ಪ್ರೇಕ್ಷಕರ ಮನಗೆದ್ದ ಬೈ ಒನ್ ಗೆಟ್ ಒನ್ ಫ್ರೀ
Posted date: 24 Wed, Nov 2021 08:25:19 AM
ಇದೇ ಮೊದಲಬಾರಿಗೆ ಅವಳಿ-ಜವಳಿ ಸಹೋದರರು ಟ್ವಿನ್ಸ್ ಆಗಿಯೇ  ಕಾಣಿಸಿಕೊಂಡಿರುವ ಚಿತ್ರ  ಬೈಒನ್ ಗೆಟ್‌ಒನ್ ಫ್ರೀ.  ಕಳೆದ ವಾರವಷ್ಟೇ ಬಿಡುಗಡೆಯಾದ ಈ ಚಿತ್ರ  ರಿಲೀಸಾದ ಎಲ್ಲಾ ಕೇಂದ್ರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ  ಚಿತ್ರದ ಕಲೆಕ್ಷನ್ ಕೂಡ ಹೆಚ್ಚಾಗುತ್ತಿದೆ. ವಿಶೇಷವಾಗಿ ಟ್ವಿನ್ಸ್  ಕಥೆ ಜನರಿಗೆ ಇಷ್ಟವಾಗಿದೆ. ‌ ಜೊತೆಗೆ ನಟ ಕಿಶೋರ್ ಅವರ ಪಾತ್ರ ಇಡೀ ಚಿತ್ರದ ಹೈಲೈಟ್, ಅವರ ಪ್ರಬುದ್ಧ ಅಭಿನಯ  ಪ್ರೇಕ್ಷಕರಿಗೆ ಇಷ್ಟವಾಗಿದೆ. ಮೂರ್ನಾಲ್ಕು ಚಿತ್ರಗಳ ಜೊತೆ ರಿಲೀಸಾಗಿದ್ದರೂ ಬೈ ಒನ್ ಗೆಟ್ ಒನ್ ಫ್ರೀ ತನ್ನ ವಿಶೇಷತೆಯ ಮೂಲಕ ನೋಡುಗರ ಮನ ಗೆದ್ದಿದೆ.   ಅವಳಿ ಸೋದರರಾದ ಮಧುರಾಜ್ ಹಾಗೂ ಮನುರಾಜ್  ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದು,  ಬಹುಭಾಷಾ ನಟ ಕಿಶೋರ್  ಪೋಸ್ಟ್  ಮ್ಯಾನ್ ಮನ್ಮಥನಾಗಿ ಕಾಣಿಸಿಕೊಂಡಿದ್ದಾರೆ.  ಸಸ್ಪೆನ್ಸ್-ಥ್ರಿಲ್ಲರ್ ಜೊತೆಗೆ ಹಾರರ್ ಶೇಡ್ ಕಥೆಯಿರುವ ಈ ಚಿತ್ರಕ್ಕೆ ಹರೀಶ್ ಅನಿಲ್ ಗಾಡ್ ಆಕ್ಷನ್ ಕಟ್ ಹೇಳಿದ್ದಾರೆ. ಇದೊಂದು ಟ್ರಾವೆಲ್ ಸ್ಟೋರಿಯಾಗಿದ್ದು, 
ಅವಳಿ ಜವಳಿ ಹುಡುಗರು ತಮ್ಮ ಹಿಂದಿನ ಕಥೆಯನ್ನು ಹುಡುಕುತ್ತಾ ಹೋದಾಗ ಅಲ್ಲೊದು ಪ್ರೀತಿ ಹುಟ್ಟಿಕೊಳ್ಳುತ್ತೆ, ಪತ್ರಗಳನ್ನು ತಲುಪಿಸುವವನದ್ದೇ ಒಂದು ಪ್ರೇಮಕಥೆಯಿದೆ. 
 
ಸಿಟಿಯಲ್ಲಿ ಶುರುವಾಗುವ ಕಥೆ, ವಿಭಿನ್ನ ತಿರುವುಗಳನ್ನು ಪಡೆದುಕೊಂಡು ನಂತರ ಕರಾವಳಿ ಪ್ರಕೃತಿಯ ಮಡಿಲಲ್ಲಿ ಮುಕ್ತಾಯಗೊಳ್ಳುತ್ತದೆ, . ಚಿತ್ರದ ನಾಯಕಿಯರಾಗಿ ರೋಷನಿ ತೇಲ್ಕರ್ ಹಾಗೂ ರಿಶಿತಾ ಮಲ್ನಾಡ್ ನಟಿಸಿದ್ದಾರೆ.  ದಿನೇಶ್‌ಕುಮಾರ್ ಅವರ ಸಂಗೀತ,  ಅಭಿಷೇಕ್ ಮೃತ್ಯುಂಜಯ ಪಾಂಡೆ ಮತ್ತು ವಿಶ್ವಜಿತ್‌ರಾವ್ ಅವರ ಕ್ಯಾಮೆರಾವರ್ಕ್ ಚಿತ್ರಕ್ಕಿದೆ. ಥ್ರಿಲ್ಲರ್ ಮಂಜು, ವೈಲೆಂಟ್ ವೇಲು ಹಾಗೂ ರಮೇಶ್ ಸಾಹಸ ದೃಷ್ಯಗಳನ್ನು ಸೆರೆಹಿಡಿದಿದ್ದಾರೆ.  ಉಷಾ ಭಂಡಾರಿ, ಬಲ ರಾಜವಾಡಿ, ಗೌರೀಶ್‌ಅಕ್ಕಿ, ಪ್ರಶಾಂತ್‌ರಾಯ್  ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed