ನಗರದಲ್ಲಿ ಮುಂದುವರೆದ ಜಾಕಿ
Posted date: 20/May/2010

ಪೂರ್ಣಿಮಾ ಎಂಟರ್‌ಪ್ರೈಸಸ್ ಲಾಂಛನದಡಿಯಲ್ಲಿ ಡಾ|| ರಾಜ್‌ಕುಮಾರ್ ಅರ್ಪಿಸಿ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ಅದ್ದೂರಿ ಜಾಕಿ ಚಿತ್ರದ ಚಿತ್ರೀಕರಣವು ಈಗ ನಗರದಲ್ಲಿ ಮುಂದುವರೆದಿದೆ.
ಚಿತ್ರಕ್ಕಾಗಿ ಪುನೀತ್‌ರಾಜ್‌ಕುಮಾರ್, ಭಾವನಾ ಮತ್ತುಇತರ  ಕಲಾವಿದರು ಭಾಗವಹಿಸಿದ ಹಲವಾರು  ಸನ್ನಿವೇಶಗಳನ್ನು ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ  ನಿರ್ದೇಶಕ ಸೂರಿ ಚಿತ್ರಿಸಿಕೊಂಡರು.
ಚಿತ್ರಕ್ಕೆ ಯೋಗರಾಜ್ ಆರ್. ಭಟ್ ಮತ್ತು ಜಯಂತ್  ಕಾಯ್ಕಿಣಿ ಸಾಹಿತ್ಯ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ದೀಪು ಎಸ್. ಕುಮಾರ್ ಸಂಕಲನ, ಶಶಿಧರ ಅಡಪ ಕಲೆ, ಇಮ್ರಾನ್ ನೃತ್ಯ, ರವಿವರ್ಮ-ಡಿಫರೆಂಟ್ ಡ್ಯಾನಿ ಸಾಹಸ, ಮಲ್ಲಿಕಾರ್ಜುನ ನಿರ್ಮಾಣ ನಿರ್ವಹಣೆ, ಚನ್ನ ನಿರ್ಮಾಣ ಮೇಲ್ವಿಚಾರಣೆ ಇದ್ದು, ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆ ಮತ್ತು ನಿರ್ದೇಶನದ ಹೊಣೆಯನ್ನು ಸೂರಿ ಹೊತ್ತಿದ್ದಾರೆ.
ತಾರಾಗಣದಲ್ಲಿ  ಪುನೀತ್‌ರಾಜ್‌ಕುಮಾರ್ ಜೋಡಿಯಾಗಿ ಚತುರ್ಭಾಷಾ ತಾರೆ ಭಾವನಾ ಕಾಣಿಸಿಕೊಳ್ಳುತ್ತಿದ್ದು, ರಂಗಾಯಣ ರಘು, ರವಿಕಾಳೆ, ಶೋಭರಾಜ್, ಸಂಪತ್, ಉಮೇಶ್ ಮುಂತಾದವರಿದ್ದಾರೆ. 


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed