ: ಅನೂಪ ಸೀಳಿನ, ಸಂಕಲನ: ಕೆಂಪರಾಜ ಬಿ ಎಸ್ ಗೀತ ರಚನೆ: ಪ್ರಮೋದ ಮರವಂತೆ, ಸಂಭಾಷಣೆ: ಎಂ ಎಸ್ ರಮೇಶ. ಸ್ಕ್ರಿಪ್ಟ್ ಸೂಪರವೈಸರ: ಪಿ. ವಾಸುದೇವ ಮೂರ್ತಿ