ಕಾಲ್ಗೆಜ್ಜೆಗೆ ರೀರೆಕಾರ್ಡಿಂಗ್
Posted date: 14/April/2010

ಬ್ರೈಟ್ ಎಂಟರ್‌ಟೈನ್‌ಮೆಂಟ್ ಲಾಂಛನದಲ್ಲಿ ಎಂ. ನಾಗಭೂಷಣ ನಿರ್ಮಿಸುತ್ತಿರುವ ಸಂಗೀತ ಪ್ರಧಾನ ಚಿತ್ರ ಕಾಲ್ಗೆಜ್ಜೆ ವಿಶ್ವಾಸ-ರೂಪಿಕಾ ನಾಯಕ ನಾಯಕಿ ಪಾತ್ರದಲ್ಲಿ ಅಬಿನಯಿಸಿರುವ ಈ ಚಿತ್ರದ ಚಿತ್ರೀಕರಣ ಹಾಗೂ ಎಡಿಟಿಂಗ್, ಡಬ್ಬಿಂಗ್ ಕಾರ್ಯ ಸಂಪೂರ್ಣಗೊಂಡಿದ್ದು, ಇದೇ ಶುಕ್ರವಾರದಿಂದ ಪ್ರಸಾದ್ ಸ್ಟುಡಿಯೋದಲ್ಲಿ ಚಿತ್ರದ ರೀರೆಕಾರ್ಡಿಂಗ್ ಕಾರ್ಯ ಪ್ರಾರಂಭವಾಗಲಿದೆ. ಪ್ರಕೃತಿಯ ವರದಾನವೆನಿಸಿಕೊಂಡಿರುವ ಮುಳ್ಳಯ್ಯನ ಗಿರಿ, ಮೇಲುಕೋಟೆ, ಶ್ರೀರಂಗಪಟ್ಟಣ, ಕೆಮ್ಮಣ್ಣುಗುಂಡಿ ಮೊದಲಾದ ಕಡೆ ಈ ಚಿತ್ರದ ಶೂಟಿಂಗ್ ಮಾಡಲಾಗಿದ್ದು, ಒಂದು ಉತ್ತಮ ಚಿತ್ರ ಮಾಡಬೇಕೆಂಬ ಕನಸು ಹೊತ್ತಿದ್ದ ಬಂಗಾರು ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ.

ಟಿ.ಎಸ್. ನಾಗಾಭರಣ, ಎಸ್. ಮಹೇಂದರ್, ವಿ. ಮನೋಹರ ರಂಥ ಮೇಧಾವಿಗಳು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ವೀನಸ್ ಮೂರ್ತಿ ಛಾಯಾಗ್ರಹಣ, ಗಂಧರ್ವರ ಸಾಹಿತ್ಯ-ಸಂಗೀತ ಕೂಡ ಇದೆ. ಸಂಗೀತ ಪ್ರೇಮಿ, ವಯಲಿನ್ ನುಡಿಸುವ ನಾಯಕ ಹಾಗೂ ಕ್ಲಾಸಿಕಲ್ ಡ್ಯಾನ್ಸರ್‌ಆದ ನಾಯಕಿ ಇವರಿಬ್ಬರ ನಿಷ್ಕಲ್ಮಶ ಪ್ರೇಮಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ ನಟ ಶ್ರೀಧರ್, ನೀನಾಸಂ ಅಶ್ವಥ್, ಅನಂತನಾಗ್, ಸುಮಿತ್ರ, ರಂಗಾಯಣರಘು, ತಬಲಾನಾಣಿ, ಮೊದಲಾದ ಕಲಾವಿದರ ಅಭಿನಯವಿದೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed