ಬಿಂದ್ಯಾ ಮೂವೀಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಿರ್ದೇಶನ ಜಯರಾಂ
Posted date: 25 Tue, Jan 2022 11:13:28 PM
ಇತ್ತೀಚೆಗೆ ಬಿಡುಗಡೆಯಾದ ಚಂದನ್ ಶೆಟ್ಟಿ - ರಚಿತಾರಾಂ ಕಾಂಬಿನೇಶನ್ ನ  "ಲಕಲಕ‌‌ ಲ್ಯಾಂಬರ್ಗಿನಿ" ಆಲ್ಬಮ್ ಸಾಂಗ್ ಎಲ್ಲರ ಮನಗೆದ್ದಿತ್ತು. ಈವರೆಗೂ ಬಿಡುಗಡೆಯಾಗಿರುವ ಆಲ್ಬಂ ಸಾಂಗ್ ಗಳಲ್ಲಿ ಅಪಾರವೆಚ್ಚದಲ್ಲಿ ನಿರ್ಮಾಣವಾಗಿರುವ ಆಲ್ಬಂ  ಸಾಂಗ್‌ ಅದು.
ಇಂತಹ ಅದ್ದೂರಿ ಆಲ್ಬಂ ಸಾಂಗ್ ಅನ್ನು ತಮ್ಮ ಮಗಳು ಬಿಂದ್ಯಾ ಹುಟ್ಟುಹಬ್ಬಕ್ಕಾಗಿ    ಆರ್ ಕೇಶವ್(ರೈತ) ನಿರ್ಮಾಣ ಮಾಡಿದ್ದರು.
ಈಗ ಆರ್ ಕೇಶವ್ ಸಿನಿಮಾ ನಿರ್ಮಾಣಕ್ಕೆ ‌ಮುಂದಾಗಿದ್ದಾರೆ.  ಬಿಂದ್ಯಾ‌‌ ಮೂವೀಸ್ ಮೂಲಕ ಅಪಾರ ವೆಚ್ಚದಲ್ಲಿ ಅದ್ದೂರಿ ಈ ಚಿತ್ರ ಮೂಡಿಬರಲಿದೆ.

ಹಲವು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. 

"ಬುದ್ದಿವಂತ 2" ಚಿತ್ರದ ನಿರ್ದೇಶಕ ಆರ್. ಜಯರಾಂ ಈ ಚಿತ್ರ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಹೆಸರನ್ನು ಆರ್ ಜೈ ಎಂದು ಬದಲಿಸಿಕೊಂಡಿದ್ದಾರೆ.

1970 ರ ಕಾಲಘಟ್ಟದಲ್ಲಿ ನಡೆಯುವ ರೆಟ್ರೊ ಶೈಲಿಯ ಕಥೆಯಾಗಿದೆ. ಸದ್ಯದಲ್ಲೇ ತಾಂತ್ರಿಕವರ್ಗ ಹಾಗೂ ತಾರಾಬಳಗದ ಬಗ್ಗೆ ಮಾಹಿತಿ ನೀಡಲಾಗುವುದು.

 ಮುಂದಿನ ತಿಂಗಳು ಮೋಷನ್ ಪೋಸ್ಟರ್ ಬಿಡುಗಡೆ ಹಾಗೂ ಅದ್ದೂರಿ ಮುಹೂರ್ತ ಸಮಾರಂಭ ನಡೆಯಲಿದೆ ಎಂದು ನಿರ್ದೇಶಕ ಆರ್ ಜೈ ತಿಳಿಸಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed