ವೆಂಕಟ್ ಭಾರಧ್ವಾಜ್ ಸಾರಥ್ಯದ `ಶ್ರೀರಂಗ` ಸಿನಿಮಾದ ಟ್ರೇಲರ್ ರಿಲೀಸ್…ಜುಲೈ 22ಕ್ಕೆ ಬೆಳ್ಳಿತೆರೆಗೆ
Posted date: 17 Sun, Jul 2022 11:48:37 AM
ವಿಭಿನ್ನ ಶೀರ್ಷಿಕೆ, ವಿಭಿನ್ನ ಪೋಸ್ಟರ್ ಮೂಲಕ ಕುತೂಹಲ ಹೆಚ್ಚಿಸಿದ್ದ ವೆಂಕಟ್ ಭಾರಧ್ವಾಜ್ ಸಾರಥ್ಯದ ಶ್ರೀರಂಗ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ಕಾಮಿಡಿ ಜೊತೆಗೆ ಕ್ರೈ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಟ್ರೇಲರ್ ನೋಡುಗರಿಗೆ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. 

ಟ್ರೇಲರ್ ಬಿಡುಗಡೆ ಬಳಿಕ ಮಾತನಾಡಿದ ನಿರ್ದೇಶಕ ವೆಂಟಕ್ ಭಾರಧ್ವಾಜ್, ಸಿನಿಮಾ ಅನ್ನೋದನ್ನು ಒಬ್ಬರ ಕೈಯಲ್ಲಿ ಮಾಡಲು ಆಗುವುದಿಲ್ಲ. ತಾಂತ್ರಿಕ ವರ್ಗ, ಕಲಾ ವರ್ಗ ಹೀಗೆ ಎಲ್ಲರೂ ಕೂಡಿದಾಗ ಮಾತ್ರ ಸಿನಿಮಾಗುತ್ತದೆ. ಶಂಕರ್ ರಾಮನ್ ಡೈಲಾಗ್ ಅದ್ಭುತವಾಗಿದೆ. ಚಿಕ್ಕ ಪಾತ್ರದಿಂದ ಹಿಡಿದು ದೊಡ್ಡ ಪಾತ್ರದವರೆಗೂ ಎಲ್ಲರೂ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ನಾನು ಒಂದು ಪಾತ್ರ ಮಾಡಿದ್ದೇನೆ. ಸಿನಿಮಾದಲ್ಲಿ ಸುನಿಲ್ ಅವರ ವಾಯ್ಸ್ ಇದೆ. ಇದೇ 22ಕ್ಕೆ ಸಿನಿಮಾ ರಿಲೀಸ್ ಆಗ್ತಿದೆ. ಪ್ರತಿಯೊಬ್ಬರು ಬೆಂಬಲ ಕೊಡಿ ಎಂದರು.

ವೆಂಕಟ್ ಭಾರದ್ವಾಜ್ ಚಿತ್ರಕಥೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ನಾಯಕನಾಗಿ ಶಿನವ್, ನಾಯಕಿಯರಾಗಿ ರಚನಾ ರಾಯ್, ರೂಪ ರಾಯಪ್ಪ ಹಾಗೂ ವಂದನಾ ಶೆಟ್ಟಿ ನಟಿಸಿದ್ದು, ಉಳಿದಂತೆ ಗುರುರಾಜ್ ಹೊಸಕೋಟೆ, ಯಮುನಾ ಶ್ರೀನಿಧಿ, ಸಾಗರ್ ಜಯರಾಮ್, ಚಿಪ್ಸ್ ಬಾಬು, ಗಿರೀಶ್, ಮಣಿ ಮಾರನ್ ಅಭಿನಯಿಸಿದ್ದಾರೆ. ಇವರ ಜೊತೆಗೆ ಪುಟಾಣಿಗಳ ದಂಡೇ ಇದೆ. ಮಾಸ್ಡರ್ ಚಿರಾಯು ಚಕ್ರವರ್ತಿ, ತ್ರಿಧಾರ ಲಕ್ಷ್ಮಣ್, ಪುಶ್ಕಲ್ ಪ್ರೀತ್, ರಜತ್ ರಿತಿಕ್, ಐಶಾನಿ ನಟಿಸಿದ್ದಾರೆ.
ಮಿಥುನ್ ಛಾಯಾಗ್ರಾಹಣ, ಚಂದನ್ ಸಂಕಲನ, ಶಂಕರ್ ರಾಮನ್ ಸಂಭಾಷಣೆ, ಸಮೀರ್ ಕುಲಕರ್ಣಿ ಸಂಗೀತ, ಕನ್ನಡದ ಟಾಪ್ ರಪೆರ್ ವಿರಾಜಕನ್ನಡಿಗ, ಅವಿನಾಶ್ ಛೆಬ್ಬಿ, ಚೈತ್ರಾ ನಾಣಯ್ಯ ಹಾಡುಗಳಿಗೆ ಧ್ವನಿಯಾಗಿದ್ದಾರೆ. ರುತು ಕ್ರಿಯೇಷನ್ ನಡಿ ಸುಮಾ ಸಿಆರ್ ನಿರ್ಮಾಣ ಮಾಡಿದ್ದು, ಬಿಎಂ ದಿಲೀಪ್ ಸಹ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಸದ್ಯ ಟ್ರೇಲರ್ ರಿಲೀಸ್ ಮಾಡಿ ಪ್ರಚಾರ ಕಾರ್ಯ ಆರಂಭಿಸಿರುವ ಶ್ರೀರಂಗ ಸಿನಿಮಾ ಇದೇ ತಿಂಗಳ 22ಕ್ಕೆ ಬೆಳ್ಳಿತೆರೆಗೆ ಎಂಟ್ರಿ ಕೊಡ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed