ಸಕುಟುಂಬಸಮೇತ ಮದುವೆ ಸಿದ್ಷತೆಯ ಸುಂದರ ಚಿತ್ರಣ -4/5 ****
Posted date: 22 Sun, May 2022 � 01:58:10 PM
ಯಾವುದೇ ಆಡಂಬರವಿಲ್ಲದ, ಪಂಚಿಂಗ್ ಡೈಲಾಗ್, ಹೀರೋ ಬಿಲ್ಡಪ್, ಭರ್ಜರಿ  ಸಾಹಸ ಇದಾವುದರ ಛಾಯೆಯೂ  ಇಲ್ಲದೆ  ಹಿತವಾದ ಅನುಭವ ನೀಡುವ  ಸಿನಿಮಾ ಸಕುಟುಂಬಸಮೇತ. 
   
ಮಧ್ಯಮ ವರ್ಗದ ಕುಟುಂಬದ ಯುವಕ,  ಸ್ಥಿತಿವಂತ  ಫ್ಯಾಮಿಲಿ ಯುವತಿಯ ಮದುವೆ  ಮಾತುಕತೆಯಿಂದಲೇ ಚಿತ್ರ ಆರಂಭವಾಗುತ್ತದೆ.  ಅತ್ಯಂತ ಸರಳವಾಗಿ  ಕಥೆಯನ್ನು ಹೇಳುತ್ತ ಹೋಗಿರುವ ನಿರ್ದೇಶಕರು ಕಥೆಯಲ್ಲಿ ಬರುವ ವಿಷಯಕ್ಕೆ ತಕ್ಕಂತೆ   
ಪಾತ್ರಗಳ ಭಾವವನ್ನು  ಬದಲಾಯಿಸುತ್ತ ಸಂಕೀರ್ಣವಾಗಿ  ಕಥೆಯನ್ನು ನಿರೂಪಿಸಿದ್ದಾರೆ.
 
ಪ್ರತಿ  ಪಾತ್ರಗಳೂ ಒಂದೊಂದು ಪ್ರಶ್ನೆಯನ್ನು ಕೇಳುತ್ತ ಹೋಗಿ ಅಂತಿಮವಾಗಿ ಸಣ್ಣದೊಂದು ಜ್ಞಾನೋದಯವನ್ನು ಮೂಡಿಸುತ್ತವೆ.  ಪಾತ್ರ ಮತ್ತು ಸಂದರ್ಭಗಳ‌ ಮೂಲಕವೇ ನಿರ್ದೇಶಕರು  ಇಡೀ ಕಥೆಯನ್ನು  ತೆರೆಮೇಲೆ ತಂದಿದ್ದಾರೆ. ಪಾತ್ರಗಳನ್ನು 
ಅನುಭವಿಸುತ್ತ ನೋಡಿ ಆಸ್ವಾದಿಸುವ ಸಿನಿಮಾವಿದು.
 
ಚಿತ್ರದ ನಿರ್ದೇಶಕ ರಾಹುಲ್‌, ಸಂಗೀತ ನಿರ್ದೇಶಕ ಮಿಥುನ್‌ ಮುಕುಂದನ್‌  ಬೇರೆಯದೇ ಆದ ಕಲಾಕೃತಿಯೊಂದನ್ನು ತೆರೆದಿಟ್ಟಿದ್ದಾರೆ. 
ಮುಂದಿಟ್ಟಿದ್ದಾರೆ. ಇಲ್ಲಿನ   ಪ್ರತೀ ಪಾತ್ರವೂ ಅಭಿನಂನಾರ್ಹ.  ನಿಟ್ಟುಸಿರನ್ನು ಅರ್ಥ ಮಾಡಿಕೊಳ್ಳಬಲ್ಲವರು, ಕಾಡಿನ ಮೌನವನ್ನು ಆಸ್ವಾದಿಸಬಲ್ಲವರು ಈ ಸಿನಿಮಾವನ್ನು ಬಹುವಾಗಿ ಇಷ್ಟಪಡುತ್ತಾರೆ. ಒಂದು ಮದುವೆ ಸಿದ್ದತೆಯ ಸುಂದರ ಚಿತ್ರಣವೇ ಸಕುಟುಂಬಸಮೇತ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed