ಅಭಿಮಾನಿಗಳಿಗೆ ಉಡುಗೊರೆ ನೀಡಿ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಕಿರಣ್ ರಾಜ್
Posted date: 05 Tue, Jul 2022 09:37:55 AM
ಸೆಲೆಬ್ರಿಟಿಗಳ ಹುಟ್ಟುಹಬ್ಬಕ್ಕೆ ಸಾಮಾನ್ಯವಾಗಿ ಅವರ ಅಭಿಮಾನಿಗಳು ಉಡುಗೊರೆ ನೀಡುವುದು ಸಾಮಾನ್ಯ. ಆದರೆ ಇಲ್ಲಿ ತಮ್ಮ ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಉಡುಗೊರೆ ನೀಡುವ ಮೂಲಕ ವಿಭಿನ್ನ ರೀತಿಯಲ್ಲಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳತ್ತಿದ್ದಾರೆ ನಟ ಕಿರಣ್ ರಾಜ್.

ಜುಲೈ 5 ನನ್ನ  ಹುಟ್ಟುಹಬ್ಬ. ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ನೂರು ದಿನಗಳಿಂದ ಸಾಕಷ್ಟು ಜನ  ಅಭಿಮಾನಿಗಳು ಸಿ.ಡಿಪಿ(ಕಾಮನ್ ಡಿಪಿ) ಹಾಕಿಕೊಳ್ಳುವ ಮೂಲಕ ನನಗೆ ವಿಶೇಷವಾಗಿ ವಿಶ್ ಮಾಡುತ್ತಾ ಬಂದಿದ್ದಾರೆ. ಅಂತಹ ಅಭಿಮಾನಿಗಳನ್ನು ಗುರುತಿಸಿ ನಾನೇ ಅವರಿಗೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆ ನೀಡಲಿದ್ದೇನೆ ಎನ್ನುತ್ತಾರೆ ಕಿರಣ್ ರಾಜ್. 

ಅಷ್ಟೇ ಅಲ್ಲದೇ ಕರ್ನಾಟಕದ ವಿವಿಧ ಊರುಗಳಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮ ಗಳಲ್ಲಿ ಅನ್ನದಾನ, ಬ್ಲಾಂಕೆಟ್‌ ವಿತರಣೆ ಮುಂತಾದ ಉತ್ತಮ ಕಾರ್ಯಗಳನ್ನು ಕಿರಣ್ ರಾಜ್, ತಮ್ಮ ಜನ್ಮದಿನದ ಸಂದರ್ಭದಲ್ಲಿ ನಡೆಸಲಿದ್ದಾರೆ.

 ತಾವು ನಾಯಕರಾಗಿ ನಟಿಸಿರುವ "ಬಡ್ಡೀಸ್" ಚಿತ್ರಕ್ಕೆ ದೊರಕುತ್ತಿರುವ ಪ್ರಶಂಸೆಗೆ ಕಿರಣ್ ರಾಜ್ ಸಂತಸಪಟ್ಟಿದ್ದಾರೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed