ಅದೊಂದಿತ್ತು ಕಾಲ ಮೂರನೇ ಹಂತ !
Posted date: 06 Tue, Jul 2021 11:24:33 AM
ಭುವನ್ ಸಿನಿಮಾಸ್ ಲಾಂಛನದಡಿಯಲ್ಲಿ ನಿರ್ಮಾಪಕರಾದ ಸುರೇಶ್ ಹಾಗೂ ಎನ್. ಲೋಕೇಶ್ ನಿರ್ಮಿಸುತ್ತಿರುವ  ಅಂದೊಂದಿತ್ತು ಕಾಲ ಚಿತ್ರದ ಮೂರನೇ ಹಂತದ ಚಿತ್ರೀಕರಣವು ಈ ವಾರ ನಗರದಲ್ಲಿ ಆರಂಭವಾಗಲಿದೆ.

ಈಗಾಗಲೇ 2 ಹಂತದ ಚಿತ್ರೀಕರಣವನ್ನು ಬೆಂಗಳೂರು, ತೀರ್ಥಹಳ್ಳಿ ಯಲ್ಲಿ ಚಿತ್ರಿಸಿರುವ ಚಿತ್ರತಂಡವು ಈಗ ಮೂರನೇ ಹಂತಕ್ಕೆ ಸಜ್ಜಾಗಿದೆ.

ಚಿತ್ರದಲ್ಲಿ ಹಿರಿಯ ನಿರ್ದೇಶಕರೊಬ್ಬರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

ಚಿತ್ರಕ್ಕೆ ಅರಸುಅಂತಾರೆ, ಸಂತೋಷ್ ಮುಂದಿನಮನೆ ಸಂಭಾಷಣೆ, ನಾಗೇಂದ್ರ ಪ್ರಸಾದ್ ಸಾಹಿತ್ಯ ಅಭಿಷೇಕ್‌ ಕಾಸರಗೋಡು ಛಾಯಾಗ್ರಹಣ, ವಿ. ರಾಘವೇಂದ್ರ ಸಂಗೀತ, ಎ.ಆರ್.ಕೃಷ್ಣ ಸಂಕಲನ, ಆರ್.ಜೆ.ರಘು, ನೃತ್ಯ, ಅನಿಲ್ ನಿರ್ಮಾಣ ನಿರ್ವಹಣೆಯಿದ್ದು, ಚಿತ್ರವನ್ನು ಹಲವಾರು ಯಶಸ್ವಿ ಚಿತ್ರಗಳ ನಿರ್ದೇಶಕರಜೊತೆ ಕೆಲಸ ಮಾಡಿದ ಕೀರ್ತಿ ಈ ಚಿತ್ರ ನಿರ್ದೇಶಿಸುವುದರ ಮೂಲಕ ಚಿತ್ರರಂಗ ಪ್ರವೇಶಿಸಲಿದ್ದಾರೆ. 

ತಾರಾಗಣದಲ್ಲಿ ವಿನಯ್‌ ರಾಜ್‌ಕುಮಾರ್, ಅದಿತಿ ಪ್ರಭುದೇವ, ನಿಶಾಮಿಲನ, ಅರುಣ ಬಾಲರಾಜ್ ಮೋಹನ್‌ ಜುನೇಜಾ, ಕಡ್ಡಿಪುಡಿ ಚಂದ್ರು, ಮಜಾ ಭಾರತ್‌ ಜಗ್ಗಪ್ಪ,ಧರ್ಮೆಂದ್ರ ಅರಸ್, ಹಿರಿಯ ಸಾಹಿತಿ  ಪ್ರೊ. ದೊಡ್ಡರಂಗೇಗೌಡ, ಪ್ರಧಾನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed