ರಿಪ್ಪರ್ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಹಾರೈಸಿದ ವೀರೇಂದ್ರ ಹೆಗ್ಗಡೆ
Posted date: 23 Tue, Aug 2022 08:40:00 AM
ಕೃಷ್ಣ ಬೆಳ್ತಂಗಡಿ ನಿರ್ದೇಶನದ ಎರಡನೇ ಚಿತ್ರ ರಿಪ್ಪರ್ ಇದರ ಮೊದಲು ಪೋಸ್ಟರ್ ಅನ್ನು ನೂತನ ರಾಜ್ಯಸಭಾ ಸದಸ್ಯರು, ಧರ್ಮಸ್ಥಳದ ಧರ್ಮಾಧಿಕಾರಿಗಳೂ ಆದ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.
 
ಸಿನಿಮಾ, ನಿರ್ಮಾಣ, ಚಿತ್ರೀಕರಣ, ಸ್ಥಳಗಳು, ಕಲಾವಿದರು ಹೀಗೆ ಅನೇಕ ವಿಚಾರಗಳನ್ನು ನಿರ್ದೇಶಕ ಕೃಷ್ಣ ಬೆಳ್ತಂಗಡಿ ಇವರಿಂದ ಪಡೆದ ಹೆಗ್ಗಡೆಯವರು ಸಿನಿಮಾದ ಯಶಸ್ಸಿಗೆ ಶುಭ ಹಾರೈಸಿದರು.
 
ಈ ಸಂಧರ್ಭದಲ್ಲಿ ಸಿನಿಮಾದ ದಕ್ಷಿಣ ಕನ್ನಡ ವಿಭಾಗ ನಿರ್ವಹಕರದ ಬಿ.ಹೆಚ್. ರಾಜು ಉಪಸ್ಥಿತರಿದ್ದರು.
 
ರಿಪ್ಪರ್ ಚಲನಚಿತ್ರವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ನೈಜ ಘಟನೆಯೊಂದರಿಂದ ಪ್ರೇರಿತವಾದ ಸಿನಿಮಾವಾಗಿದ್ದು, ಜಿಕೆ ರಿಯಲ್ ಇಮೇಜಸ್ ಮತ್ತು ಶ್ರೀ ಗುರುರಾಯ ಪ್ರೊಡಕ್ಷನ್ಸ್ ಇವರಿಂದ ನಿರ್ಮಾಣವಾಗಿದೆ.
 
ಕೌಸ್ತುಬ್ ಜಯರಾಮ್, ಅಮುಲ್ ಗೌಡ, ಶ್ರೀರಾಮ್, ಸಾನ್ವಿ, ಅರ್ಪಿತಾ ಬಿ.ಜಿ, ಶಿವಕುಮಾರ್ ಆರಾಧ್ಯ, ಗಜಾನನ ಹೆಗ್ಡೆ ಇವರುಗಳು ಪ್ರಮುಖ ತಾರಾಗಣದಲ್ಲಿ ಇದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed