ಪ್ರಜ್ವಲ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ವೀರಂ ಟೀಸರ್ ಬಿಡುಗಡೆ
Posted date: 03 Sat, Jul 2021 07:34:20 PM
ಡಾಟರ್ ಆಫ್ ಪಾರ್ವತಮ್ಮ ಖ್ಯಾತಿಯ ಶಶಿಧರ್ ಅವರ ನಿರ್ಮಾಣ ಹಾಗೂ ಖದರ್‍ಕುಮಾರ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‌ಚಿತ್ರ ವೀರಂ. ನಟ ಪ್ರಜ್ವಲ್ ದೇವರಾಜ್ ಹಿಂದೆಂದೂ ಕಾಣಿಸದಂಥ  ಪಾತ್ರದಲ್ಲಿ  ಕಾಣಿಸಿಕೊಂಡಿದ್ದಾರೆ. ಪ್ರಜ್ವಲ್‌ ಅವರ ಹುಟ್ಟುಹಬ್ಬದ ಪ್ರಯುಕ್ತ ಇಂದು ಸಂಜೆ  5.00 ಕ್ಕೆ ಆನಂದ್ ಆಡಿಯೋ ಮೂಲಕ ಈ ಚಿತ್ರದ   ಟೀಸರ್ ಬಿಡುಗಡೆಯಾಗಲಿದೆ. ಇದೇ ಮೊದಲಬಾರಿಗೆ ಪ್ರಜ್ವಲ್ ದೇವರಾಜ್ ಜೋಡಿಯಾಗಿ ಡಿಂಪಲ್‍ಕ್ವೀನ್ ರಚಿತಾರಾಮ್ ಅವರು ಕಾಣಿಸಿಕೊಳ್ಳುತ್ತಿದ್ದು,  ಈ ಚಿತ್ರದ ಮೂಲಕ ನಿರ್ದೇಶಕ ಖದರ್‍ಕುಮಾರ್ ಅವರು ಹೊಸದೊಂದು ಕಂಟೆಂಟನ್ನು ಹೇಳಹೊರಟಿದ್ದಾರೆ.  ಗ್ಲೂಗಿ, ಶಿವಲಿಂಗ, ಶ್ರಾವಣಿ ಸುಬ್ರಹ್ಮಣ್ಯ ಮುಂತಾದ ಸಿನಿಮಾಗಳಿಗೆ  ಸಹಾಯಕ  ನಿರ್ದೇಶಕರಾಗಿ  ಕೆಲಸ ಮಾಡಿರುವ ಖದರ್ ಕುಮಾರ್  ಈ ಚಿತ್ರದ ಮೂಲಕ ಮೊದಲಬಾರಿಗೆ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇದೊಂದು ಮಾಸ್ ಎಂಟರ್‍ಟೈಮೆಂಟ್ ಕಥಾಹಂದರ ಹೊಂದಿರುವ ಚಿತ್ರ. ಒಂದು ಮಾಸ್ ಕಥೆಯನ್ನು ಎಮೋಷನಲ್ ಆಗಿಯೂ ಜನರಿಗೆ ತೋರಿಸಬಹುದು ಎಂದು ಈ ಚಿತ್ರದ ಮೂಲಕ ತೋರಿಸುತ್ತಿದ್ದೇವೆ ಎನ್ನುತ್ತಾರೆ ಚಿತ್ರದ ನಿರ್ಮಾಪಕ ಶಶಿಧರ್. ವಿಶೇಷವಾಗಿ ಈ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಅವರು ವಿಶೇಷವಾದ ಪಾತ್ರವೊಂದಕ್ಕ ಬಣ್ಣ ಹಚ್ಚುತ್ತಿದ್ದಾರೆ. 
ಈಹಿಂದೆ ಡಾಟರ್ ಆಫ್ ಪಾರ್ವತಮ್ಮ ಎಂಬ  ಚಿತ್ರವನ್ನು ನಿರ್ಮಿಸಿದ್ದ  ಶಶಿಧರ್ ಅವರು ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ ಮೂಲಕ  ಶುಗರ್ ಲೆಸ್ ಹಾಗೂ ವೀರಂ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಸೀಳನ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed