ಫ಼್ರೆಂಡ್ಸ್ ಪ್ರೊಡಕ್ಷನ್ಸ್ ನೂತನ ಚಿತ್ರಕ್ಕೆ ಬಿರುಸಿನ ಚಿತ್ರೀಕರಣ
Posted date: 11/February/2009

     ್ರೆಂಡ್ಸ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ನೂತನಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ನಾಯಕ ಮಿಥುನ್‌ತೇಜಸ್ವಿಗೆ ಹೆಂಡತಿ ಎಂದರೆ ಪ್ರಾಣ. ಇವರ ದಾಂಪತ್ಯ ನೋಡಿ ಸಹಿಸಲಾಗದ ನಂಬಿಕಸ್ತ ನೆಂಟರಿಂದ ಈ ಜೋಡಿ ಸಾಕಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಎಷ್ಟೇ ಕಷ್ಟ ಬಂದರೂ ಅವನೆಲ್ಲಾ ಎದುರಿಸಿ ಮಿಥುನ್ ತನ್ನ ಮಡದಿಯನ್ನು ಜೋಪಾನ ಮಾಡುತ್ತಾನೆ. ಈ ಸಾಂಸಾರಿಕ ಸನ್ನಿವೇಶಗಳನ್ನು ಕೋರಮಮಂಗಲ ಬಳಿಯಿರುವ ಎಚ್.ಎಸ್.ಆರ್ ಲೇಔಟ್‌ನಲ್ಲಿ ನಿರ್ದೇಶಕ ಬಿ.ಶಂಕರ್ ಚಿತ್ರೀಕರಿಸಿಕೊಂಡರು.

   ನಿರ್ದೇಶಕರೇ ಚಿತ್ರಕತೆ ಬರೆದು ನಿರ್ಮಾಣದ ಹೊಣೆ ಹೊತ್ತಿರುವ ಈ ಚಿತ್ರಕ್ಕೆ ಸುಂದರನಾಥ್‌ಸುವರ್ಣ ಛಾಯಾಗ್ರಹಣ, ಗಿರಿಧರದಿವಾನ್ ಸಂಗೀತ, ವಿ.ಮನೋಹರ್, ಚೇತನ್, ಆರ್ಯ ಗೀತರಚನೆ, ಶ್ರೀ ಸಂಕಲನ, ಮಂಜುನಾಥ್ ಸಂಭಾಷಣೆ, ಹೊಸ್ಮನೆ ಮೂರ್ತಿ ಕಲೆ, ಚಿನ್ನಿಪ್ರಕಾಶ್ ನೃತ್ಯ, ರಾಮಣ್ಣನವರ ನಿರ್ಮಾಣನಿರ್ವಹಣೆಯಿದೆ. ಮಿಥುನ್‌ತೇಜಸ್ವಿ, ವಿಶಾಖಸಿಂಗ್(ಬಾಂಬೆ),  ರೋಹನ್‌ಗೌಡ, ಸುಮನ್‌ರಂಗನಾಥ್, ಉಮಾಶ್ರೀ, ಹರೀಶ್‌ರಾಯ್, ಮೈಕಲ್‌ಮಧು, ರೇಖಾದಾಸ್ ಮುಂತಾದವರ ತಾರಾಬಳಗ ಈ ನೂತನ ಚಿತ್ರಕ್ಕಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed