ಶಾರ್ಜಾದಲ್ಲೂ ``ಕಬ್ಜ`` ಹವಾ...
Posted date: 25 Sun, Sep 2022 01:30:48 PM
ಇತ್ತೀಚಿಗೆ ಬಿಡುಗಡೆಯಾದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ"ದ ಟೀಸರ್ ಕಡಿಮೆ ಸಮಯದಲ್ಲೇ ಇಪ್ಪತ್ತೈದು ಮಿಲಿಯನ್ ಗೂ ಮೀರಿ ವೀಕ್ಷಣೆಯಾಗಿ ಭಾರೀ ಜನಮನ್ನಣೆ ಪಡೆಯುತ್ತಿದೆ.
 
ನಿರೀಕ್ಷೆಗೂ ಮೀರಿ ಟೀಸರ್ ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿರುವ ಈ ಸಂತಸದ ಸಂದರ್ಭದಲ್ಲಿ " ಕಬ್ಜ" ಚಿತ್ರತಂಡ "ರಾಜ್ ಕಪ್" ಫೈನಲ್ ಗಾಗಿ ದೂರದ ದುಬೈಗೆ ತೆರಳಿದೆ.  ನಾಯಕ ಉಪೇಂದ್ರ, ನಿರ್ದೇಶಕ-ನಿರ್ಮಾಪಕ ಆರ್ ಚಂದ್ರು, ಕೆ.ಪಿ.ಶ್ರೀಕಾಂತ್, ನಾಗೇಂದ್ರ ಮುಂತಾದವರು ಅಲ್ಲಿಗೆ ಪ್ರಯಾಣ ಬೆಳೆಸಿದ್ದಾರೆ. ಶಾರ್ಜಾದಲ್ಲೂ ಕೂಡ "ಕಬ್ಜ" ಚಿತ್ರದ  ಅಬ್ಬರ ಜೋರಾಗಿದೆ. ಎಲ್ಲೆಡೆ "ಕಬ್ಜ"  ಚಿತ್ರದ ಟೀಸರ್ ಪ್ರದರ್ಶನವಾಗುತ್ತಿದೆ. ಭಾರತದಲ್ಲಷ್ಟೇ ಅಲ್ಲದೇ ಭಾರತದಾಚೆಗೂ  ಕನ್ನಡದ ಹೆಮ್ಮೆಯ "ಕಬ್ಜ" ಚಿತ್ರದ ಟೀಸರ್ ಗೆ ಸಿಗುತ್ತಿರುವ ಪ್ರಶಂಸೆ ಕಂಡು ಖುಷಿಯಾಗಿದೆ ಎನ್ನುತ್ತಾರೆ ಆರ್ ಚಂದ್ರು. 
 
ಇದೇ ಸಂದರ್ಭದಲ್ಲಿ ನಾಯಕ ಉಪೇಂದ್ರ ಅವರ ಹುಟ್ಟುಹಬ್ಬದ ಆಚರಣೆ ಕೂಡ ನಡೆಯಿತು. ನಿರ್ಮಾಪಕರಾದ ಸಾ.ರಾ.ಗೋವಿಂದು, ಎಂ.ಎನ್.ಸುರೇಶ್, ಕೆ.ಮಂಜು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed