ಕಸ್ತೂರಿ ವಾಹಿನಿಯ ?ಸಪ್ತಸ್ವರ-೨ರ ಗ್ರಾಂಡ್ ಫೈನಲ್ಸ್?
Posted date: 15/November/2008

ಇದೇ ತಿಂಗಳ ೧೬ನೇ ತಾರೀಖಿನಂದು ಹಾಸನದಲ್ಲಿ ಕಸ್ತೂರಿ ವಾಹಿನಿಯ ಸಪ್ತಸ್ವರ-೨ರ ಗ್ರಾಂಡ್ ಫೈನಲ್ಸ್ನಡೆಯಲಿದೆ.

  

  ಕನ್ನಡ ನೆಲದಲ್ಲಿ ಕನ್ನಡಿಗರಿಂದಲೇ ಪ್ರಸಾರ ಆರಂಭಿಸಿದ ಕಸ್ತೂರಿ ವಾಹಿನಿಯು ಕನ್ನಡಿಗರಿಗಾಗಿ ಅನೇಕ ವೈವಿಧ್ಯಮಯ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದೆ. ಈ ವಾಹಿನಿಯು ಸಮಾಜದ ಎಲ್ಲಾ ರೀತಿಯ ಪ್ರೇಕ್ಷಕರಿಗೆ ಇಷ್ಟವಾಗುವಂತಹ, ಮತ್ತು ಎಲ್ಲಾ ರೀತಿಯಲ್ಲೂ ಮನರಂಜನೆಗೆ ಒತ್ತು ಕೊಟ್ಟು ಜನಮನದಲ್ಲಿ ತನ್ನ ಸ್ಥಾನವನ್ನು ಅಲ್ಪಕಾಲದಲ್ಲಿಯೇ ಭದ್ರಗೊಳಿಸಿಕೊಂಡಿದೆ. ವಾಹಿನಿಯು ಚಿಣ್ಣರಿಗಾಗಿಯೇ ಮಹಾ ಸಂಗೀತ ಸಮರ ಸಪ್ತಸ್ವರ-೨ ದಿ ಛಾಲೆಂಜಿಂಗ್ ಸ್ಟಾರ್ಎಂಬ ಯಶಸ್ವಿ ಸಂಗೀತ ಕಾರ್ಯಕ್ರಮವು ಅದ್ದೂರಿಯಾಗಿ ಮೂಡಿಬರುತ್ತಿದೆ.

  ಈಗಾಗಲೆ ಹಲವಾರು ಹಂತಗಳಲ್ಲಿ ೩೨ಮಂದಿ ಮಕ್ಕಳು ಭಾಗವಹಿಸಿ ಈಗ ಬೆಂಗಳೂರಿನ ಕುಮಾರಿ ಕವನ ಮತ್ತು ಉಡುಪಿಯ ಶರಧಿಪಾಟೀಲ್ ಅಂತಿಮ ಹಂತವನ್ನು ತಲುಪಿದ್ದಾರೆ. ಇವರಿಬ್ಬರು  ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕ ಆರ್.ಪಿ. ಪಟ್ನಾಯಕ್ ಸಮ್ಮುಖದಲ್ಲಿ ಇದೇ ೧೬ರ ಸಂಜೆ ಹಾಸನದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಜಿದ್ದಾಜಿದ್ದಿನ ಹಣಾಹಣಿಯಲ್ಲಿ ಯಾರು  ಸಪ್ತಸ್ವರದ ರಿಯಲ್ ಛಾಲೆಜಿಂಗ್ ಸ್ಟಾರ್  ಪಟ್ಟವನ್ನು ಅಲಂಕರಿಸುತ್ತಾರೋ ಎನ್ನುವ ಕೂತೂಹಲದ ಪ್ರಶ್ನೆಗೆ ಉತ್ತರವನ್ನು ಅಂದೇ ಕಂಡುಕೊಳ್ಳಬೇಕಾಗುತ್ತದೆ. ಈ  ರಂಗುರಂಗಿನ ವೇದಿಕೆಯಲ್ಲಿ ಪ್ರತಿ ಸಂಚಿಕೆಯ ತೀರ್ಪುಗಾರರಾದ ಶ್ರೀಮತಿ ಬಿ.ಕೆ. ಸುಮಿತ್ರ, ಶ್ರೀ ರಾಮ್ ಪ್ರಸಾದ್, ಮತ್ತು ಶ್ರೀಮತಿ ಚಂದ್ರಿಕಾ ಗುರುರಾಜ್ ರವರು ಎಂದಿನಂತೆ ಉಪಸ್ಥಿತರಿರುತ್ತಾರೆ.

  ಈ  ರಂಗುರಂಗಿನ ವೇದಿಕೆಯಲ್ಲಿ ಇವರಿಬ್ಬರಲ್ಲದೇ ಸ್ಪರ್ಧೆಯಲ್ಲಿ ಈಗಾಗಲೇ ಭಾಗವಹಿಸಿ ಸ್ಪರ್ಧೆಯಿಂದ ಹೊರಗುಳಿದಿರುವ ಮಕ್ಕಳ ಜೊತೆಗೆ ಹಾಸನದ ಮೂರು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಈ ಕಾರ್ಯಕ್ರಮದ ವಿಶೇಷ. ಇದರ ಜೊತೆಗೆ ಹಾಸನದ ಜನರನ್ನು ರಂಜಿಸಲು ಸಿನಿಮಾದ ನಾಯಕ-ನಾಯಕಿಯರುವೇದಿಕೆಯನ್ನು ಹಂಚಿಕೊಳ್ಳುವುದು ಈ ಅದ್ದೂರಿ ಕಾರ್ಯಕ್ರಮದ ವೈಶಿಷ್ಠ.

 ಉಳಿದಂತೆ ಬೇರೆ ಬೇರೆಯ ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಹಾಸನದ ಅದೇ ವೇದಿಕೆಯಲ್ಲಿಜನತೆಗೆ ಕಸ್ತೂರಿ ವಾಹಿನಿಯು ಉಣಬಡಿಸುವುದರ ಜೊತೆಗೆ ಈ ಕಾರ್ಯಕ್ರಮವನ್ನು ರಾಜ್ಯದ ಜನತೆಗೆ ಪ್ರತಿ ಶನಿವಾರ ಮತ್ತು ಭಾನುವಾರಗಳ ರಾತ್ರಿ ೮:೩೦ ರಿಂದ ೯:೩೦ಕ್ಕೆ ಪ್ರಸಾರ ಮಾಡುತ್ತದೆ. ಆಸಕ್ತರು ಈ ರಂಗುರಂಗಿನ ಕಾರ್ಯಕ್ರಮದಲ್ಲಿ ಭಾಗವಹಿಸಬಹುದಾಗಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed