ಅಶ್ವಿನಿ ಪುನೀತ್ ರಾಜಕುಮಾರ್ ಅವರಿಂದ ಬಿಡುಗಡೆಯಾಯಿತು``ಲವ್ ಬರ್ಡ್ಸ್``ಚಿತ್ರದ ಸುಮಧುರ ಹಾಡು
Posted date: 24 Tue, Jan 2023 10:08:19 AM
ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸಿರುವ "ಲವ್ ಬರ್ಡ್ಸ್" ಚಿತ್ರಕ್ಕಾಗಿ ಕವಿರಾಜ್ ಅವರು ಬರೆದಿರುವ "ನೀನೇ ದೊರೆತ ಮೇಲೆ"  ಎಂಬ ಹಾಡು ಬಿಡುಗಡೆಯಾಗಿದೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಇತ್ತೀಚೆಗೆ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್, ಮಾಸ್ತಿ ಮುಂತಾದವರು ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಕೌಟುಂಬಿಕ ಚಿತ್ರಗಳು ಇತ್ತೀಚೆಗೆ ಬರುತ್ತಿರುವುದು ಸ್ವಲ್ಪ ಕಡಿಮೆ. ಆ ಸಮಯದಲ್ಲಿ ನನಗೆ ಉತ್ತಮ ಕೌಟುಂಬಿಕ ಚಿತ್ರವೊಂದನ್ನು ನಿರ್ದೇಶಿಸಬೇಕೆಂದು ಆಸೆಯಾಯಿತು. ನಿರ್ಮಾಪಕ ಕಡ್ಡಿಪುಡಿ ಚಂದ್ರು ಕಥೆ ಮೆಚ್ಚಿ ನಿರ್ಮಾಣಕ್ಕೆ ಮುಂದಾದರು. ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಮಹತ್ತರವಾದ ಘಟ್ಟ. ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಆ ಪ್ರಸಂಗಕ್ಕೆ ತಕ್ಕದಾದ ಹಾಡೊಂದನ್ನು ಕವಿರಾಜ್ ಅದ್ಭುತವಾಗಿ ಬರೆದಿದ್ದಾರೆ. ಅರ್ಜುನ್ ಜನ್ಯ ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ. ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ಚೆನ್ನಾಗಿ ನಟಿಸಿದ್ದಾರೆ ಎಂದು ನಿರ್ದೇಶಕ ಪಿ.ಸಿ.ಶೇಖರ್ ಹಾಡಿನ ಬಗ್ಗೆ ಮಾಹಿತಿ ನೀಡಿದರು.
.
ನಮ್ಮ "ಲವ್ ಮಾಕ್ಟೇಲ್" ಚಿತ್ರದ ಮೊದಲ ಹಾಡನ್ನು ಪುನೀತ್ ಸರ್ ಹಾಗೂ ಆಶ್ವಿನಿ ಅವರಿಗೆ ತೋರಿಸಿದ್ದೆವು. ಇಬ್ಬರು ನೋಡಿ ಮನಸಾರೆ ಹರಸಿದ್ದರು. ಈ ಚಿತ್ರದ ಹಾಡನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರು ಬಿಡುಗಡೆ ಮಾಡಿರುವುದು ಸಂತೋಷವಾಗಿದೆ ಎಂದರು ಮಿಲನ ನಾಗರಾಜ್.

ಮದುವೆಗೆ ಸಂಬಂಧಿಸಿದ
 ಈ ಹಾಡು ಎಲ್ಲರ ಮನಸ್ಸಿಗೂ ಹತ್ತಿರವಾಗಲಿದೆ ಎಂದು ಸಾಹಿತಿ ಕವಿರಾಜ್ ತಿಳಿಸಿದರು. ಹಾಡು ಬಿಡುಗಡೆ ಮಾಡಿದ್ದ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಹಾಗು ಆಗಮಿಸಿದ್ದ ಗಣ್ಯರಿಗೆ ನಿರ್ಮಾಪಕ ಕಡ್ಡಿಪುಡಿ ಚಂದ್ರು ಧನ್ಯವಾದ ತಿಳಿಸಿದರು.

ಡಾರ್ಲಿಂಗ್ ಕೃಷ್ಣ, ಮಿಲನ ನಾಗರಾಜ್, ಸಂಯುಕ್ತ ಹೊರನಾಡು, ಸಾಧುಕೋಕಿಲ, ರಂಗಾಯಣ ರಘು,  ಅವಿನಾಶ್, ವೀಣಾ ಸುಂದರ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed