ಸಂಕ್ರಾಂತಿಗೆ ಶೋಕ್ದಾರ್ ಹೊಸ ಸಿನಿಮಾ ಅನೌನ್ಸ್....`ವಾಮನ` ಅವತಾರದಲ್ಲಿ ಬಜಾರ್ ಹುಡ್ಗ ಧನ್ವೀರ್
Posted date: 15 Sat, Jan 2022 05:48:38 PM
ಬಜಾರ್ ಹೀರೋ ಶೋಕ್ದಾರ್ ಧನ್ವೀರ್ ಗೌಡ ನಟನೆಯ ಮೂರನೇ ಸಿನಿಮಾ ಅನೌನ್ಸ್ ಆಗಿದೆ. ಬಜಾರ್‌ ಸಿನಿಮಾ ಮೂಲಕ ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಧ್ವನೀರ್,‌ ಮೊದಲ ಸಿನಿಮಾದಲ್ಲಿಯೇ ಸಕ್ಸಸ್ ಸಿಕ್ಸರ್ ಬಾರಿಸಿದಾಗಿದೆ. ಸದ್ಯ ಬೈ ಟು ಲವ್ ಗೆ ಎದುರು ನೋಡುತ್ತಿರುವ ಧ್ವನೀರ್ ಮೂರನೇ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಆಗಿದೆ.
`ವಾಮನ` ನ ಅವತಾರದಲ್ಲಿ ಶೋಕ್ದಾರ್  ಸಂಕ್ರಾಂತಿ ಹಬ್ಬದ ಪ್ರಯುಕ್ತ ಧನ್ವೀರ್ ಗೌಡ ನಟಿಸ್ತಿರುವ ಮೂರನೇ ಸಿನಿಮಾದ ಟೈಟಲ್ ಅನಾವರಣಗೊಂಡಿದೆ. ವಾಮನ ಎಂದು ಸಿನಿಮಾಗೆ ಶೀರ್ಷಿಕೆ ಫಿಕ್ಸ್ ಆಗಿದ್ದು, ಜೊತೆಗೆ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಕೈಯಲ್ಲಿ ಚಾಕು ಹಿಡಿದು ಖಡಕ್ ಲುಕ್ ನಲ್ಲಿ ಧನ್ವೀರ್ ಮಿಂಚಿದ್ದಾರೆ.

ಕನ್ನಡ ಮತ್ತು ತೆಲುಗು ಚಿತ್ರಗಳಿಗೆ ಸ್ಕ್ರಿಪ್ಟ್ ರೈಟರ್ ಆಗಿರುವ ಶಂಕರ್ ರಾಮನ್ ಈಗ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ತಮ್ಮ ಸಿನಿಮಾ ಬದುಕಿನ 13 ವರ್ಷದ ಅನುಭವವನ್ನೂ ಈ ಸಿನಿಮಾಗೆ ಧಾರೆ ಎರೆಯುತ್ತಿರುವ ಶಂಕರ್ ರಾಮನ್, ಮಾಫಿಯಾ ಲೋಕದ ಕಥೆ ಜೊತೆ ಆಕ್ಷನ್ ಎಂಟರ್ ಟ್ರೈನರ್ ವಾಮನ ಸಿನಿಮಾವನ್ನು ಧನ್ವೀರ್ ಗೆ ಸಿದ್ಧಪಡಿಸಿದ್ದಾರೆ.
 
ಈಕ್ವಿನಾಕ್ಸ್ ಗ್ಲೋಬಲ್ ಎಂಟರ್ಟೈನ್ಮೆಂಟ್ಸ್ ಪ್ರೊಡಕ್ಷನ್ ನಡಿ ಧನ್ವೀರ್ ಮೂರನೇ ಸಿನಿಮಾಗೆ ಚೇತನ್ ಕುಮಾರ್ ಗೌಡ ಬಂಡವಾಳ‌ ಹೂಡಲಿದ್ದು,  ಸಂಕ್ರಾಂತಿ ಹಬ್ಬದ ಪ್ರಯುಕ್ತ ವಾಮನ ಸಿನಿಮಾದ ಟೈಟಲ್ ಹಾಗೂ ಫಸ್ಟ್ ಲುಕ್ ಅನಾವರಣಗೊಂಡಿದೆ.

 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed