ಜಿಲ್ಕಾ ಹುಡುಗನಿಗೆ ಜೊತೆ ಜೊತೆಯಲಿ ಹುಡುಗಿ ಮೇಘಾ ಶೆಟ್ಟಿ ಸಾಥ್
Posted date: 23 Sat, Oct 2021 02:09:01 PM
`ಜಿಲ್ಕಾ` ಚಿತ್ರದ ಮೂಲಕ ಕನ್ನಡ, ಹಿಂದಿ ಮತ್ತು ಮರಾಠಿ ಚಿತ್ರರಂಗದಲ್ಲಿ ಛಾಪು ಮೂಡಿಸಿದ ಭವಿಷ್ಯದ ಭರವಸೆಯ ನಾಯಕ ನಟ ಕವೀಶ್ ಶೆಟ್ಟಿ ಅಭಿನಯದ ಎರಡನೆಯ ಅದ್ಧೂರಿ ವೆಚ್ಚದ ಚಿತ್ರ ಅತೀ ಶೀಘ್ರದಲ್ಲಿಯೇ ಸೆಟ್ಟೇರಲಿದೆ. ಈ ಬಾರಿ ಕವೀಶ್ ಶೆಟ್ಟಿಯ ಜೊತೆಯಲ್ಲಿ ಕನ್ನಡಿಗರ ಅಚ್ಚುಮೆಚ್ಚಿನ ಮನೆಮಾತಿನ ಹುಡುಗಿ ಮೇಘಾ ಶೆಟ್ಟಿ ನಾಯಕಿಯಾಗಿ ತೆರೆ ಹಂಚಿಕೊಳ್ಳಲು ವಿಶೇಷವಾಗಿ ಸಿದ್ಧತೆ ನಡೆಸುತ್ತಿದ್ದಾರೆ. ಈ ಮೂಲಕ ಈಗಾಗಲೇ ಕನ್ನಡ, ತೆಲುಗು ಮತ್ತು ತಮಿಳು ಬಹುಭಾಷಾ ಚಿತ್ರ ನಿರ್ದೇಶಕರ ಜೊತೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ಸಹ ನಿರ್ದೇಶಕನಾಗಿ ದುಡಿದ ಅನುಭವ ಹೊಂದಿರುವ ಸಡಗರ ರಾಘವೇಂದ್ರ ಮೊತ್ತ ಮೊದಲ ಬಾರಿಗೆ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ತಮ್ಮ ಚೊಚ್ಚಲ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಉಡುಪಿ ಮೂಲದ ವಿಜಯ್ ಕುಮಾರ್ ಶೆಟ್ಟಿ ಮತ್ತು ರಮೇಶ್ ಕೊಠಾರಿ ತಮ್ಮ ಕ್ಲಾಸಿಕ್ ಸ್ಟುಡಿಯೋ ಅಂಗ ಸಂಸ್ಥೆಯ ಅಡಿಯಲ್ಲಿ ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಎನ್ನುವ ನಿರ್ಮಾಣ ಸಂಸ್ಥೆಯ ಮೂಲಕ ಈ ಚಿತ್ರವನ್ನು ಅದ್ಧೂರಿಯಾಗಿ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ನಿರ್ಮಿಸುತ್ತಿದ್ದಾರೆ. ಇವರೊಂದಿಗೆ ಮರಾಠಿ ಚಿತ್ರರಂಗದ ಪ್ರತಿಷ್ಠಿತ ದೀಪಕ್ ರಾಣೆ ಫಿಲ್ಮ್ಸ್ ಕೂಡ ವಿಶೇಷವಾಗಿ ಕೈ ಜೋಡಿಸಿದ್ದಾರೆ.
 
ನಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುವ ಮೊದಲನೇ ಚಿತ್ರಕ್ಕೆ ಒಂದು ಅದ್ಧೂರಿತನದ ಅದ್ಭುತವಾದ ಕಥೆಯನ್ನೇ ಆಯ್ಕೆ ಮಾಡಿದ್ದೇವೆ ಎನ್ನುವ ಖುಷಿಯಿದೆ. ಕನ್ನಡ, ಮರಾಠಿ ಮತ್ತು ಇತರ ಭಾಷೆಯ ಸ್ಟಾರ್ ನಟರ ದಂಡು ಈ ಚಿತ್ರದಲ್ಲಿದೆ ಮತ್ತು ಪ್ರತಿಯೊಂದು ವಿಭಾಗದಲ್ಲೂ ಚಿತ್ರರಂಗದ ನುರಿತ ತಂತ್ರಜ್ಞರ ದೊಡ್ಡ ತಂಡ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದೆ ಎನ್ನುವ ಮೂಲಕ ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಇದೊಂದು ದೊಡ್ಡ ಬಜೆಟ್ಟಿನ ಚಿತ್ರ ಎನ್ನುವ ಸುಳಿವನ್ನೂ ನೀಡಿದ್ದಾರೆ.
 
ಚಿತ್ರ ತಂಡ ಶೀಘ್ರದಲ್ಲೇ ವಿಶೇಷವಾಗಿ ಶೀರ್ಷಿಕೆ ಅನಾವರಣ ಮಾಡಲಿದ್ದು, ನವೆಂಬರ್ ತಿಂಗಳಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed