ಗೌರಿಹಬ್ಬದಂದು ಬಿಡುಗಡೆ ಆಯ್ತು ``ಲಂಕಾಸುರ`` ನ ಸ್ಪೆಶಲ್ ಹಾಡು
Posted date: 31 Wed, Aug 2022 05:51:39 PM
ನಾಡಿನಲ್ಲೆಡೆ ಗೌರಿ - ಗಣೇಶ ಹಬ್ಬದ ಸಂಭ್ರಮ. ಈ ಶುಭ ಸಂದರ್ಭದಲ್ಲಿ ಟೈಗರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ "ಲಂಕಾಸುರ" ಚಿತ್ರದ ಹಾಡೊಂದು ಬಿಡುಗಡೆಯಾಗಿದೆ.

ಚೇತನ್ ಕುಮಾರ್ ಬರೆದಿರುವ "ಲಕ್ ಲಕ್ ಲಕ್ಕು ಪದುಮಿ. ಒಂಚುರು ಪ್ಲೀಸು ಟಚುಮಿ" ಎಂಬ ಹಾಡು ಗೌರಿ ಹಬ್ಬದ ಶುಭ ಸಂದರ್ಭ ದಲ್ಲಿ ಬಿಡುಗಡೆಯಾಗಿದೆ. ವಿಜೇತ್ ಕೃಷ್ಣ ಸಂಗೀತ ನೀಡಿದ್ದಾರೆ. ಸಹನ ಗೌಡ ನರ್ತಿಸಿರುವ ಈ ಹಾಡಿಗೆ ಭಜರಂಗಿ ಮೋಹನ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಇಂದು ನಾಗರಾಜ್ ಇಂಪಾಗಿ ಹಾಡಿದ್ದಾರೆ.  ಈ ಹಿಂದೆ ಬಿಡುಗಡೆಯಾಗಿದ್ದ "ಲಂಕಾಸುರ" ಚಿತ್ರದ ಟೈಟಲ್ ಸಾಂಗ್ ಸಹ ಅಪಾರ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಈಗ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.

ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿರುವ ಈ ಚಿತ್ರವನ್ನು ನಿಶಾ ವಿನೋದ್ ಪ್ರಭಾಕರ್ ನಿರ್ಮಾಣ ಮಾಡುತ್ತಿದ್ದಾರೆ. ಪ್ರಮೋದ್ ಕುಮಾರ್ ಈ ಚಿತ್ರದ ನಿರ್ದೇಶಕರು.
ಸುಜ್ಞಾನ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed