ಶಾಲೆಶಾಲೆಗಳಲ್ಲಿ ಅಪ್ಪು-ಪಪ್ಪು
Posted date: 16/June/2010

ಅಪ್ಪು ಪಪ್ಪು ನಿರ್ಮಾಪಕ ಸೌಂದರ್ಯ ಜಗದೀಶ್ ಚಿತ್ರದ ಪ್ರಚಾರಕ್ಕಾಗಿ ಹೊಸ ಯೋಜನೆಯನ್ನು ಕೈಗೊಂಡಿದ್ದಾರೆ.  ಮಾಸ್ಟರ್ ಸ್ನೇಹಿತ್ ಹಾಗೂ ಕಾಂಬೋಡಿಯಾದ ಒರಾಂಗಟನ್ ಎಂಬ ಚಿಂಪಾಂಜಿಯ ಸಾಹಸದ ಕಥೆ ಹೊಂದಿರುವ ಅಪ್ಪು - ಪಪ್ಪು ಚಿತ್ರದ ಡಬ್ಬಿಂಗ್, ರೀ ರೆಕಾರ್ಡಿಂಗ್ ಹಾಗೂ ಡಿ.ಟಿ.ಎಸ್. ಕಾರ್ಯ ಪೂರ್ಣಗೊಂಡಿದ್ದು, ವಾರಾಂತ್ಯದಲ್ಲಿ ಚಿತ್ರದ ಪ್ರಥಮ ಪ್ರತಿ ಕೂಡ ಹೊರ ಬರಲಿದೆ. ಈಗ ಮಕ್ಕಳಿಗೆ ಶಾಲೆ ಪ್ರಾರಂಭವಾಗಿದ್ದು, ರಾಜ್ಯಾದ್ಯಂತ ಪ್ರತಿ ಶಾಲೆಗಳಿಗೂ ತೆರಳಿ ಅಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಪುಸ್ತಕದ ಮೇಲೆ ಹಚ್ಚುವ ಲೇಬಲ್‌ಗಳನ್ನು ಉಚಿತವಾಗಿ ಹಂಚಿದ್ದಾರೆ. ಅಲ್ಲದೆ, ಬಡ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಕೂಡ ವಿತರಿಸಿದ್ದಾರೆ. ಇದರಿಂದ, ಮಕ್ಕಳಿಗೆ ಸಹಾಯ ಮಾಡುವುದರ ಜೊತೆಗೆ ಚಿತ್ರದ ಪ್ರಚಾರಕ್ಕೂ ಒಂದು ರೀತಿ ಸಹಕಾರಿಯಾಗಲಿದೆ. ಮತ್ತೊಂದು ವಿಶೇಷವೇನೆಂದರೆ, ರಾಷ್ಟ್ರದ ಹೆಸರಾಂತ ಗಾಯಕರೊಬ್ಬರು ಈ ಚಿತ್ರಕ್ಕೆ ಒಂದು ಹಾಡನ್ನು ಹಾಡಲಿದ್ದಾರೆ. ಹಾಡಿನ ಚಿತ್ರೀಕರಣ ಕೂಡ ಮುಗಿದಿದ್ದು, ರೀ ರೆಕಾರ್ಡಿಂಗ್ ನಂತರ ಅದನ್ನು ಚಿತ್ರಕ್ಕೆ ಅಳವಡಿಸಲಾಗುವುದು. ಆಗಾಯಕಿ ಯಾರೆಂಬುದನ್ನು ನಿರ್ಮಾಪಕ ಸೌಂದರ್ಯ ಜಗದೀಶ್ ಇನ್ನೂ ಸಸ್ಪೆನ್ಸ್ ಆಗಿಯೇ ಇಟ್ಟಿದ್ದಾರೆ. ಆರ್. ಅನಂತರಾಜು ಕಥೆ ಚಿತ್ರಕಥೆ - ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದು, ಹಂಸಲೇಖರ ಸಾಹಿತ್ಯ-ಸಂಗೀತ, ಎಸ್. ಕೃಷ್ಣರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಕೋಮಲ್ ಅಬ್ಬಾಸ್, ರೇಖಾ, ರಂಗಾಯಣ ರಘು, ಜನೀಫರ್ ಪ್ರಮುಖ ತಾರಾಗಣದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed