ಸಾಂಪ್ರದಾಯಿಕ ಮಹಿಳಾ ಉಡುಪುಗಳ ಮಳಿಗೆ ``ರಾಧ್ಯ`` ಉದ್ಘಾಟಿಸಿದ ರಾಧಿಕಾ-ದೀಪಿಕಾದಾಸ್
Posted date: 04 Thu, Aug 2022 09:15:24 AM

ಶ್ರಾವಣ ಮಾಸದಲ್ಲಿ ಹಬ್ಬಗಳ ಸಂಭ್ರಮಕ್ಕೆ ಮಹಿಳೆಯರಿಗಾಗಿಯೇ ಸಾಂಪ್ರದಾಯಿಕ ಉಡುಗೆ ತೊಡುಗೆಗಳ ಸಂಗ್ರಹ ಹೊಂದಿರುವ ಮಳಿಗೆ `ರಾಧ್ಯ` ಬಸವೇಶ್ವರ ನಗರದಲ್ಲಿ ಪ್ರಾರಂಭವಾಗಿದೆ. ಸ್ಯಾಂಡಲ್ ವುಡ್ ನಟಿಯರಾದ ರಂಗಿತರಂಗ ರಾಧಿಕಾ ನಾರಾಯಣ್ ಹಾಗೂ ಬಿಗ್ ಬಾಸ್ ದೀಪಿಕಾದಾಸ್ ಈ ನೂತನ ವಸ್ತ್ರ ಮಳಿಗೆಯನ್ನು ಉದ್ಘಾಟಿಸಿದರು.  ಶ್ರೀಮತಿ ರಂಜಿತಾ ಹಾಗೂ ಸಿದ್ದೇಶ್ ಕುಮಾರ್ ಅವರುಗಳು ಕೈಮಗ್ಗ ವೃತ್ತಿಯನ್ನು ಅವಲಂಬಿಸಿರುವ ನೇಕಾರರನ್ನು  ಪ್ರೋತ್ಸಾಹಿಸಲೆಂದೇ ಈ ಮಳಿಗೆಯನ್ನು ತೆರೆದಿದ್ದಾರೆ. ಥಿಂಕ್ ಗ್ಲೋಬಲಿ, ಅಟ್ ಲೋಕಲಿ ಧ್ಯೇಯದೊಂದಿಗೆ  ೪೦ ಸಾವಿರಕ್ಕೂ ಹೆಚ್ಚು ನೇಕಾರರಿಗೆ ಲೋಕಲ್ ಮಾರ್ಕೆಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಈಗಾಗಲೇ ಆನ್ ಲೈನ್ ಮೂಲಕ ಸುಮಾರು ವರ್ಷಗಳಿಂದ ವಸ್ತ್ರಗಳನ್ನು ಮಾರಾಟ ಮಾಡಲಾಗುತ್ತಿದೆ. ಆರಂಭಿಕ ಕೊಡುಗೆಯಾಗಿ ಸುಮಾರು ಶೇ.೩೦ರಷ್ಟು ರಿಯಾಯಿತಿಯನ್ನು ನೀಡಲಾಗುತ್ತಿದೆ. ಇಲ್ಲಿ ಬರುವ ಲಾಭಾಶದ ಹಣವನ್ನು ಮಾಗಡಿ ರಸ್ತೆಯ ಪುಣ್ಯಕೋಟಿ ಗೋಶಾಲೆ ನಡೆಸಲು ವಿನಿಯೋಗಿಸಲಾಗುವುದು.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed