ಸಿನಿಮಾ ಕಾರ್ಮಿಕರಿಗೆ ನೆರವಾದ ಪರ್ಪಲ್ ರಾಕ್ ಎಂಟರ್​ಟೈನ್​ಮೆಂಟ್​ ಮತ್ತು ಮಲ್ಟಿ ಬಾಕ್ಸ್ ಎಂಟರ್​ಟೈನ್​ಮೆಂಟ್​
Posted date: 06 Tue, Jul 2021 11:13:37 AM
ಕೋವಿಡ್​ನಿಂದಾಗಿ ಸಾಕಷ್ಟು ಸಿನಿಮಾ ಮಂದಿಯ ಬದುಕು ಬೀದಿಗೆ ಬಂದಿದೆ. ಕೆಲಸ ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಪರ್ಪಲ್ ರಾಕ್ ಎಂಟರ್​ಟೈನ್​ಮೆಂಟ್​ ಮತ್ತು ಮಲ್ಟಿ ಬಾಕ್ಸ್ ಎಂಟರ್​ಟೈನ್​ಮೆಂಟ್​ ಸಂಸ್ಥೆಗಳ ವತಿಯಿಂದ ಸೋಮವಾರ ಸಿನಿಮಾ ಕಾರ್ಮಿಕರಿಗೆ ಉಚಿತ ಆಹಾರದ ಕಿಟ್​ಗಳನ್ನು ನೀಡಲಾಯಿತು.
ಮಾಗಡಿ ರಸ್ತೆಯಲ್ಲಿನ ವೀರೇಶ್ ಚಿತ್ರಮಂದಿರದಲ್ಲಿ ಸೋಮವಾರ ಬೆಳಗ್ಗೆ 9 ಗಂಟೆಗೆ ವಿತರಣೆ ಕಾರ್ಯಕ್ರಮ ನೆರವೇರಿದ್ದು, ಸಿನಿಮಾ ಕ್ಷೇತ್ರದಲ್ಲಿ ಯಾವುದೇ ಸಂಘಟನೆಯಿಂದ ಕಾರ್ಡ್​ ಹೊಂದಿರದ 200ಕ್ಕೂ ಅಧಿಕ ಮಂದಿಗೆ ಕಿಟ್ ವಿತರಣೆ ಮಾಡಲಾಯಿತು. 
ಕೋವಿಡ್ ಪರಿಹಾರ ನಿಧಿ ಸಲುವಾಗಿ ಪರ್ಪಲ್ ರಾಕ್ ಎಂಟರ್​​ಟೈನರ್ಸ್​ ಮತ್ತು ಮಲ್ಟಿ ಬಾಕ್ಸ್ ಎಂಟರ್​ಟೈನ್​ಮೆಂಟ್​ ಜಂಟಿಯಾಗಿ ಲೈವ್ ಫಾರ್ ಕರ್ನಾಟಕ ಫಂಡ್​ರೈಸರ್​ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜೂನ್ 5ರಂದು ನಡೆದ ಆನ್​ಲೈನ್​ ಶೋದಲ್ಲಿ ಸಿನಿಮಾ ಸೇರಿ ಹಲವು ಕ್ಷೇತ್ರದ ಗಣ್ಯರು ಭಾಗವಹಿಸಿದದ್ದರು. ಈ ಶೋವನ್ನು 2ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಣೆ ಮಾಡಿ ಕೈಲಾದ ಸಹಾಯ ಮಾಡಿದ್ದರು. ಅದರಿಂದ ಬಂದ ಮೊತ್ತದಿಂದಲೇ ಇದೀಗ ಸಿನಿಮಾ ಕ್ಷೇತ್ರದ ಕಾರ್ಮಿಕರಿಗೆ ಸಹಾಯ ಮಾಡಿದ್ದಾರೆ. 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed