ವಿಭಿನ್ನ ಶೀರ್ಷಿಕೆಯ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್
Posted date: 10 Wed, Aug 2022 n 12:14:24 PM
ಕನ್ನಡದಲ್ಲೀಗ ವಿಭಿನ್ನ ಶೀರ್ಷಿಕೆಯ ಹೊಸ ಹೊಸ ಸಿನಿಮಾಗಳು‌ ಬಂದಿವೆ. ಬರ್ತಿವೆ. ಈಗ The endless one ಭಗವಾನ್ ಶ್ರೀನಿತ್ಯಾನಂದ ಎಂಬ ಹೆಸರಿನ ಹೊಸ ಸಿನಿಮಾವೊಂದು ಬರ್ತಿದೆ. ಇವತ್ತು ಬೆಂಗಳೂರಿನಲ್ಲಿರುವ ಅವಧೂತ ವಿನಯ್ ಗುರೂಜಿ ಆಶ್ರಮದಲ್ಲಿ ವಿನಯ್ ಗುರೂಜಿ ಚಿತ್ರದ ಮೋಷನ್ ಪೋಸ್ಟರ್ ಹಾಗೂ ಟೈಟಲ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ವಿನಯ್ ಗುರೂಜೀ ಮಾತನಾಡಿ, ಭಗವಾನ್ ಹೆಸರಿನಲ್ಲಿ ಕಿರುಚಿತ್ರಗಳಷ್ಟೇ ಬಂದಿದೆ. ಈಗ ಅವರ ವಿಚಾರಗಳನ್ನು ಒಳಗೊಂಡ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾ ಬರ್ತಿದೆ. ಭಗವಾನ್ ನಲ್ಲಿ ಒಂದೇ ತತ್ವ. ಮನುಷ್ಯತ್ವ. ಅಲ್ಲಿ ಮತಕ್ಕೆ ಜಾಗವಿಲ್ಲ. ಮುಷನ್ಯತ್ವಕ್ಕಿಂತ ದೊಡ್ಡ ತತ್ವ ಮತ್ತೊಂದಿಲ್ಲ. ಶಿರಡಿಬಾಬಾ ಸೀರಿಯಲ್ ಬಂದಮೇಲೆ ಬಾಬಾ ಬಗ್ಗೆ ಗೊತ್ತಾಗಿದ್ದು, ಶ್ರೀನಿವಾಸ ಕಲ್ಯಾಣ ಸಿನಿಮಾ ಆದ್ಮೇಲೆ ತಿರುಪತಿ ಬಗ್ಗೆ ಗೊತ್ತಾಯ್ತು. ಅದೇ ರೀತಿ ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದಲ್ಲಿ ಹಲವು ವಿಷಯಗಳನ್ನು ಜನರಿಗೆ ತಲುಪಿಸುವ ಕೆಲಸವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ನಿರ್ಮಾಪಕ ಕೃಷ್ಣ ಕೆ.ಆರ್ ಮಾತನಾಡಿ, ಭಗವಾನ್ ಶ್ರೀ ನಿತ್ಯಾನಂದ ಸಿನಿಮಾದ ಟೈಟಲ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ನಮ್ಮ ಫ್ಯಾಮಿಲಿ ಭಗವಾನ್ ನಿತ್ಯಾನಂದ ಸೇವೆ ಸಲ್ಲಿಸಿಕೊಂಡು ಬರುತ್ತಿದ್ದೇವೆ. ಈ ಸಿನಿಮಾ ಮಾಡುವ ಮೂಲಕ ಚಿಕ್ಕದೊಂದು ಅಳಿಲು ಸೇವೆ ಮಾಡುತ್ತಿದ್ದೇವೆ ಎಂದರು.

ಸಿನಿಮಾಗೆ The endless one ಭಗವಾನ್ ಶ್ರೀ ನಿತ್ಯಾನಂದ ಎಂಬ ವಿಭಿನ್ನ ಶೀರ್ಷಿಕೆ‌ ಇಡಲಾಗಿದ್ದು, ಲಕ್ಷ್ಮಸ್ ಸ ಖೋಡೇ ಅವರ ಮರಿ ಮಗ, ಪದ್ಮಾನಾಭ ಸ ಖೋಡೇ ಅವರ ಮೊಮ್ಮಗ ಶ್ರೀಕೃಷ್ಣ ಕೆ ಆರ್ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಗುಲಾಬ್ ಪ್ರೊಡಕ್ಷನ್ ನಡಿಯಲ್ಲಿ ತಯಾರಾಗ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಅದ್ಧೂರಿಯಾಗಿ ಚಿತ್ರ ನಿರ್ಮಾಣ ನಿರ್ಮಾಪಕ ಕೃಷ್ಣ ಸಜ್ಜಾಗಿದ್ದು, ಕನ್ನಡ‌ ಮಾತ್ರವಲ್ಲದೇ ತಮಿಳು, ತೆಲುಗು, ಹಿಂದಿ, ಮಲಯಾಳಂ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಿನಿಮಾ ಮೂಡಿಬರಲಿದೆ. ಸದ್ಯದಲ್ಲಿಯೇ ಉಳಿದ ಸ್ಟಾರ್ ಕಾಸ್ಟ್, ತಂತ್ರಜ್ಞಾನರ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed