ಪಯಣದಲ್ಲಿ ಸಾಗುವ ಅಸ್ಥಿರ
Posted date: 15 Wed, Feb 2023 10:32:57 AM
ನಿರ್ದೇಶಕ ಹೊರತುಪಡಿಸಿ ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ ’ಅಸ್ಥಿರ’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭವು ಎಸ್‌ಆರ್‌ವಿ ಪ್ರಿವ್ಯೂ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಉಪಾಧ್ಯಕ್ಷ ಮತ್ತು ಹಿರಿಯಪತ್ರಕರ್ತ ಎನ್‌ಆರ್‌ಕೆ.ವಿಶ್ವನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ತಂಡಕ್ಕೆ ಶುಭ ಹಾರೈಸಿದರು. ಸ್ಥಿರವಲ್ಲದ್ದನ್ನು ಅಸ್ಥಿರ ಎಂದು ಕರೆಯುವುದುಂಟು. ಅದೇ ರೀತಿ ಸೀಮಿತ ಮನಸ್ಥಿತಿ ಇಲ್ಲದೆ ಇರುವ ವ್ಯಕ್ತಿಯು ಪ್ರೀತಿಯಲ್ಲಿ ಸೋತಾಗ ಸಾಮಾನ್ಯ ಹುಡುಗನಾದವನು ಯಾವ ರೀತಿ ಇರುತ್ತಾನೆ ಎಂಬುದನ್ನು ಹೇಳಲಾಗಿದೆ. ತ್ರಿಕೋನ ಪ್ರೇಮ ಕಥೆಯು ಬನ್ನೂರುನಿಂದ ಕುಮುಟಾ, ಹೊನ್ನಾವರ ತನಕ ಪಯಣದಲ್ಲಿ ಸಾಗಿ ಕಾಡಿನಲ್ಲಿ ಕೊನೆಗೊಳ್ಳುವುದನ್ನು ಥ್ರಿಲ್ಲರ್, ಸೆಸ್ಪೆನ್ಸ್ ಮಾದರಿಯಲ್ಲಿ ತೋರಿಸಲಾಗಿದೆ. 
 
ಮೂರು ಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಇರುವ ಎಸ್.ಆರ್.ಪ್ರಮೋದ್ ಆಕ್ಷನ್ ಕಟ್ ಹೇಳುವ ಜತೆಗೆ ಉಪನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ ಹತ್ತು ವರ್ಷಗಳ ಪರಿಣತಿ ಪಡೆದುಕೊಂಡಿರುವ ಅನಿಲ್.ಸಿ.ಆರ್ ಕಥೆ ಮತ್ತು ವಿರಾಜ್ ಫಿಲಂ ರೆಕಾರ್ಡಿಂಗ್ ಸ್ಟುಡಿಯೋ ಹೆಸರಿನಲ್ಲಿ ಬಂಡವಾಳ ಹೂಡಿದ್ದು, ಹಾಗೂ ನಾಯಕನಾಗಿ ಬಣ್ಣ ಹಚ್ಚಿರುವುದು ಹೊಸ ಪ್ರಯತ್ನ.
 
ಕಾಲೇಜು ಹುಡುಗಿಯಾಗಿ ಕಾವೇರಿಹದಡಿ ನಾಯಕಿ. ಗೆಳತಿಯರಾಗಿ  ಹುಬ್ಬಳಿ ಮೂಲದ ರಾಧೇ, ಗುಬ್ಬಿ ಕಡೆಯ ಹರಿಣಿನಟರಾಜು, ಖಳನಾಗಿ ಬನ್ನೂರು ಶ್ರೀನಿವಾಸಗೌಡ ಮುಂತಾದವರು ನಟಿಸಿದ್ದಾರೆ. ಕಲಾವಿದರ ಮೂಲ ಹೆಸರನ್ನು ಆಯಾ ಪಾತ್ರಕ್ಕೆ ಬಳಸಲಾಗಿದೆ. 
 
ಸಿದ್ದುಅರಸು ಸಾಹಿತ್ಯದ ನಾಲ್ಕು ಹಾಡುಗಳಿಗೆ ನಿತಿನ್‌ರಾಜ್ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ವಿನೋದ್.ಆರ್, ಸಂಕಲನ ಅಯುರ್‌ಸ್ವಾಮಿ, ಸಾಹಸ ಗಣೇಶ್, ಸಂಭಾಷಣೆ ರಾಘವೇಂದ್ರ ಅವರದಾಗಿದೆ. ಕುಮುಟ, ಹೊನ್ನಾವರ, ಬನ್ನೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸಿನಿಮಾವು ಫೆಬ್ರವರಿ ತಿಂಗಳಲ್ಲಿ ತೆರೆಕಾಣುವ ಸಾಧ್ಯತೆ ಇದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed