ಹುಚ್ಚಿಗೆ ಡಬ್ಬಿಂಗ್ ಪೂರ್ಣ
Posted date: 6/May/2009

ಹುಚ್ಚಿ ಚಿತ್ರದ ಚಿತ್ರೀಕರಣ ೨೨ ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಸತತವಾಗಿ ನಡೆದು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕವಿತಾಲಯ ಫಿಲಂಸ್ ಲಾಂಛನದಲ್ಲಿ ಡಿ.ಬಿ. ಕುಮಾರಸ್ವಾಮಿ ನಿರ್ಮಿಸುತ್ತಿರುವ ವೆಂಕಟೇಶ್ ಪಂಚಾಂಗಂ ಕಥೆ-ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಪೂಜಾಗಾಂಧಿಯವರು ಶೀರ್ಷಿಕೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಆಕಸ್ಮಿಕವಾಗಿ ನಡೆದಂತಹ ಒಂದು ಘಟನೆಯಲ್ಲಿ ನೊಂದು ಬಳಲಿದ ಯುವತಿಯೋರ್ವಳು ಜೀವನದಲ್ಲಿ ತುಂಬಾ ನಿರಾಸೆಯಿಂದ ಮಾನಸಿಕವಾಗಿ ಆಘಾತಕ್ಕೊಳಗಾಗಿ, ತನ್ನ ಸುತ್ತಲಿನ ಎಲ್ಲರೂ ತನಗೆ ಮೋಸಮಾಡುತ್ತಾರೆಂದು ಕಲ್ಪಿಸಿಕೊಂಡು ವಿಚಿತ್ರವಾಗಿ ವರ್ತಿಸುವ ಈ ಹುಚ್ಚಿ ಹಿನ್ನೆಲೆ ಏನು ? ಆಕೆಯ ಜೀವನದಲ್ಲಿ ನಡೆದಂತಹ ಘಟನೆ ಯಾವುದು ಎಂಬುದನ್ನು ಕುತೂಹಲಕಾರಿಯಾಗಿ ನಿರ್ದೇಶಕರು ನಿರೂಪಿಸಿದ್ದಾರೆ. ಒಂದು ಮಗು ಹಾಗೂ ಪೂಜಾ ಗಾಂಧಿ ಇವರಿಬ್ಬರ ಸುತ್ತ ಸಾಗುವ ಈ ಕಥೆಯ ಹೆಚ್ಚಿನ ಭಾಗವನ್ನು ರಾಜರಾಜೇಶ್ವರಿನಗರದಲ್ಲಿ ಖಾಸಗಿ ಮನೆಯೊಂದರಲ್ಲಿ ಚಿತ್ರೀಕರಿಸಲಾಗಿದೆ. ಇದೀಗ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಕಳೆದ ವಾರದಿಂದ ಚಿತ್ರದ ಡಬ್ಬಿಂಗ್ ಕಾರ್ಯ ನಡೆದು, ಸೋಮವಾರ ಮುಕ್ತಾಯಗೊಂಡಿದೆ. ಇಡೀ ಚಿತ್ರದಲ್ಲಿ ಒಂದೇ ಹಾಡು ಇದೆ. ನವೀನ್ ಸುವರ್ಣ ಅವರು ಛಾಯಾಗ್ರಾಹಕರಾಗಿದ್ದು, ನಿರ್ಮಾಪಕ ಗಿರಿ ಪಂಚಾಂಗಂ ಅವರೇ ಸಾಹಿತ್ಯ ರಚಿಸಿ, ಸಂಗೀತ ಸಂಯೋಜನೆ ಮಾಡಿದ್ದಾರೆ. ಕಪಾಲಿ ಅವರ ನಿರ್ಮಾಣ ನಿರ್ವಹಣೆ, ನಾಗೇಂದ್ರ ಅರಸ್‌ರ ಸಂಕಲನ ಈ ಚಿತ್ರಕ್ಕಿದೆ. ತಿಲಕ್, ಅನಂತ್‌ನಾಗ್, ಸುಧಾರಾಣಿ, ಧರ್ಮ, ವೆಂಕಟೇಶ್ ಪ್ರಸಾದ್, ಮನ್‌ದೀಪ್‌ರಾಯ್ ಹಾಗೂ ವಿಶೇಷ ಪಾತ್ರವೊಂದರಲ್ಲಿ ಬೇಬಿ ಸೌಂದರ್ಯ (ಸೋನು) ಅಭಿನಯಿಸಿದ್ದಾರೆ

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed