ಶೂಟಿಂಗ್ ಆಖಾಡದಲ್ಲಿ ಉಪೇಂದ್ರ ಏಳು ವರ್ಷಗಳ ನಂತರ ನಿರ್ದೇಶನಕ್ಕೆ
Posted date: 03 Sun, Jul 2022 11:53:56 AM
ಶೂಟಿಂಗ್ ಆಖಾಡದಲ್ಲಿ ಉಪೇಂದ್ರ ಏಳು ವರ್ಷಗಳ ನಂತರ ನಿರ್ದೇಶನಕ್ಕೆ ಇಳಿದಿರುವ ಉಪೇಂದ್ರ ನಟನೆ ಹಾಗೂ ಆಕ್ಷನ್ ಕಟ್ಹೇ ಳುತ್ತಿರುವ ಚಿತ್ರ ಯುಐ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ.
 
ಕೆಲದಿನಗಳ ಹಿಂದೆಯಷ್ಟೇ ಅದ್ದೂರಿಯಾಗಿ ಮಹೂರ್ತ ಆಚರಿಸಿಕೊಂಡ ಸಮಾರಂಭಕ್ಕೆ ಶಿವರಾಜ್‌ಕುಮಾರ್, ಸುದೀಪ್ ಆಗಮಿಸಿ ತಂಡಕ್ಕೆ ಶುಭ ಹಾರೈಸಿದ್ದರು. ಇದೀಗ ಸಿನಿಮಾದ ಶೂಟಿಂಗ್ ಕೆಲಸಗಳಲ್ಲಿ ಬ್ಯುಸಿ ಇದ್ದು, ಬೆಂಗಳೂರಿನ ಹೊರವಲಯದಲ್ಲಿ ಚಿತ್ರೀಕರಣದಲ್ಲಿ ತೊಡಗಿಕೊಂಡಿದೆ.
 
ಶೂಟಿಂಗ್ ಶುರುವಾದ ಬಗ್ಗೆ ಕೆಲವೊಂದು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಾಗುತ್ತಿದೆ.
 
ಶೀರ್ಷಿಕೆ ಬಗ್ಗೆ ಯಾವುದೇ ಸ್ಪಷ್ಟ ವಿವರಣೆ ನೀಡದೆ, ನಿಮಗೆಲ್ಲಾ ಏನು ಅನಿಸುತ್ತದಯೋ, ಅದೇ ಟೈಟಲ್ ಆಗಿರುತ್ತದೆಂದು ಹೇಳಿ ಉತ್ತರದಿಂದ ಜಾರಿಕೊಂಡಿದ್ದರು.
 
ಕಥೆ ಸಿದ್ದಗೊಂಡಿದೆ. ಬೇರೇನಾದರೂ ಆಲೋಚನೆ ಬಂದರೆ, ಬದಲಿಸುತ್ತೇನೆ. ಹೆಸರು ಹಾಗೂ ಕುದುರೆ ಪೋಸ್ಟರ್ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದೆ. ಅದರ
 
ಬಗ್ಗೆ ಒಬ್ಬೊಬ್ಬರ ಮನಸ್ಸಿನಲ್ಲಿ ಒಂದೊಂದು ಹೊಳೆಯುತ್ತಿದೆ. ನಿಮಗೆಲ್ಲಾ ಏನು ಅನಿಸುವುದೊ, ಅದೆಲ್ಲವೂ ಚಿತ್ರದಲ್ಲಿರುತ್ತದೆಂದು ಹೇಳಿಕೊಂಡಿದ್ದರು. 
 
ಲಹರಿ ಫಿಲಿಂಸ್ ಲಾಂಛನದಲ್ಲಿ ಜಿ.ಮನೋಹರ್ ಮತ್ತು ಕೆ.ಪಿ.ಶ್ರೀಕಾಂತ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಇನು ಹೊಸ ಚಿತ್ರಕ್ಕೆ ನಾಯಕಿ ಯಾರಾಗುತ್ತರೆಂದು ಇಲ್ಲಿಯವರೆಗೂ ಮಾಹಿತಿ ನೀಡಿಲ್ಲ. ಕೆಜಿಎಫ್ ಖ್ಯಾತಿಯ ಶ್ರೀನಿಧಿಶೆಟ್ಟಿ ಅಥವಾ ಬಾಲಿವುಡ್‌ನ ತಮನ್ನಾಭಾಟಿಯಾ ನಾಯಕಿ ಆಗುತ್ತಾರೆಂಬ ಸುದ್ದಿಯು ಗಾಂಧಿನಗರದಲ್ಲಿ  ಹರಿದಾಡುತ್ತಿದೆ  ಅಂತೂ ಇಬ್ಬರಲ್ಲಿ ಒಬ್ಬರಾದರೂ ಆಯ್ಕೆಯಾಗುವುದು ಪಕ್ಕಾ ಎನ್ನುತ್ತಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed