ಆರ್‌ಸಿ ಬ್ರದರ್ಸ್ ಟೀಸರ್ ಬಿಡುಗಡೆ
Posted date: 26 Wed, Oct 2022 06:21:57 PM

ವಿಭಿನ್ನ ವ್ಯಕಿತ್ವ ಹೊಂದಿದ ಸಹೋದರರಿಬ್ಬರ ನಡುವೆ ನಡೆಯುವ ಹಾಸ್ಯಮಯ ಘಟನೆಗಳನ್ನಿಟ್ಟುಕೊಂಡು ಕಥೆ  ಹೆಣೆದಿರುವ ಚಿತ್ರ ಆರ್‌ಸಿ ಬ್ರದರ್ಸ್. ತಬಲಾನಾಣಿ ಹಾಗೂ ಕುರಿಪ್ರತಾಪ್ ಅಣ್ಣ ತಮ್ಮನಾಗಿ ನಟಿಸಿರುವ ಈ ಚಿತ್ರಕ್ಕೆ ಪ್ರಕಾಶ್‌ಕುಮಾರ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್‌ಕಟ್ ಹೇಳಿದ್ದಾರೆ. ಸಂಭ್ರಮಶ್ರೀ ನಯನ (ಕಾಮಿಡಿ ಕಿಲಾಡಿಗಳು) ಹಾಗೂ ನೀತುರಾಯ್ ಚಿತ್ರದ  ಮೂವರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಮಣಿ ಶಶಾಂಕ್ ಈ  ಚಿತ್ರದ ನಿರ್ಮಾಪಕರಾಗಿದ್ದು, ಶ್ರೀಮತಿ ಸಹನಾ ಗಿರೀಶ್ ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ಈ ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು.

ಈ ಸಂದರ್ಭದಲ್ಲಿ ನಿರ್ದೇಶಕ ಪ್ರಕಾಶ್‌ಕುಮಾರ್ ಮಾತನಾಡಿ 2011 ಲ್ಲಿ ಚಿತ್ರರಂಗಕ್ಕೆ ಬಂದ ನಾನು ನಿರ್ದೇಶಕ ಪಿ.ಕುಮಾರ್,ಪ್ರೀತಂಗುಬ್ಬಿ ಅವರ ಜೊತೆ ಕೆಲಸಮಾಡಿ, ಈಗ ಮೊದಲಬಾರಿಗೆ ನಿರ್ದೇಶನ ಮಾಡಿದ್ದೇನೆ. ಇಬ್ಬರು  ಸಹೋದರರ ಮೇಲೆ ಹೆಣೆದಿರುವ ಹಾಸ್ಯಮಯ ಕಥೆ ಚಿತ್ರದಲ್ಲಿದೆ.  ತಬಲಾನಾಣಿ ಅವರು ಅದ್ಭುತವಾದ ಡೈಲಾಗ್‌ಗಳನ್ನು ಬರೆದಿದ್ದಾರೆ. 

ಸೋದರರ ನಡುವಿನ ಬಾಂಧವ್ಯ,ಕೆಲ ವಿಚಾರಕ್ಕೆ ಆಗುವ ಜಗಳ, ಮತ್ತೆ ಅದನ್ನು ನಿಭಾಯಿಸಿಕೊಂಡು ಅವರು ಹೇಗೆ ಜೊತೆಗರ‍್ತಾರೆ ಎಂಬುದನ್ನು ಕಾಮಿಡಿ ಪ್ರಸಂಗಗಳೊಂದಿಗೆ ಹೇಳಲು ಪ್ರಯತ್ನಿಸಿದವೆ. ಬೆಂಗಳೂರು ಸುತ್ತಮುತ್ತ ೩೫ ದಿನಗಳ ಕಾಲ ಚಿತ್ರವನ್ನು ಚಿತ್ರೀಕರಿಸಿದೇವೆ. ಈಗಾಗಲೇ ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು, ಸೆನ್ಸಾರ್ ಹಂತದಲ್ಲಿದೆ ಎಂದು ಹೇಳಿದರು. 

ನಿರ್ಮಾಪಕ ಮಣಿ ಶಶಾಂಕ್ ಮಾತನಾಡಿ ಮೂಲತ ನಾನೊಬ್ಬ ಅಡ್ವೋಕೇಟ್. ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಶಾಲೆಯಲ್ಲಿ ಡೈರೆಕ್ಷನ್ ಕೋರ್ಸ್ ಮಾಡಿದ್ದೆ. ತಬಲಾನಾಣಿ ನನಗೆ ಆತ್ಮೀಯರು. ಅವರು ಹೇಳಿದ್ದರಿಂದಲೇ ಈ ಸಿನಿಮಾ ನಿರ್ಮಾಣಕ್ಕೆ . ಮುಂದಾದೆ. ಚಿತ್ರ ತುಂಬಾ ಚನ್ನಾಗಿ ಬಂದಿದೆ ಎಂದು ಹೇಳಿದರು. 

ಮತ್ತೊಬ್ಬ ನಿರ್ಮಾಪಕ ಗಿರೀಶ್ ಮಾತನಾಡಿ ನನ್ನ ಪತ್ನಿ ಈ ಚಿತ್ರದ ನಿರ್ಮಾಪಕಿ, ಅವರಿಗೆ ಸಿನಿಮಾ ಮೇಲೆ ತುಂಬಾ ಆಸಕ್ತಿ. ಹಾಗಾಗಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ . ಇದು ಕಂಪ್ಲೀಟ್ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಚಿತ್ರ ಎಂದು ಹೇಳಿದರು. ನಾಯಕ ತಬಲಾನಾಣಿ ಮಾತನಾಡಿ ಸಹೋದರರಲ್ಲಿ ಕೂಡ ಸಮಸ್ಯೆ ಇರುತ್ತದೆ. ನನ್ನ ತಮ್ಮ ಪೋಲೀಸ್ ಆಗಿದ್ದರೆ, ನಾನು ಕೆಲಸವಿಲ್ಲದವನು, ಹೆಣ್ಣುಕೊಡೋಕೆ ಬಂದವರು ಮಗಳ ಸೇಫ್ಟಿ ನೋಡುತ್ತಾರೆ. ನನ್ನ ನೋಡಲು ಬಂದವರು ತಮ್ಮನನ್ನು ಕೇಳುತ್ತಾರೆ. ಕೊನೆಯಲ್ಲಿ ಒಬ್ಬ ಹುಡುಗಿ ನನ್ನನ್ನು ಮದುವೆಯಾಗಲು ಒಪ್ಪಿ ಜೀವನ ಕೊಡುತ್ತಾಳೆ. ಇಡೀ ಟೀಮ್ ಸ್ನೇಹದಿಂದ ಕೆಲಸ ಮಾಡಿದೆ. ನನ್ನ 125 ನೇ ಚಿತ್ರವಿದು  ಎಂದು ಹೇಳಿದರು.

ಕುರಿಪ್ರತಾಪ್ ಮಾತನಾಡಿ ಆರ್‌ಸಿ ಬ್ರರ‍್ಸ್ ಎಂದರೆ  ರಮಣಚಾರಿ ಬ್ರರ‍್ಸ್. ಚಿತ್ರ ಎಲ್ಲೂ ಬೋರಾಗಲ್ಲ, ಪ್ರತಿ ಫ್ರೇಮ್ ನಗಿಸುತ್ತದೆ ಎಂದರೆ, ನಾಯಕಿ ಸಂಭ್ರಮಶ್ರೀ ಮಾತನಾಡುತ್ತ ನಾನು ಪೋಲೀಸ್ ಕಾನ್ಸ್ ಟೇಬಲ್ ಪಾತ್ರ ಮಾಡಿದ್ದೇನೆ ಎಂದರು. ಚಿತ್ರದ  ಸಂಗೀತ ನಿರ್ದೇಶಕ ಪ್ರದೀಪ್‌ವರ್ಮ ಮಾತನಾಡಿ ಆರ್‌ಸಿಬಿ ಕುರಿತು  ಒಂದು ಹಾಡನ್ನು ಮಾಡಿದ್ದೇವೆ, ಅದನ್ನು ವಸಿಷ್ಠ ಸಿಂಹ ಅವರು ಹಾಡಿದ್ದಾರೆ. ಮತ್ತೊಂದು ಮೆಲೋಡಿ ಸಾಂಗ್ ಚಿತ್ರದಲ್ಲಿದೆ ಎಂದರು. ಕಿರಣ್‌ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed