ಮಂಜುಳಾ ಪುರುಷೋತ್ತಮ್ಸ ಮತ್ತು ನಾವು ಸಹೋದರ ಸಹೋದರಿ ಬಾಂಧವ್ಯ ಸೌಂದರ್ಯ ಜಗದೀಶ್
Posted date: 27 Wed, Oct 2021 11:11:39 AM
ನಾವು ಮತ್ತು ಮಂಜುಳಾ ಪುರುಷೋತ್ತಮ್ ಅವರ ಕುಟುಂಬದವರು ಮಹಾಲಕ್ಷ್ಮಿ ಲೇಔಟ್ ನಲ್ಲಿ ಅನೇಕ ವರ್ಷದಿಂದ ಸಹೋದರ - ಸಹೋದರಿ ಬಾಂಧವ್ಯದಿಂದ ವಾಸ ಮಾಡುತ್ತಿದ್ದೇವೆ. ಮನೆಯಲ್ಲಿ ಕೆಲಸ ಮಾಡುವವರ ಅಚಾತುರ್ಯದಿಂದ ಇತ್ತೀಚಿನ ಘಟನೆ ನಡೆದಿದೆ. 
ಇಬ್ಬರು ಮನೆಯ ಕೆಲಸದವರ ನಡುವೆ ಗಲಾಟೆ ನಡೆಯುತ್ತಿದ್ದಾಗ, ನನ್ನ ಪತ್ನಿ ರೇಖಾ ಹಾಗೂ ಪುತ್ರ ಸ್ನೇಹಿತ್ ಅವರ ಜಗಳ ಬಿಡಿಸಲು ಹೋಗಿದ್ದರೆ ಹೊರತು, ಅವರು ಯಾರ ಮೇಲೆ ಹಲ್ಲೆ ಮಾಡಲು ಹೋಗಿಲ್ಲ ಎನ್ನುವುದನ್ನು ನಾನು ತಿಳಿಸಲು ಬಯಸುತ್ತೇನೆ. 
ಕೆಲಸದವರ ಈ ಘಟನೆಯಿಂದ ನಮ್ಮಿಬ್ಬರ ಕುಟುಂಬದವರಿಗೂ ಬಹಳ ಬೇಸರವಾಗಿದೆ. ಇನ್ನೂ ಮುಂದೆ ಈ ರೀತಿ ಘಟನೆಗಳು ಆಗದಂತೆ ನಮ್ಮ ಬಳಿ ಕೆಲಸ ಮಾಡುವವರಿಗೆ ಹೇಳುತ್ತೇನೆ. ಅವರ ಮನೆ ಕೆಲಸದವರಿಗೂ ಅವರು ಹೇಳುತ್ತಾರೆ ಎಂಬ ವಿಶ್ವಾಸವಿದೆ. 
ಹಾಗೆ ಈ ಘಟನೆ ವೇಳೆ ಮನೆ ಕೆಲಸದ ಹೆಣ್ಣುಮಗಳೊಬ್ಬಳಿಗೆ ಹಾಗೂ ಅವರ ತಾಯಿಗೆ ನೋವಾಗಿರುವ ವಿಷಯ ತಿಳಿದು ನನಗೆ ತುಂಬಾ ಬೇಸರವಾಗಿದೆ. 
ಇದು ಕೆಲಸದವರ ನಡುವೆ ನಡೆದಿರುವ ಜಗಳವೇ ಹೊರತು, ಈ ಘಟನೆ ನಮ್ಮ ನಡುವೆ ನಡೆದಿರುವುದಲ್ಲ ಎಂದು ಮತ್ತೊಮ್ಮೆ ಸ್ಪಷ್ಟನೆ ನೀಡುತ್ತೇನೆ. ಮಂಜುಳಾ ಪುರುಷೋತ್ತಮ್ ಅವರ ಕುಟುಂಬದವರಿಗೆ ಆಗಿರುವ ನೋವಿಗೆ ನಾನು ಕ್ಷಮೆ ಕೇಳುತ್ತೇನೆ. ಮುಂದೆ ನಾವು ಒಂದೇ ಕುಟುಂಬದವರ ಹಾಗೆ ಅನ್ಯೋನ್ಯವಾಗಿ ಇರುತ್ತೇವೆ ಎಂದು ಈ ಮೂಲಕ ಹೇಳ ಬಯಸುತ್ತೇನೆ.

ಇಂತಿ ನಿಮ್ಮ 
ಸೌಂದರ್ಯ ಜಗದೀಶ್
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed