ಮಿಸ್ಟ್ರಿ ಥ್ರಿಲ್ಲರ್ ``3.0`` ಈವಾರ ತೆರೆಗೆ
Posted date: 12 Wed, Oct 2022 12:12:34 PM
ಒರಾಕಲ್ ಕಲಾ ಕ್ರಿಯೇಶನ್ಸ್ ಲಾಛನದಲ್ಲಿ  ತಯಾರಾಗಿರುವ  ಕ್ರೈಂ, ಥ್ರಿಲ್ಲರ್ ಕಥಾಹಂದರದ ಚಿತ್ರ ``3.O`` ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.  ಇಂದ್ರಜಿತ್ ಅವರು  ಚಿತ್ರದ ಕಥೆ, ಚಿತ್ರಕಥೆ ಬರೆದು ಅ್ಯಕ್ಷನ್ ಕಟ್ ಹೇಳಿದ್ದಾರೆ. 

ಹೊಸ ಪ್ರತಿಭೆಗಳಾದ  ಶಶಿಕಿರಣ್, ಶಿವರಾಜ್ ಮತ್ತು ಲೋಹಿತ್ ಈ ಚಿತ್ರದಲ್ಲಿ ನಾಯಕರಾಗಿ ನಟಿಸಿದ್ದು, ಅವರೇ  ಬಂಡವಾಳವನ್ನೂ  ಹಾಕಿದ್ದಾರೆ. ನಾಯಕಿಯಾಗಿ ನಿಶ್ಕಲಗೌಡ ನಟಿಸಿದ್ದಾರೆ. 
 
ಇದೊಂದು ಮರ್ಡರ್ ಮಿಸ್ಟ್ರಿಯಾಗಿದ್ದು, ಯುವತಿಯ ಕೊಲೆಯ ತನಿಖೆಯ ಸುತ್ತ ಸಾಗುವ ಕಥೆ ಇದರಲ್ಲಿದೆ.  ಬಹುತೇಕ ಬೆಂಗಳೂರು ಸುತ್ತ ಮುತ್ತ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ವೀರ ಸಮರ್ಥ ಅವರ ಸಂಗೀತ ನಿರ್ದೇಶನ, ಕೆ.ಕಲ್ಯಾಣ್  ಸಾಹಿತ್ಯ, ಅರ್ಜುನ್ ಕಿಟ್ಟು ಸಂಕಲನ, ಮಲ್ಲಿಕಾರ್ಜುನ ಕಲಾನಿರ್ದೇಶನವಿದ್ದು, ಸಂಗೀತಾ, ಸ್ವಾತಿ, ವಾಣಿಶ್ರೀ, ಪ್ರವೀಣ್ ಪ್ರಮುಖ ಪಾತ್ರಗಳಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed