ಡಿಸೆಂಬರ್ 15 ರಂದು ಬರಲಿದೆ `ಬ್ಲಾಂಕ್ ` ಹಾಡು
Posted date: 14 Tue, Dec 2021 08:59:16 AM
ಫೆಲಿಸಿಟಿ ಫಿಲಂಸ್ ಲಾಂಛನದಲ್ಲಿ ಎನ್ ಪಿ  ಮಂಜುನಾಥ್ ಪ್ರಸನ್ನ ಅವರು ನಿರ್ಮಿಸಿರುವ `ಬ್ಲಾಂಕ್ ` ಚಿತ್ರಕ್ಕಾಗಿ ಖ್ಯಾತ  ಗಾಯಕ  ವಿಜಯ್ ಪ್ರಕಾಶ್ ಹಾಗೂ ಸರಿಗಮಪ ಖ್ಯಾತಿಯ ಆಶಾ ಭಟ್ ಹಾಡಿರುವ ಹಾಡೊಂದು A2 MUSIC ಮೂಲಕ ಬಿಡುಗಡೆಯಾಗಲಿದೆ. ಶ್ರೀ ಶಾಸ್ತ ಸಂಗೀತ ನೀಡಿದ್ದಾರೆ. 
 
ಎಸ್ ಜಯ್ ನಿರ್ದೇಶಿಸಿರುವ ಈ ಚಿತ್ರ ಸದ್ಯದಲ್ಲೇ ಬಿಡುಗಡೆಯಾಗಲಿದೆ. ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ, ಚಿತ್ರಕಥೆ ಬರೆದಿದ್ದಾರೆ  ಎಸ್ ಜಯ್, ಅಂಬರೀಶ್ ಪತ್ತಾರ್ ಹಾಗೂ ಶ್ರೀಕಾಂತ್ ಆಂಜಲ್ ಸಂಭಾಷಣೆ ಬರೆದಿದ್ದಾರೆ. 

ಜೆ.ಪಿ.ಮ್ಯಾನ್ ಛಾಯಾಗ್ರಹಣ, ಶ್ರೀಶಾಸ್ತ ಸಂಗೀತ ನಿರ್ದೇಶನ, ಅಶೋಕ್ ಸಾಹಸ ನಿರ್ದೇಶನ ಹಾಗೂ ವಿಜಯ್ ಅವರ ನೃತ್ಯ ನಿರ್ದೇಶನ `ಬ್ಲಾಂಕ್ ` ಚಿತ್ರಕ್ಕಿದೆ.
ಪೂರ್ಣಚಂದ್ರ ಮೈಸೂರು, ಕೃಷಿ ತಾಪಂಡ, ಪ್ರಶಾಂತ್ ಸಿದ್ದಿ, ಸುಚೇಂದ್ರ ಪ್ರಸಾದ್, ಭರತ್ ಹಾಸನ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.‌
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed