ಆಗಸ್ಟ್ 23 ಕ್ಕೆ ಚಂದ್ರನ ಅಂಗಳಕ್ಕೆ``ಚಂದ್ರಯಾನ 3``ಅದೇ ದಿನ ``ರಾನಿ `` ಚಿತ್ರದ ಹಿಂದಿ ಟೀಸರ್ ಬಿಡುಗಡೆ
Posted date: 22 Tue, Aug 2023 08:28:04 AM
ಆಗಸ್ಟ್ 23 ರ ರಂದು ಸಂಜೆ 6ಗಂಟೆ 4 ನಿಮಿಷಕ್ಕೆ ದೇಶದ ಹೆಮ್ಮೆಯ “ಚಂದ್ರಯಾನ 3” ಉಪಗ್ರಹ ಚಂದ್ರನ ಅಂಗಳವನ್ನು ತಲುಪಲಿದೆ ಎಂದು ISRO ವಿಜ್ಞಾನಿಗಳು ತಿಳಿಸಿದ್ದಾರೆ. ಅದೇ ಸಮಯಕ್ಕೆ ಸರಿಯಾಗಿ ಕಿರಣ್ ರಾಜ್ ನಾಯಕರಾಗಿ ನಟಿಸಿರುವ "ರಾನಿ" ಚಿತ್ರದ ಹಿಂದಿ ಟೀಸರ್  T ಸೀರಿಸ್ ಸಂಸ್ಥೆಯ ಮೂಲಕ‌ ಬಿಡುಗಡೆಯಾಗಲಿದೆ.
 
ಈ ಮೂಲಕ ನಾವು ISRO ವಿಜ್ಞಾನಿಗಳಿಗೆ ಶುಭ ಕೋರುತ್ತಿದ್ದೇವೆ ಎಂದು ಚಿತ್ರತಂಡ ತಿಳಿಸಿದೆ. ಈಗಾಗಲೇ 1 ನಿಮಿಷ 35 ಸೆಕೆಂಡ್ ಅವಧಿಯ ಕನ್ನಡ ಟೀಸರ್ ಬಿಡುಗಡೆಯಾಗಿ ಪ್ರೇಕ್ಷಕರಲ್ಲಿ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಿಸಿದೆ.  
 
ಈಗ 2 ನಿಮಿಷ 22 ಸೆಕೆಂಡ್ ನ ಹಿಂದಿ ಟೀಸರ್ ಬಿಡುಗಡೆಯಾಗುತ್ತಿದ್ದು, ಈ ಮೂಲಕ ಚಿತ್ರದ ಕಥೆಯ ಬಗ್ಗೆ ಇನ್ನಷ್ಟು ಮಾಹಿತಿ ಬಿಟ್ಟುಕೊಡುತ್ತಿದ್ದೇವೆ ಹಾಗೂ ಹಿಂದಿ ಪ್ರಾದೇಶಿಕತೆಗೆ ತಕ್ಕಂತೆ ಟೀಸರ್ ಕಟ್ಸ್ ಇರುತ್ತದೆ ಎನ್ನುತ್ತಾರೆ ನಿರ್ದೇಶಕ ಗುರುತೇಜ್ ಶೆಟ್ಟಿ.
ಕಿರಣ್ ರಾಜ್ ಅವರು ಮಾಸ್ look ನಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಅಪೂರ್ವ, ರಾಧ್ಯ, ಸಮೀಕ್ಷಾ ಮೂವರು ನಾಯಕಿಯಾರಿದ್ದಾರೆ, ಸ್ಟಾರ್ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾವಾಗುತ್ತಿರುವ ಚೊಚ್ಚಲ ಚಿತ್ರ  ಇದಾಗಿದ್ದು, ಚಂದ್ರಕಾಂತ್ ಪೂಜಾರಿ ಹಾಗೂ ಉಮೇಶ ಹೆಗ್ಡೆ ನಿರ್ಮಿಸಿದ್ದಾರೆ.
 
ರವಿ ಶಂಕರ್, ಮೈಕೋ ನಾಗರಾಜ್, ಮಂಡ್ಯ ರಮೇಶ್,ಗಿರೀಶ್ ಹೆಗ್ಡೆ , B ಸುರೇಶ, ಸೂರ್ಯ ಕುಂದಾಪುರ, ಧರ್ಮಣ್ಣ, ಉಗ್ರಂ ಮಂಜು, ಉಗ್ರಂ ರವಿ, ಮನಮೋಹನ್ ರೈ,ಅನಿಲ್ ಯಾದವ್ ,ಪ್ರಥ್ವಿ, ಧರ್ಮೇಂದ್ರ ಆರಸ್, ಸುಜಯ್ ಶಾಸ್ತ್ರಿ ಅನೇಕ ದೊಡ್ಡ ಕಲಾವಿದರು ಚಿತ್ರದಲ್ಲಿ ಅಭಿನಸಿದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ, ಪ್ರಮೋದ್ ಮರವಂತೆ ಗೀತರಚನೆ, ಸಚಿನ್ ಬಸ್ರೂರ್ ಹಿನ್ನೆಲೆ ಸಂಗೀತ,  ರಾಘವೇಂದ್ರ B ಕೋಲಾರ ಛಾಯಾಗ್ರಾಹಣ ಉಮೇಶ R B ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನ "ರಾನಿ" ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed