ಕೆಂಪುಸೀರೆಯಲ್ಲಿ ಹಾರರ್ ಕಥೆ
Posted date: 19 Tue, Jul 2022 10:58:41 AM
ತಾಯಿ ಮಗಳ ಸಂಬಂಧದ ಸುತ್ತ ನಡೆಯುವ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರವೊಂದು ಬಿಡುಗಡೆಗೆ ಸಿದ್ದವಾಗಿದೆ.  ಕೆಂಪುಸೀರೆ ಎಂಬ ಕುತೂಹಲಕರ ಶೀರ್ಷಿಕೆ ಹೊಂದಿರುವ ಈ ಚಿತ್ರಕ್ಕೆ  ಸುಮನ್ ಬಾಬು  ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸುಮನ್ ವೆಂಕಟಾದ್ರಿ ಪ್ರೊಡಕ್ಷನ್ ಮೂಲಕ ಸುಮನ್ ಬಾಬು ಅವರೇ ನಿರ್ಮಾಣ ಸಹ ಮಾಡಿದ್ದಾರೆ. ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿದಂತೆ 4 ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಕೆಂಪುಸೀರೆಯೊಂದು ಪ್ರಮುಖ ಪಾತ್ರ ವಹಿಸುತ್ತದೆ. 
 
ತನ್ನ ಮಗಳ ಮೇಲೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ತಾಯಿ ಕೆಂಪು ಸೀರೆ ಉಟ್ಟುಕೊಂಡಿದ್ದಾಗಲೇ ಕೊಲೆಯಾಗುತ್ತಾಳೆ. ತಾಯಿಯ ನಂತರ ಆಕೆಯ ಮಗಳನ್ನೂ ಹಂತಕರು ಸಾಯಿಸುತ್ತಾರೆ. ಆನಂತರ ಮಗಳ ಆತ್ಮ ಕೆಂಪು ಸೀರೆ ಉಟ್ಟಿದ್ದ ತನ್ನ ತಾಯಿಯ ಆತ್ಮವನ್ನು ಹುಡುಕುತ್ತಿರುತ್ತದೆ. ಹೀಗೆ ಹಾರರ್ ಹಿನ್ನೆಲೆಯಲ್ಲಿ ನಡೆಯುವ ಸೆಂಟಿಮೆಂಟ್ ಕಥೆಯನ್ನು ನಿರ್ದೇಶಕರು ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ವಿಶೇಷವಾಗಿ ಈ ಚಿತ್ರದಲ್ಲಿ ೩೦ ನಿಮಿಷಗಳ ಗ್ರಾಫಿಕ್ಸ್ ಬಳಸಿಕೊಂಡು ಕೆಂಪುಸೀರೆ, ಅಘೋರಿ ಪಾತ್ರಗಳಿಗೆ ಬಳಸಿಕೊಳ್ಳಲಾಗಿದೆ. ದಸರಾ ಹಬ್ಬದ ವೇಳೆಗೆ ಈ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ. 
 
ಅಘೋರಿಯಾಗಿ  ಸಾಯಿಕುಮಾರ್ ತಮ್ಮ ಅಯ್ಯಪ್ಪ ಶರ್ಮ ಅಭಿನಯಿಸಿದ್ದಾರೆ. ಉಳಿದ ಪಾತ್ರಗಳಲ್ಲಿ ಸುಮನ್ ಬಾಬು,  ಕಾರುಣ್ಯ ಚೌದರಿ, ಸಂಜನಶೆಟ್ಟಿ, ಆಲಿ, ಶ್ರೀಕಾಂತ್ (ಶ್ರೀರಾಮ್), ಅಜಯ್, ಜೀವಾ, ಬೇಬು ಸಾಯಿ ತೇಜಸ್ವಿನಿ ನಟಿಸಿದ್ದಾರೆ. ಚಿತ್ರದ ೪ ಹಾಡುಗಳಿಗೆ ಪ್ರಮೋದ್ ಸಂಗೀತ ನೀಡಿದ್ದಾರೆ, ಚಿನ್ನು ಅವರ ಹಿನ್ನೆಲೆ ಸಂಗೀತ, ಚಂದ್ರು ಅವರ ಛಾಯಾಗ್ರಹಣ, ಸಂಗೋಪಿ ವಿಮಲ ಅವರ ಸಂಭಾಷಣೆ, ಅಜಯ್ ಶಿವಶಂಕರ್ ಅಕುಲ್ ಅವರ ನೃತ್ಯ, ವೆಂಕಟಪ್ರಭು ಅವರ ಸಂಕಲನ ಈ ಚಿತ್ರಕ್ಕಿದೆ.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed